ವಿನಯ್ ಶಿವಲೀಲಾ ಕುಲಕರ್ಣಿ 
ರಾಜ್ಯ

ಧಾರವಾಡ ಉಪಚುನಾವಣೆ: ಕುಲಕರ್ಣಿ ಪತ್ನಿಗೆ ಸಿಗುತ್ತಾ ಟಿಕೆಟ್...?

ಕಾಂಗ್ರೆಸ್ ವಲಯದಲ್ಲಿ ಕುಲಕರ್ಣಿ ಅವರ ಪತ್ನಿ ವಿನಯ್ ಶಿವಲೀಲಾ ಕುಲಕರ್ಣಿ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಕುರಿತು ಚಿಂತನೆ ನಡೆಯುತ್ತಿದೆ ಎನ್ನಲಾಗುತ್ತಿದ್ದು, ಇದರ ಬೆನ್ನಲ್ಲೇ ಬೆಂಬಲಿಗರು ಆನ್‌ಲೈನ್ ಅಭಿಯಾನ ಆರಂಭಿಸಿದ್ದಾರೆ.

ಧಾರವಾಡ: ಧಾರವಾಡ ವಿಧಾನಸಭಾ ಕ್ಷೇತ್ರ ಉಪಚುನಾವಣೆಯ ಚಟುವಟಿಕೆಗಳು ಜೋರಾಗಿವೆ. ಹತ್ಯೆ ಪ್ರಕರಣದಲ್ಲಿ ಶಿಕ್ಷೆ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಅವರನ್ನು ವಿಧಾನಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿದ್ದು, ಕ್ಷೇತ್ರ ಖಾಲಿಯಾಗಿರುವುದರಿಂದ ಶೀಘ್ರದಲ್ಲೇ ಉಪಚುನಾವಣೆ ನಡೆಯಲಿದೆ.

ಕಾಂಗ್ರೆಸ್ ವಲಯದಲ್ಲಿ ಕುಲಕರ್ಣಿ ಅವರ ಪತ್ನಿ ವಿನಯ್ ಶಿವಲೀಲಾ ಕುಲಕರ್ಣಿ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಕುರಿತು ಚಿಂತನೆ ನಡೆಯುತ್ತಿದೆ ಎನ್ನಲಾಗುತ್ತಿದ್ದು, ಇದರ ಬೆನ್ನಲ್ಲೇ ಬೆಂಬಲಿಗರು ಆನ್‌ಲೈನ್ ಅಭಿಯಾನ ಆರಂಭಿಸಿದ್ದಾರೆ.

ಸಹಾನುಭೂತಿ ಹಾಗೂ ಕುಲಕರ್ಣಿ ಅವರ ಕ್ಷೇತ್ರ ಸೇವೆ ಮತದಾರರ ಮೇಲೆ ಪ್ರಭಾವ ಬೀರುತ್ತದೆ ಎಂಬ ನಂಬಿಕೆ ಅವರದ್ದಾಗಿದೆ.

ಇನ್ನೊಂದೆಡೆ ಬಿಜೆಪಿಯಲ್ಲಿ ಮಾಜಿ ಶಾಸಕ ಅಮೃತ್ ದೇಸಾಯಿ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ. ಕ್ಷೇತ್ರದೊಂದಿಗೆ ಉತ್ತಮ ಸಂಪರ್ಕ ಮತ್ತು ಹಿಂದಿನ ಗೆಲುವಿನ ಅನುಭವ ಅವರ ಪರ ಕೆಲಸ ಮಾಡಲಿದೆ ಎಂದು ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜಕೀಯದಲ್ಲಿ ಯಾವ ಕ್ಷಣದಲ್ಲೂ ಬದಲಾವಣೆ ಸಂಭವಿಸಬಹುದು. ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮ,” ಎಂದು ಕಾಂಗ್ರೆಸ್ ಕಾರ್ಯಕರ್ತರು ತಿಳಿಸಿದ್ದಾರೆ.

ಶಿವಲೀಲಾ ಕರ್ನಾಟಕ ನಗರ ನೀರು ಸರಬರಾಜು ಒಳಚರಂಡಿ ಮಂಡಳಿಯ ಅಧ್ಯಕ್ಷೆ. ಕುಟುಂಬ ಸದಸ್ಯರಿಗೆ ಅವಕಾಶ ನೀಡುವುದರಿಂದ ಸ್ವಲ್ಪ ವಿರೋಧ ಉಂಟಾಗಬಹುದು. ಬಿಜೆಪಿ ಪರವಾಗಿ ಈಗ ದೇಸಾಯಿ ಹೊರತುಪಡಿಸಿ ಬೇರೆ ಹೆಸರುಗಳು ಕೇಳಿಬರುತ್ತಿಲ್ಲವಾದರೂ, ಉಪಚುನಾವಣೆಯ ಕಾವು ಹೆಚ್ಚಿದಂತೆ ರಾಜಕೀಯ ಚಿತ್ರಣ ಬದಲಾಗುವ ಸಾಧ್ಯತೆ ಇದೆ ಎಂದು ರಾಜಕೀಯ ತಜ್ಞರೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

TVK ಶಾಸಕಾಂಗ ಪಕ್ಷದ ನಾಯಕನಾಗಿ ವಿಜಯ್ ಆಯ್ಕೆ; ಮೇ 7ರಂದು ಸಿಎಂ ಆಗಿ ಪ್ರಮಾಣ ವಚನ?

IPL 2026: DC ಸೋಲಿಸಿ ತಮ್ಮ 5ನೇ ಗೆಲುವು ದಾಖಲಿಸಿದ CSK; ದಾಖಲೆ ಸೃಷ್ಟಿ!

ಬೆಂಬಲ ನೀಡುವಂತೆ ವಿಜಯ್ ಮನವಿ: ನಿರ್ಧಾರ ತೆಗೆದುಕೊಳ್ಳಲು ರಾಜ್ಯ ಕಾಂಗ್ರೆಸ್‌ಗೆ ಬಿಟ್ಟಿದ್ದೇವೆ: ಕೆಸಿ ವೇಣುಗೋಪಾಲ್

ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂಖ್ಯೆ 33 ರಿಂದ 37ಕ್ಕೆ ಹೆಚ್ಚಳ: ಪ್ರಧಾನಿ ಮೋದಿ ಸಂಪುಟ ಅನುಮೋದನೆ!

ಕಬ್ಬು ಬೆಳೆಗಾರರ ನೆರವಿಗೆ ಕೇಂದ್ರ; ಕ್ವಿಂಟಾಲ್ ಗೆ ₹365 FRP ಹೆಚ್ಚಿಸಲು ಅನುಮೋದನೆ!

SCROLL FOR NEXT