ಸಾಂದರ್ಭಿಕ ಚಿತ್ರ 
ರಾಜ್ಯ

ಕರ್ನಾಟಕ ಸಾಹಿತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿಗಳು ಪ್ರಕಟ

ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿಗಳನ್ನು ಪ್ರಕಟಿಸಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅವರು, ಐದು ಹಿರಿಯ ಲೇಖಕರನ್ನು ವರ್ಷದ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಬುಧವಾರ 2024ರ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಇದರಲ್ಲಿ ಕನ್ನಡ ಸಾಹಿತ್ಯಕ್ಕೆ ಜೀವಮಾನದ ಸಾಧನೆಗಾಗಿ ಗೌರವ ಪ್ರಶಸ್ತಿ ಮತ್ತು 2025ರ ಸಾಹಿತ್ಯಶ್ರೀ ಪ್ರಶಸ್ತಿಗಳು ಸೇರಿವೆ.

ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿಗಳನ್ನು ಪ್ರಕಟಿಸಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅವರು, ಐದು ಹಿರಿಯ ಲೇಖಕರನ್ನು ವರ್ಷದ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದು 50,000 ರೂ. ನಗದು ಬಹುಮಾನ, ಫಲಕ, ಶಾಲು, ಹಾರ ಒಳಗೊಂಡಿದೆ ಎಂದರು.

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನ ಪರಿಗಣಿಸಿ ನೀಡಲಾಗುವ 2025ನೇ ಸಾಲಿನ "ಕರ್ನಾಟಕ ಸಾಹಿತ್ಯ ಅಕಾಡೆಮಿ ವರ್ಷದ ಗೌರವ ಪ್ರಶಸ್ತಿ"ಗೆ ಪ್ರೊ.ಶಿವರಾಮಯ್ಯ, ಚಂದ್ರಶೇಖರ ತಾಳ್ಯ, ಡಾ.ಚಂದ್ರಶೇಖರ ಪೋಕಳೆ, ಡಾ.ವಸುಂಧರಾ ಭೂಪತಿ ಹಾಗೂ ಡಾ. ಎಸ್. ತುಕಾರಾಂ ಅವರು ಭಾಜನರಾಗಿದ್ದಾರೆ.

50ರಿಂದ 60 ವರ್ಷ ವಯೋಮಾನದ ಸಾಹಿತಿಗಳಿಗೆ ಕೊಡಮಾಡಲಾಗುವ "ಸಾಹಿತ್ಯ ಶ್ರೀ" ಪ್ರಶಸ್ತಿಗೆ ಕಂಕನಾಡಿ ನಾರಾಯಣ, ಡಾ. ನಿಷ್ಠಿ ರುದ್ರಪ್ಪ, ಡಾ. ವೀರೇಶ ಬಡಿಗೇರ, ಡಾ. ಸಿ.ಜಿ. ಲಕ್ಷ್ಮೀಪತಿ, ರೂಪ ಹಾಸನ, ಜಯರಾಮ್ ರಾಯಪುರ, ಕುಮುದಾ ಸುಶೀಲ್, ಡಾ. ಓ.ನಾಗರಾಜು ಸೇರಿದಂತೆ 10 ಮಂದಿ ಭಾಜನರಾಗಿದ್ದಾರೆ ಎಂದು ಮುಕುಂದರಾಜ್ ಅವರು ತಿಳಿಸಿದರು.

2024ರಲ್ಲಿ ಪ್ರಕಟಗೊಂಡಿರುವ 17 ವಿವಿಧ ಸಾಹಿತ್ಯ ಪ್ರಕಾರದ ಕೃತಿಗಳಿಗೆ "2024ನೇ ಸಾಲಿನ ವರ್ಷದ ಪುಸ್ತಕ ಬಹುಮಾನ" ಗೌರವ ಲಭಿಸಿದೆ.

ವರ್ಷದ ಗೌರವ ಪ್ರಶಸ್ತಿ 50 ಸಾವಿರ ರೂ., ಸಾಹಿತ್ಯಶ್ರೀ ಪ್ರಶಸ್ತಿಗೆ 25 ಸಾವಿರ ರೂ., ಪುಸ್ತಕ ಬಹುಮಾನ 25 ಸಾವಿರ ರೂ., ಪುಸ್ತಕ ದತ್ತಿ ಬಹುಮಾನ 10 ಸಾವಿರ ರೂ. ನಗದು ಒಳಗೊಂಡಿರಲಿದೆ.

ಪುಸ್ತಕ ಬಹುಮಾನಕ್ಕೆ ಆಯ್ಕೆಯಾದವರು

  • ಭಾರತೀದೇವಿ ಪಿ. ಅವರ 'ಚಲಿಸುತ್ತಿವೆ ಚುಕ್ಕಿಗಳು'

  • ಶಶಿ ತರೀಕೆರೆ ಅವರ 'ಪ್ಯೂಪಾ'

  • ವೈ.ಎಸ್.ಹರಗಿ ಅವರ 'ಇಮಾಮ್ ಸಾಹೇಬರ ಕುದುರೆ'

  • ಅನಿಲ್ ಗುನ್ನಾಪೂರ ಅವರ 'ಸರ್ವೆ ನಂಬರ್-97'

  • ಡಾ.ಚಂದ್ರು ಕಾಳೇನಹಳ್ಳಿ ಅವರ 'ಗಂಧವತಿ'

  • ಡಾ.ಶಿವರಾಜ ಬ್ಯಾಡರಹಳ್ಳಿ ಅವರ 'ಒಂದು ತಲೆ ಚವುರದ ಕಥೆ'

  • ಮಲ್ಲಿಕಾರ್ಜುನ ಹುಲಗಬಾಳಿ ಅವರ 'ತಿರುಗಾಟ'

  • ಎಂ.ಜಿ.ಹೆಗಡೆ ಅವರ ಆತ್ಮಕಥೆ 'ಚಿಮಣಿ ಬೆಳಕಿನಿಂದ'

  • ಮಹಾಂತೇಶ ಪಾಟೀಲ ಅವರ 'ಬೆಳಕು ಬೆಳೆಯುವ ಹೊತ್ತು'

  • ರಾಜಶೇಖರ ಕುಕ್ಕುಂದಾ ಅವರ 'ಬಿಸಿ ಬಿಸಿ ಬಾತು'

  • ಶ್ರೀಧರ ತುಮರಿ ಅವರ 'ಪಕ್ಷಿಗಳ ವಿಸ್ಮಯ ವಿಶ್ವ'

  • ಡಾ. ಎನ್.ಎನ್. ಚಿಕ್ಕಮಾದು ಅವರ 'ಪ್ರಜಾಮಾತೆ'

  • ಡಾ.ಹಂಪನಹಳ್ಳಿ ತಿಮ್ಮೇಗೌಡರ 'ದಾಸೊಕ್ಕಲಿಗರು'

  • ದು.ಸರಸ್ವತಿ ಅವರ 'ಜಾತಿ ಮತ್ತು ಲಿಂಗತ್ವ' ಕೃತಿ

  • ಡಾ.ಹುಲಿಕುಂಟೆ ಮೂರ್ತಿ ಅವರ 'ನುಡಿ ಕಂಡಾಯ'

  • ಲಕ್ಷ್ಮಣ ಶರೆಗಾರ ಅವರ 'ತಿದಿಯ ತುದಿಯ ಬೆಂಕಿಯ ಉಗುಳು'

  • ಡಾ.ಪ್ರದೀಪ್ ಕೆಂಜಿಗೆ ಅವರ 'ನರವಾನರ' ಕೃತಿ ಆಯ್ಕೆಯಾಗಿವೆ ಎಂದು ಮುಕುಂದರಾಜ್ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'Hormuz ಅಷ್ಟೇ ಅಲ್ಲ.. ಬಾಲ ಬಿಚ್ಚಿದ್ರೆ Bab al mandeb ಜಲಸಂಧಿಯನ್ನೂ ಮುಚುತ್ತೇವೆ': Iran ಎಚ್ಚರಿಕೆ

ಮತ್ತೊಂದು F-18 ಫೈಟರ್ ಜೆಟ್ ಹೊಡೆದುರುಳಿಸಿದ್ದೇವೆ ಎಂದ Iran, ಬೆಚ್ಚಿದ ಅಮೆರಿಕದಿಂದ Fact-Check

ಯುದ್ದದಲ್ಲಿ ಗೆದ್ದು ಕೂಡ ಸೋಲುತ್ತಿರುವ ಅಮೇರಿಕಾ ಮತ್ತು ಚೀನಾ! (ಹಣಕ್ಲಾಸು)

ಮಾನಸಿಕ ನೆಮ್ಮದಿಗೆ 10 ಸಾವಿರ ರೂ, ಸ್ವಯಂ ಆರೈಕೆಗೆ 10 ಸಾವಿರ: 22 ವರ್ಷದ ಬೆಂಗಳೂರು Gen Z ಯುವತಿಯ ಮಾಸಿಕ ಖರ್ಚುವೆಚ್ಚ ವೈರಲ್!

ವಿವಾದದ ನಡುವೆ ಮೈಸೂರಿನ ಮುಕ್ತ ವಿವಿಯಲ್ಲಿ RSS ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್

SCROLL FOR NEXT