ಬೆಂಗಳೂರಿನ ವಿಧಾನಸೌಧ ಆವರಣದ ಹುಲ್ಲುಹಾಸಿನ ನಡುವೆ ಇರುವ ಸಣ್ಣ ಹಳ್ಳದಲ್ಲಿದ್ದ ನೀರಿನಿಂದ ಬಾಯಾರಿಕೆ ನೀಗಿಸಿಕೊಳ್ಳುತ್ತಿರುವ ಪಕ್ಷಿಗಳು. 
ರಾಜ್ಯ

ನಗರದಲ್ಲಿ ರಣಬಿಸಿಲು: ದಾಹದಿಂದ ಬಳಲುತ್ತಿರುವ ಪ್ರಾಣಿ-ಪಕ್ಷಿಗಳ ರಕ್ಷಣೆಗೆ ಅರಣ್ಯ ಇಲಾಖೆ ಮುಂದು; Operation Quench Thirst ಆರಂಭ

ಸ್ವಯಂಸೇವಾ ಸಂಸ್ಥೆ People for Animals ಮತ್ತು ಕರ್ನಾಟಕ ಅರಣ್ಯ ಇಲಾಖೆ ಕೈಜೋಡಿಸಿ ತುರುಹಳ್ಳಿ ಅರಣ್ಯ ಪ್ರದೇಶದಲ್ಲಿ ಈ ಅಭಿಯಾನವನ್ನು ಜಾರಿಗೆ ತಂದಿವೆ. ಈ ಯೋಜನೆಯ ಉದ್ದೇಶ ವನ್ಯಜೀವಿಗಳಿಗೆ ನೀರಿನ ಲಭ್ಯತೆ ಹೆಚ್ಚಿಸುವುದಾಗಿದೆ.

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಸಲ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬಿಸಿಲಿನಿಂದ ಮನುಷ್ಯರಷ್ಟೇ ಅಲ್ಲದೆ, ಪ್ರಾಣಿ ಪಕ್ಷಿಗಳೂ ಕೂಡ ಹೈರಾಣಾಗುತ್ತಿವೆ. ದಾಹದಿಂದ ಪ್ರಾಣಿ-ಪಕ್ಷಿಗಳು ಸಂಕಷ್ಟಕ್ಕೆ ಸಿಲುಕ್ಕಿರುವ ಹಿನ್ನೆಲೆಯಲ್ಲಿ ರಕ್ಷಣೆಗೆ ಮುಂದಾಗಿರುವ ಅರಣ್ಯ ಇಲಾಖೆ ಆಪರೇಷನ್ ಕ್ವೆಂಚ್ ಥರ್ಸ್ಟ್” ಎಂಬ ವಿಶೇಷ ಅಭಿಯಾನವನ್ನು ಆರಂಭಿಸಿದೆ.

ಸ್ವಯಂಸೇವಾ ಸಂಸ್ಥೆ People for Animals ಮತ್ತು ಕರ್ನಾಟಕ ಅರಣ್ಯ ಇಲಾಖೆ ಕೈಜೋಡಿಸಿ ತುರುಹಳ್ಳಿ ಅರಣ್ಯ ಪ್ರದೇಶದಲ್ಲಿ ಈ ಅಭಿಯಾನವನ್ನು ಜಾರಿಗೆ ತಂದಿವೆ. ಈ ಯೋಜನೆಯ ಉದ್ದೇಶ ವನ್ಯಜೀವಿಗಳಿಗೆ ನೀರಿನ ಲಭ್ಯತೆ ಹೆಚ್ಚಿಸುವುದಾಗಿದೆ.

ತೀವ್ರ ಬಿಸಿಲಿನಿಂದಾಗಿ ಪಕ್ಷಿಗಳು ಮತ್ತು ಪ್ರಾಣಿಗಳು ನೀರಿಲ್ಲದೆ ಕುಸಿದು ಬೀಳುತ್ತಿರುವ ಘಟನೆಗಳು ಹೆಚ್ಚಾಗಿವೆ. ಪಿಎಫ್‌ಎ ಕಾರ್ಯಕರ್ತರು ಪ್ರತಿದಿನ 5 ರಿಂದ 7 ರಕ್ಷಣೆ ಕರೆಗಳನ್ನು ಸ್ವೀಕರಿಸುತ್ತಿದ್ದು, ಪರಿಸ್ಥಿತಿ ಗಂಭೀರವಾಗುತ್ತಿದೆ ಎಂದು ತಿಳಿಸಿದ್ದಾರೆ.

2025ರಲ್ಲಿ ಪಿಎಫ್‌ಎ ಸಂಸ್ಥೆ ಹಲವಾರು ಪ್ರಾಣಿಗಳನ್ನು ರಕ್ಷಿಸಿದೆ. ಇದರಲ್ಲಿ 153 ಕಪ್ಪು ಗಿಡುಗ, 33 ಗೂಬೆ, 12 ಗಿಳಿ, 10 ಕಾಗೆ, ಐದು ಕೋಗಿಲೆ, 4 ಹಾವು, 2 ನವಿಲು, ಮೂರು ಅಳಿಲು ಮತ್ತು ಒಂದು ನರಿಯನ್ನು ರಕ್ಷಣೆ ಮಾಡಲಾಗಿದೆ.

"ಪಕ್ಷಿಗಳಲ್ಲದೆ, ಏಳು ಜಿಂಕೆಗಳನ್ನು ಅರಣ್ಯದ ಗಡಿ ಪ್ರದೇಶಗಳಲ್ಲಿ ರಕ್ಷಣೆ ಮಾಡಲಾಗಿದೆ. ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಜಿಂಕೆಗಳು ಕಾಡಿನಿಂದ ಹೊರಬಂದು ರಸ್ತೆ ಅಪಘಾತಗಳಿಗೆ ಒಳಗಾಗುತ್ತಿವೆ ಅಥವಾ ಬೀದಿ ನಾಯಿಗಳ ದಾಳಿಗೆ ಗುರಿಯಾಗುತ್ತಿವೆ. ಬೇಸಿಗೆ ಸಮಯದಲ್ಲಿ ಈ ಪ್ರಕರಣ ಸಂಖ್ಯೆ ಹೆಚ್ಚಾಗುತ್ತದೆ ಎಂದು ಎನ್‌ಜಿಒದ ಮುಖ್ಯ ವನ್ಯಜೀವಿ ಪಶುವೈದ್ಯ ಕರ್ನಲ್ ಡಾ. ನವಾಜ್ ಷರೀಫ್ ಅವರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ತುರಹಳ್ಳಿ ಹಾಗೂ ಕೆ.ಬಿ. ಕಾವಲ್ ಅರಣ್ಯ ಪ್ರದೇಶಗಳಲ್ಲಿ ನೀರಿನ ಟ್ಯಾಂಕರ್‌ಗಳ ಮೂಲಕ ಪ್ರತಿದಿನ ನೀರು ತುಂಬುವ ಕಾರ್ಯ ನಡೆಸಲಾಗುತ್ತಿದೆ. ಅಲ್ಲದೆ, ಹಲವು ಕಡೆ ನೀರಿನ ತೊಟ್ಟಿಗಳನ್ನು (water troughs) ಸ್ಥಾಪಿಸಲಾಗಿದ್ದು, ವನ್ಯಜೀವಿಗಳಿಗೆ ಸಹಜ ವಾತಾವರಣದಲ್ಲೇ ನೀರು ದೊರಕುವಂತೆ ವ್ಯವಸ್ಥೆ ಮಾಡಲಾಗಿದೆ.

ಈ ಅರಣ್ಯ ಪ್ರದೇಶಗಳಲ್ಲಿ ಚಿರತೆಗಳು, ಜಿಂಕೆಗಳು, ಕಾಡುಹಂದಿಗಳು, ನರಿ, ಮುಂಗುಸಿ, ಮೊಲಗಳು ಹಾಗೂ ನವಿಲುಗಳಂತಹ ವಿವಿಧ ಪ್ರಾಣಿಗಳು ವಾಸಿಸುತ್ತಿದ್ದು, ಈ ಅಭಿಯಾನವು ಅವುಗಳ ಜೀವ ಉಳಿಸಲು ಮಹತ್ವದ ಪಾತ್ರವಹಿಸುತ್ತಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪೆಟ್ರೋಲಿಯಂ ಉತ್ಪನ್ನಗಳ ಮಿತಬಳಕೆ "ಈಗಿನ ಅಗತ್ಯ"-ಪ್ರಧಾನಿ ಮೋದಿ: ಮುಂದೆ ಕಾದಿದೆಯಾ ಸಂಕಷ್ಟದ ದಿನಗಳು?

ಚುನಾವಣೆಗೂ ಮುನ್ನ ಯೋಗಿ ಸರ್ಕಾರದಲ್ಲಿ ಮಹತ್ತರ ಬದಲಾವಣೆ: ಸಂಪುಟ ಪುನಾರಚನೆ; 6 ಹೊಸ ಸಚಿವರ ಸೇರ್ಪಡೆ

ಅತ್ತ ವಿಜಯ್ ಪದಗ್ರಹಣ, ಇತ್ತ ಚಂದ್ರಬಾಬು ನಾಯ್ಡು, Pawan Kalyan ಮನೆಗೆ ಪ್ರಧಾನಿ ಮೋದಿ ದಿಢೀರ್ ಭೇಟಿ: ರಾಜಕೀಯ ವಲಯದಲ್ಲಿ ಸಂಚಲನ!

IPL 2026: ನಿರ್ಣಾಯಕ ಪಂದ್ಯದಲ್ಲಿ ಲಖನೌ ವಿರುದ್ಧ ಗೆದ್ದ CSK; ಪ್ಲೇ ಆಫ್ ಕನಸು ಜೀವಂತ!

IPL 2026, RCB vs MI: MS Dhoni ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಜೋಡಿ

SCROLL FOR NEXT