ಬಸವರಾಜ ಬೊಮ್ಮಾಯಿ, ಸಿಎಂ ಸಿದ್ದರಾಮಯ್ಯ ಸಾಂದರ್ಭಿಕ ಚಿತ್ರ 
ರಾಜ್ಯ

Chopper ಪ್ರಯಾಣ ವಿವಾದ: 'ಬೊಮ್ಮಾಯಿ ಕಾಲದಲ್ಲೇ ಕೋಟಿ ಕೋಟಿ ಖರ್ಚು'; ಪ್ರತಿಪಕ್ಷಗಳಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಚಿಕ್ಕಬಳ್ಳಾಪುರದಲ್ಲಿ ನಡೆದ ಕಾಂಗ್ರೆಸ್‌ನ ಮನ್ರೇಗಾ ಬಚಾವ್ ಕಾರ್ಯಕ್ರಮಕ್ಕೆ ಹೆಲಿಕಾಪ್ಟರ್ ಮೂಲಕ ತೆರಳಿದ ತಮ್ಮ ನಿರ್ಧಾರವನ್ನು ಪ್ರಶ್ನಿಸಿದ ಬಿಜೆಪಿ ನಾಯಕರಿಗೆ ಉತ್ತರಿಸಿದ ಸಿಎಂ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅವಧಿಯ ವೆಚ್ಚಗಳನ್ನು ಉದಾಹರಣೆಯಾಗಿ ಮುಂದಿಟ್ಟರು.

ಬೆಂಗಳೂರು: ಚಾಪರ್ ಪ್ರಯಾಣ ವೆಚ್ಚದ ವಿಚಾರವಾಗಿ ರಾಜ್ಯ ರಾಜಕೀಯದಲ್ಲಿ ತೀವ್ರ ವಾಗ್ವಾದ ಮುಂದುವರಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಕ್ಷದ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ನಡೆದ ಕಾಂಗ್ರೆಸ್‌ನ ಮನ್ರೇಗಾ ಬಚಾವ್ ಕಾರ್ಯಕ್ರಮಕ್ಕೆ ಹೆಲಿಕಾಪ್ಟರ್ ಮೂಲಕ ತೆರಳಿದ ತಮ್ಮ ನಿರ್ಧಾರವನ್ನು ಪ್ರಶ್ನಿಸಿದ ಬಿಜೆಪಿ ನಾಯಕರಿಗೆ ಉತ್ತರಿಸಿದ ಸಿಎಂ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅವಧಿಯ ವೆಚ್ಚಗಳನ್ನು ಉದಾಹರಣೆಯಾಗಿ ಮುಂದಿಟ್ಟರು.

ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಹೆಲಿಕಾಪ್ಟರ್ ಪ್ರಯಾಣಗಳಿಗೆ ಸುಮಾರು ರೂ.37 ಕೋಟಿ ವೆಚ್ಚ ಮಾಡಲಾಗಿದೆ. ಆಗೇಕೆ ನೀವು ಪ್ರಶ್ನಿಸಲಿಲ್ಲ?” ಎಂದು ತಿರುಗೇಟು ನೀಡಿದರು.

ಮುಖ್ಯಮಂತ್ರಿಗೆ ಅನೇಕ ತುರ್ತು ಹಾಗೂ ಪ್ರಮುಖ ಕಾರ್ಯಗಳು ಇರುವುದರಿಂದ, ಕೆಲ ಸಂದರ್ಭಗಳಲ್ಲಿ ಹೆಲಿಕಾಪ್ಟರ್ ಮತ್ತು ವಿಮಾನ ಪ್ರಯಾಣ ಅನಿವಾರ್ಯವಾಗುತ್ತದೆ ಎಂದು ಸಮರ್ಥಿಸಿಕೊಂಡರು.

ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ಚಾಪರ್ ಪ್ರಯಾಣವನ್ನು ಸಾರ್ವಜನಿಕ ಹಣದ ವ್ಯರ್ಥ ವೆಚ್ಚ ಎಂದು ಟೀಕಿಸಿದ್ದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಪ್ರಜಾಪ್ರಭುತ್ವದಲ್ಲಿ ಟೀಕೆ ಮಾಡಲು ಅವಕಾಶವಿದ್ದರೂ ಅದು ರಚನಾತ್ಮಕವಾಗಿರಬೇಕು ಎಂದು ಹೇಳಿದರು.

ಇದಲ್ಲದೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರವಾಸಗಳಿಗೆ ಇದುವರೆಗೆ ರೂ.816 ಕೋಟಿ ವೆಚ್ಚವಾಗಿದೆ ಎಂದು ಉಲ್ಲೇಖಿಸಿದ ಸಿಎಂ, “ಅದು ಸಾರ್ವಜನಿಕ ಖಜಾನೆಗೆ ಹೊರೆ ಅಲ್ಲವೇ?” ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಜೆಪಿಗೆ ಬಿಗ್ ಶಾಕ್: 'ಮರುಎಣಿಕೆ' ಫಲಿತಾಂಶಕ್ಕೆ ಸುಪ್ರೀಂ ತಡೆ; ಶೃಂಗೇರಿ ಶಾಸಕರಾಗಿ ರಾಜೇಗೌಡ ಮುಂದುವರಿಕೆ, ಜೀವರಾಜ್ ಕಥೆ ಏನು?

Indian Stock Market: ಮುಗಿಯದ ಮಧ್ಯ ಪ್ರಾಚ್ಯ ಯುದ್ಧ, Sensex 1300 ಅಂಕ ಕುಸಿತ, 6 ಲಕ್ಷ ಕೋಟಿ ರೂ ನಷ್ಟ

TCS ಕಾರ್ಪೋರೆಟ್ ಜಿಹಾದ್ ಪ್ರಕರಣ: ಆರೋಪಿ Nida Khanಗೆ ನ್ಯಾಯಾಂಗ ಬಂಧನ!

VIDEO: ಖಜಾನೆ ಖಾಲಿ ಹೇಳಿಕೆ ಬೆನ್ನಲ್ಲೇ ನಿಕಟಪೂರ್ವ ಸಿಎಂ ಸ್ಟಾಲಿನ್ ಭೇಟಿ ಮಾಡಿದ ನೂತನ CM ವಿಜಯ್

ಬಂಗಾಳದಲ್ಲಿ ಬದಲಾವಣೆಯ ಪರ್ವ: ಗಡಿ ಸುರಕ್ಷತೆಗೆ ಆದ್ಯತೆ: BSFಗೆ ಭೂಮಿ ಹಸ್ತಾಂತರಿಸಲು ಸುವೇಂದು ಸರ್ಕಾರ ಅಸ್ತು, ಮೊದಲ ಸಂಪುಟ ಸಭೆಯಲ್ಲೇ ಮಹತ್ವದ ನಿರ್ಧಾರ..!

SCROLL FOR NEXT