ಆಶಾ, ವರ್ಷಿತಾ  ಸಂಗ್ರಹ ಚಿತ್ರ
ರಾಜ್ಯ

ಸಾಲಗಾರರ ಕಾಟಕ್ಕೆ ಒಂದೇ ಕುಟುಂಬದ ಇಬ್ಬರು ಬಲಿ: ಮತ್ತಿಬ್ಬರ ಸ್ಥಿತಿ ಗಂಭೀರ

ಸಾಲಗಾರರ ಕಾಟದಿಂದ ಮೋಹನ್​​ ಗೌಡ ತೀವ್ರವಾಗಿ ಬೇಸತ್ತಿದ್ದರು. ಈ ಸಂಬಂಧ ಕಳೆದ ರಾತ್ರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಮಾಡಿದ್ದ ಮೋಹನ್, ಅದನ್ನು ತನ್ನ ಸಂಬಂಧಿಕರಿಗೆ ಕೂಡ ಕಳುಹಿಸಿದ್ದರು.

ಆನೇಕಲ್​​: ಸಾಲಗಾರರ ಕಾಟಕ್ಕೆ ಒಂದೇ ಕುಟುಂಬದ ಇಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಮಲ್ಲೇನಹಳ್ಳಿಯಲ್ಲಿ ನಡೆದಿದೆ. ತಾಯಿ, ಅಕ್ಕ ಮತ್ತು ಅಕ್ಕನ ಮಗನ ಕತ್ತು ಸೀಳಿ, ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಘಟನೆಯಲ್ಲಿ ತಾಯಿ ಮತ್ತು ಅಕ್ಕ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದರೆ, ಬಾಲಕ ಸೇರಿ ಇಬ್ಬರು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ತಾಯಿ ಆಶಾ(55ವ), ಅಕ್ಕ ವರ್ಷಿತಾ(34ವ) ಮೃತರಾಗಿದ್ದು, ಮೋಹನ್ ಗೌಡ(27ವ), ಅಕ್ಕನ ಮಗ ಮಯಾಂಕ್(11ವ) ಸ್ಥಿತಿ ಗಂಭೀರವಾಗಿದೆ.

ಸಾಲಗಾರರ ಕಾಟದಿಂದ ಮೋಹನ್​​ ಗೌಡ ತೀವ್ರವಾಗಿ ಬೇಸತ್ತಿದ್ದರು. ಈ ಸಂಬಂಧ ಕಳೆದ ರಾತ್ರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಮಾಡಿದ್ದ ಮೋಹನ್, ಅದನ್ನು ತನ್ನ ಸಂಬಂಧಿಕರಿಗೆ ಕೂಡ ಕಳುಹಿಸಿದ್ದರು. ವಿಡಿಯೋ ನೋಡಿ ಆತಂಕಗೊಂಡ ಸಂಬಂಧಿಕರು ಮನೆ ಬಳಿ ಬಂದಿದ್ದಾರೆ. ಈ ವೇಳೆ ಡೋರ್​​ ಲಾಕ್​​ ಆಗಿರುವುದು ಕಂಡುಬಂದಿದ್ದು, ಬಾಗಿಲನ್ನು ಒಡೆದು ಒಳ ಹೋಗಿ ನೋಡಿದಾಗ ಎರಡು ಮೃತ ದೇಹಗಳು ಪತ್ತೆಯಾಗಿವೆ.

ಮೋಹನ್​​ ಮತ್ತು ಮಯಾಂಕ್ ನೆಲದ ನೇಲೆ ಒದ್ದಾಡುತ್ತಿರುವುದನ್ನು ಕಂಡ ಸಂಬಂಧಿಕರು ಕೂಡಲೇ ಅವರಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇವರಿಬ್ಬರಿಗೂ ಸದ್ಯ ಚಿಕಿತ್ಸೆ ಮುಂದುವರಿದಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅತ್ತಿಬೆಲೆ ಪೋಲಿಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾತ್ ಮಾಹಿತಿ ನೀಡಿದ್ದು, ರಾತ್ತಿ 10:30ರ ಸುಮಾರಿಗೆ ಆತ್ಮಹತ್ಯೆ ಯತ್ನದ ಬಗ್ಗೆ ಮಾಹಿತಿ ಸಿಕ್ಕಿದೆ. ಕೂಡಲೇ ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಅತಿಯಾದ ಸಾಲ ಘಟನೆಗೆ ಕಾರಣ ಎಂಬುದು ಗೊತ್ತಾಗಿದೆ.

ಗಾಯಾಳು ಮೋಹನ್ ಚೀಟಿ ವ್ಯವಹಾರದಲ್ಲಿ ಸಾಲ ಮಾಡಿಕೊಂಡಿದ್ದ. ಜೊತೆಗೆ ಐಷಾರಾಮಿ ಜೀವನಕ್ಕೆಂದು ದುಂದು ವೆಚ್ಚ ಮಾಡಿದ್ದು, ಸಾಲ ತೀರಿಸಲಾಗದೆ ಇಡೀ ಕುಟುಂಬ ಆತ್ಮಹತ್ಯೆಗೆ ನಿರ್ಧರಿಸಿದೆ. ಗಾಯಾಳು ಮೋಹನ್ ತಾಯಿ, ಅಕ್ಕ ಮತ್ತು ಅಕ್ಕನ ಮಗನ ಕುತ್ತಿಗೆ ಸೀಳಿ ಬಳಿಕ ತಾನು ಕುತ್ತಿಗೆ ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತಕ್ಕೆ ಆಗಮಿಸಿದ ಜಪಾನ್ ಪ್ರಧಾನಿ; ಜು.2 ರಂದು ಪ್ರಧಾನಿ ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ

ಗಡಿ ವಿವಾದ ಬಗೆಹರಿಸಲು ಭಾರತದೊಂದಿಗೆ ರಾಜತಾಂತ್ರಿಕ ಮಾತುಕತೆಗೆ ಸಿದ್ಧ- ನೇಪಾಳ ವಿದೇಶಾಂಗ ಸಚಿವ ಖನಾಲ್

ಬಿಜೆಪಿಗೆ ಬೆಂಬಲ ಅಥವಾ ಕಾಂಗ್ರೆಸ್ ಜತೆ ಎನ್‌ಸಿಪಿ(ಎಸ್‌ಪಿ) ವಿಲೀನ ಕುರಿತು ಶರದ್ ಪವಾರ್ ಚರ್ಚೆ; ಸುಪ್ರಿಯಾ ಸುಳೆಗೆ ಮಹತ್ವದ ಹುದ್ದೆ?

ಕನ್ನಡ ಚಿತ್ರರಂಗದ ಉಳಿವಿಗಾಗಿ ‘ಸರ್ಕಾರಿ OTT ಆರಂಭಿಸಿ’: CM ಶಿವಕುಮಾರ್ ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಮನವಿ

ಭಾರತ - ಪಾಕಿಸ್ತಾನದ 100ಕ್ಕೂ ಹೆಚ್ಚು ರಾಜಕಾರಣಿಗಳು, ಮಾಜಿ ರಾಜತಾಂತ್ರಿಕರಿಂದ ಮೋದಿ, ಷರೀಫ್‌ಗೆ ಪತ್ರ; ಇಲ್ಲಿದೆ ಕಾರಣ...