ಸಹಕಾರ ಸಂಘಗಳ ನಿಬಂಧಕರ ಕಚೇರಿಯ ಹೊಸ ಆಡಳಿತ ಭವನ ‘ಸಹಕಾರ ಸಮೃದ್ಧಿ ಸೌಧ’ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ. Express photo Nagaraja Gadekal
ರಾಜ್ಯ

ದೇವರೂ ಕೂಡ ಮದ್ಯಪಾನ ಮಾಡುತ್ತಾರೆ; ಮದ್ಯಪಾನಕ್ಕೆ ವಿರೋಧವಿಲ್ಲ ಆದರೆ, ವ್ಯಸನವಾಗಬಾರದು: ಸಿಎಂ ಸಿದ್ದರಾಮಯ್ಯ

ಇಂದು ಬಹುತೇಕ ಜನ ಮದ್ಯಪಾನ ಮಾಡುತ್ತಾರೆ. ದೇವರುಗಳೂ ಸಹ ಮದ್ಯ ಸೇವಿಸಿದ್ದಾರೆ. ನನ್ನ ಸಂಪುಟದ ಅನೇಕ ಸಚಿವರೂ ಕುಡಿಯುತ್ತಾರೆ.

ಬೆಂಗಳೂರು: ಮದ್ಯಪಾನ ಮಾಡುವುದಕ್ಕೆ ನನ್ನ ವಿರೋಧವಿಲ್ಲ. ಆದರೆ ಅದು ಎಂದಿಗೂ ವ್ಯಸನವಾಗಬಾರದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.

ನಗರದ ಅಲಿ ಅಸ್ಕರ್ ರಸ್ತೆಯಲ್ಲಿ ನಿರ್ಮಿಸಲಾದ ಸಹಕಾರ ಸಂಘಗಳ ನಿಬಂಧಕರ ಕಚೇರಿಯ ಹೊಸ ಆಡಳಿತ ಭವನ ‘ಸಹಕಾರ ಸಮೃದ್ಧಿ ಸೌಧ’ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಆರ್ಥಿಕತೆಯಲ್ಲಿ ಸಹಕಾರ ಸಂಘಗಳ ಮಹತ್ವವನ್ನು ವಿವರಿಸಿದರು.

ಒಮ್ಮೆ ಸಂಸತ್ತಿನಲ್ಲಿ ಗ್ರಾಮಗಳಿಂದ ಹಾಲು ನಗರಗಳಿಗೆ ಬರುತ್ತದೆ, ಆದರೆ ನಗರಗಳಿಂದ ವಿಸ್ಕಿ, ಬ್ರಾಂಡಿ ಸೇರಿದಂತೆ ಮದ್ಯ ಗ್ರಾಮಗಳಿಗೆ ಹೋಗುತ್ತಿದೆ ಎಂಬ ಚರ್ಚೆ ನಡೆದಿತ್ತು ಎಂದು ಸ್ಮರಿಸಿದರು.

“ಇಂದು ಬಹುತೇಕ ಜನ ಮದ್ಯಪಾನ ಮಾಡುತ್ತಾರೆ. ದೇವರುಗಳೂ ಸಹ ಮದ್ಯ ಸೇವಿಸಿದ್ದಾರೆ. ನನ್ನ ಸಂಪುಟದ ಅನೇಕ ಸಚಿವರೂ ಕುಡಿಯುತ್ತಾರೆ” ಎಂದು ಹೇಳಿದ ಅವರು, ಮಾಜಿ ಸಚಿವ ಆರ್.ಎಲ್. ಜಾಲಪ್ಪ “ನೀವು ಏಕೆ ಹುಟ್ಟಿದ್ದೀರಿ?” ಎಂದು ಕೇಳುವ ಮೂಲಕ ಕುಡಿಯದವರನ್ನು ಹೇಗೆ ಗೇಲಿ ಮಾಡಿದರು ಎಂಬುದನ್ನು ನೆನಪಿಸಿಕೊಂಡರು.

ಮುಂದುವರೆದು ಮಾತನಾಡಿದ ಅವರು, “ಕುಡಿಯುವುದರಲ್ಲಿ ತಪ್ಪಿಲ್ಲ. ಆದರೆ ಅದು ಚಟವಾಗಬಾರದು” ಎಂದು ಹೇಳಿದರು,

ಇದೇ ವೇಳೆ ನೂತನ ಕಟ್ಟಡ ಕುರಿತು ಮಾತನಾಡಿದ ಅವರು, 2023ರಲ್ಲಿ ಈ ಕಟ್ಟಡದ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಈಗ ರೂ.19.43 ಕೋಟಿ ವೆಚ್ಚದಲ್ಲಿ ನಾಲ್ಕು ಮಹಡಿಗಳ ಭವನ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಸಹಕಾರಿ ವಲಯದ ಹೊರಗೆ ಯಾವುದೇ ವಲಯ ಉಳಿಯಲು ಸಾಧ್ಯವಿಲ್ಲ. ರಾಜ್ಯದ 60 ಶೇಕಡಾ ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ರೈತರ ಅಭಿವೃದ್ಧಿಗಾಗಿ ಸಹಕಾರ ಸಂಘಗಳು ಹೆಚ್ಚು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ರೈತರ ಆರ್ಥಿಕ ಸ್ಥಿತಿ ಉತ್ತಮಗೊಂಡಿದೆ. ರಾಜ್ಯದಲ್ಲಿ ಪ್ರತಿದಿನ 1 ಕೋಟಿ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಆದರೆ, ಉತ್ತರ ಕರ್ನಾಟಕದಲ್ಲಿ ಇನ್ನಷ್ಟು ಹಾಲು ಉತ್ಪಾದನೆ ಹೆಚ್ಚಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಮಾತನಾಡಿ, “ಸಹಕಾರ ಸಂಘಗಳು ಹೊಸ ನಾಯಕರು ಮತ್ತು ಯುವ ನಾಯಕರನ್ನು ರೂಪಿಸುವ ಸಂಸ್ಥೆಗಳಾಗಿವೆ” ಎಂದರು.

ಕಾರ್ಯಕ್ರಮದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಶಾಸಕ ರಿಜ್ವಾನ್ ಅರ್ಷದ್, ಎಂಎಲ್ಸಿ ಬಿಲ್ಕಿಸ್ ಬಾನು, ಸಹಕಾರಿ ಸಂಘಗಳ ರಿಜಿಸ್ಟ್ರಾರ್ ಕಾಂತರಾಜು ಮತ್ತು ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೇಶದ ಮೊದಲ ಖಾಸಗಿ ಚಿನ್ನದ ಗಣಿ ಉದ್ಘಾಟಿಸಿದ ಆಂಧ್ರ CM; ಪ್ರತಿ ವರ್ಷ 900 ಕೆಜಿ ಚಿನ್ನ ಉತ್ಪಾದನೆ!

ಖರ್ಗೆ ಕುಟುಂಬದಿಂದ 100 ಕೋಟಿ ರೂ. ಮೌಲ್ಯದ ಸರ್ಕಾರಿ ಭೂಮಿ ಲೂಟಿ: BJP ಗಂಭೀರ ಆರೋಪ

ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಿಂದ- ಸಿಲ್ಕ್ ಬೋರ್ಡ್ ವರೆಗೆ 1,300 ಕೋಟಿ ರೂ ವೆಚ್ಚದಲ್ಲಿ ಎಲಿವೇಟೆಡ್ ಕಾರಿಡಾರ್: ಟೋಲ್ ಬದಲು Value Capture Financing ಗೆ ಪ್ರಸ್ತಾವನೆ!

ಮಂಡ್ಯ: ಮುತ್ತತ್ತಿ ದೇವಸ್ಥಾನಕ್ಕೆ ತೆರಳಿದ್ದಾಗ ದುರ್ಘಟನೆ: ಕಾವೇರಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಐವರು ಜಲಸಮಾಧಿ!

Mr. ಪ್ರಿಯಾಂಕ್ ಖರ್ಗೆ, ಸೀಟ್‌ಬೆಲ್ಟ್‌, ವೇಗದ ಮಿತಿ ನಿಮಗೆ ಅನ್ವಯಿಸುವುದಿಲ್ಲವೇ?