ಹೇರ್‌ಕಟ್ ಮಾಡಿಸಿಕೊಳ್ಳುತ್ತಿರುವ ಮಂಗ 
ರಾಜ್ಯ

ಇದು prank ಅಲ್ಲ, ಸತ್ಯ: ಸಲೂನ್‌ಗೆ ಬಂದು ಹೇರ್‌ಕಟ್ ಮಾಡಿಸಿಕೊಂಡ ಮಂಗ; ವೀಡಿಯೋ ವೈರಲ್!

ಮಂಗ ಸಲೂನ್ ಕುರ್ಚಿಯ ಮೇಲೆ ಕುಳಿತುಕೊಂಡಾಗ ನಿಧಾನವಾಗಿ ತಲೆಗೆ ಮಸಾಜ್ ಮಾಡಿದೆ. “ಮೊದಲು ಭಯವಿತ್ತು. ಆದರೆ ಅದಕ್ಕೆ ಮಸಾಜ್ ತುಂಬ ಇಷ್ಟವಾಯಿತು ಇರಬೇಕು. ಕೆಲ ಹೊತ್ತು ಕಣ್ಣು ಮುಚ್ಚಿಕೊಂಡೇ ಕುಳಿತಿತ್ತು.

ಮೈಸೂರು: ಮಂಗವೊಂದು ಸಲೂನ್‌ಗೆ ನೇರವಾಗಿ ಬಂದು ಗ್ರಾಹಕನಂತೆ ಕುಳಿತು ‘ಹೇರ್‌ಕಟ್’ ಮಾಡಿಸಿಕೊಂಡ ಅಪರೂಪದ ಘಟನೆ ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಸಲೂನ್ ಮಾಲೀಕ ದೇವರಾಜು ಹೇಳುವಂತೆ, ಕಳೆದ ಕೆಲವು ದಿನಗಳಿಂದ ಕೆಲವು ಮಂಗಗಳು ಅಂಗಡಿ ಸುತ್ತಮುತ್ತ ತಿರುಗಾಡುತ್ತಿದ್ದು, ಗುರುವಾರ ಅವುಗಳಲ್ಲಿ ಒಂದು ಮಂಗ ನೇರವಾಗಿ ಅಂಗಡಿಯೊಳಗೆ ಬಂದಿತು. ಕನ್ನಡಿಯ ಮುಂದೆ ನಿಂತು ಕೆಲ ನಿಮಿಷಗಳ ಕಾಲ ತನ್ನನ್ನು ನೋಡಿಕೊಳ್ಳುತ್ತಿತ್ತು. ಇದನ್ನು ನೋಡಿ ಮೊದಲಿಗೆ ನನಗೆ ಭಯವಾಯಿತು. ಆದರೆ, ಅದು ತುಂಬಾ ಶಾಂತವಾಗಿರುವುದು ನೋಡಿ ಆಶ್ಚರ್ಯವಾಯಿತು.

ನಂತರ ಮಂಗ ಸಲೂನ್ ಕುರ್ಚಿಯ ಮೇಲೆ ಕುಳಿತುಕೊಂಡಾಗ ನಿಧಾನವಾಗಿ ತಲೆಗೆ ಮಸಾಜ್ ಮಾಡಿದೆ. “ಮೊದಲು ಭಯವಿತ್ತು. ಆದರೆ ಅದಕ್ಕೆ ಮಸಾಜ್ ತುಂಬ ಇಷ್ಟವಾಯಿತು ಇರಬೇಕು. ಕೆಲ ಹೊತ್ತು ಕಣ್ಣು ಮುಚ್ಚಿಕೊಂಡೇ ಕುಳಿತಿತ್ತು.

ಅದಾದ ಬಳಿಕ ಮಂಗವೇ ಹೇರ್‌ಕಟ್ ಮಾಡಿಸಿಕೊಳ್ಳುವಂತೆ ಸಂಜ್ಞೆ ನೀಡಿದಂತೆ ಕಂಡುಬಂದಿತು. ಇದರಿಂದ ಕತ್ತರಿ, ಬಾಚಣಿಕೆ ಹಿಡಿದು ಅದರ ಕೂದಲು ಸರಿಪಡಿಸುವಂತೆ ನಟಿಸಿದೆ ಎಂದು ಹೇಳಿದ್ದಾರೆ.

ಅಚ್ಚರಿಯ ಸಂಗತಿ ಏನೆಂದರೆ, ಮಂಗ ಸಾಮಾನ್ಯ ಗ್ರಾಹಕನಂತೆ ಶಾಂತವಾಗಿ ಕುಳಿತುಕೊಂಡೇ ಸಹಕರಿಸಿತು. ಅಂಗಡಿಯಲ್ಲಿದ್ದ ಇತರರು ಓಡಿಸಲು ಯತ್ನಿಸಿದರೂ, ‘ಗ್ರೂಮಿಂಗ್ ಸೆಷನ್’ ಮುಗಿಯುವವರೆಗೆ ಅದು ಅಲ್ಲಿಂದ ತೆರಳಲಿಲ್ಲ ಎಂದು ತಿಳಿಸಿದ್ದಾರೆ.

ಈ ದೃಶ್ಯಗಳನ್ನು ದೇವರಾಜು ಸ್ನೇಹಿತರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಈ ಕುರಿತ ವಿಡಿಯೊ ಮತ್ತು ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಶ್ಚಿಮ ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೂಕಂಪ; ಮೃತರ ಸಂಖ್ಯೆ 100ಕ್ಕೆ ಏರಿಕೆ, ಹಲವರಿಗೆ ಗಾಯ

9 ದಿನಗಳಿಂದ ಉಪವಾಸ: ದೇವೇಂದ್ರ ಮಹ್ತೊ ಆಸ್ಪತ್ರೆಗೆ ದಾಖಲು; ಪೊಲೀಸರ ಲಾಠಿಚಾರ್ಚ್ ಖಂಡಿಸಿ ನಾಳೆ ಬಂದ್ ಗೆ BJP ಕರೆ!

ಶಾರುಖ್ ನಟನೆಯ 'ಕಭಿ ಅಲ್ವಿದಾ ನಾ ಕೆಹನಾ' ಚಿತ್ರ ಅಕ್ರಮ ಸಂಬಂಧ ಬೆಂಬಲಿಸಿಲ್ಲ: ಕರಣ್ ಜೋಹರ್ ಪೋಸ್ಟ್ ವೈರಲ್!

ಖಾತೆ ಹಂಚಿಕೆ ಕಸರತ್ತು: ವರಿಷ್ಠರಿಗೆ ಪಟ್ಟಿ ನೀಡಿ ಬೆಂಗಳೂರಿಗೆ CM ಡಿ.ಕೆ ಶಿವಕುಮಾರ್ ವಾಪಸ್; ಹೇಳಿದ್ದೇನು?

ನಾವು ಹಿಂಸಾಚಾರನ ಬೆಂಬಲಿಸಲ್ಲ; ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌ ಸರಿಯಲ್ಲ: ಜಾರ್ಖಂಡ್ ನಡೆ ಖಂಡಿಸಿದ ರಾಹುಲ್!