ಮೈಸೂರು ನಗರ ಪ್ರದಕ್ಷಿಣೆಯ ಭಾಗವಾಗಿ ಇಂದು ಮಾನಂದವಾಡಿ ರಸ್ತೆಯ ಎನ್.ಐ ಕಾಲೇಜಿನ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಕೈಗೊಂಡಿರುವ ವೈಟ್ ಟಾಪಿಂಗ್ ಕಾಮಗಾರಿಯನ್ನು ಸಿಎಂ ಪರಿಶೀಲಿಸಿದರು.  
ರಾಜ್ಯ

'ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸುವಂತಿಲ್ಲ; ಪ್ರಧಾನ ಮಂತ್ರಿಯವರ ಬೆಂಗಾವಲು ವಾಹನ ಕಡಿತ ಸರಿಯಾದ ಕ್ರಮವಲ್ಲ': ಸಿದ್ದರಾಮಯ್ಯ; Video

ಪೇಟ, ಜನಿವಾರ, ಶಿವದಾರ, ರುದ್ರಾಕ್ಷಿ, ಹಿಜಾಬ್ ಧರಿಸಿಕೊಂಡು ಶಾಲೆ-ಕಾಲೇಜುಗಳಿಗೆ ಹೋಗಬಹುದು, ಪೇಟ ಎಂದರೆ ಈಗಾಗಲೇ ರೂಢಿಯಲ್ಲಿರುವುದನ್ನು ಮಾತ್ರ ಧರಿಸಲು ಅವಕಾಶವಿರುತ್ತದೆ. ಹೊಸದಾಗಿ ಕೇಸರಿ ಪೇಟ ಧರಿಸಲು ಅವಕಾಶವಿಲ್ಲ ಎಂದರು.

ಮೈಸೂರು: ಹಿಜಾಬ್ ಮಾತ್ರವಲ್ಲ, ಇನ್ನು ಮುಂದೆ ಪ್ರೈಮರಿ, ಹೈಸ್ಕೂಲ್ ಮತ್ತು ಪಿಯುಸಿವರೆಗೆ ವಿದ್ಯಾರ್ಥಿಗಳ ಅವರವರ ಧಾರ್ಮಿಕ ನಂಬಿಕೆಗಳಿಗೆ ಅನುಸಾರವಾಗಿ ಜನಿವಾರ, ಶಿವದಾರ,ರುದ್ರಾಕ್ಷಿ ಧರಿಸಲು ಕೂಡ ಅವಕಾಶವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡು ಮಾತ್ರ ಶಾಲೆಗೆ ಬರುವಂತಿಲ್ಲ. ಪೇಟ, ಜನಿವಾರ, ಶಿವದಾರ, ರುದ್ರಾಕ್ಷಿ, ಹಿಜಾಬ್ ಧರಿಸಿಕೊಂಡು ಶಾಲೆ-ಕಾಲೇಜುಗಳಿಗೆ ಹೋಗಬಹುದು, ಪೇಟ ಎಂದರೆ ಈಗಾಗಲೇ ರೂಢಿಯಲ್ಲಿರುವುದನ್ನು ಮಾತ್ರ ಧರಿಸಲು ಅವಕಾಶವಿರುತ್ತದೆ. ಹೊಸದಾಗಿ ಕೇಸರಿ ಪೇಟ ಧರಿಸಲು ಅವಕಾಶವಿಲ್ಲ ಎಂದರು.

ಬೆಂಗಾವಲು ವಾಹನಗಳ ಕಡಿತದಿಂದ ತಾತ್ಕಾಲಿಕವಷ್ಟೆ

ಇಂಧನ ಉಳಿತಾಯಕ್ಕೆ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿತ ಮಾಡುವ ಪ್ರಧಾನ ಮಂತ್ರಿಯವರು ಹೇಳಿರುವ ಕ್ರಮ ಸರಿಯಾದದ್ದು ಅಲ್ಲ, ಅದು ತಾತ್ಕಾಲಿಕ ಕ್ರಮವಷ್ಟೆ, ಅದರ ಬದಲು ಬೇರೆ ದೇಶಗಳ ಜೊತೆ ಮಾತುಕತೆ ನಡೆಸಿ ಸಹಮತದ ಸ್ಥಿತಿಗೆ ಬರುವುದು ಉತ್ತಮ ಎಂದರು.

ಸಂಪುಟ ಪುನಾರಚನೆ ಸಂಬಂಧ ಮಾತನಾಡಲು ಹೈಕಮಾಂಡ್ ಕರೆದರೆ ದೆಹಲಿಗೆ ಹೋಗುತ್ತೇನೆ ಎಂದ ಸಿದ್ದರಾಮಯ್ಯ ಮೇ 15ಕ್ಕೆ ಹೋಗುತ್ತೀರಾ ಎಂದು ಸುದ್ದಿಗಾರರು ಕೇಳಿದಾಗ ಗರಂ ಆದರು, ಮೇ 15 ಎಂದು ನಿಮಗೆ ಯಾರು ಹೇಳಿದ್ದು ಎಂದು ಪ್ರಶ್ನಿಸಿದರು. ಸಚಿವ ಸಂಪುಟ ಪುನಾರಚನೆ ಮಾಡುವ ಅಗತ್ಯವಿದೆ ಎಂದರು.

ವಿದ್ಯಾರ್ಥಿಗಳಿಗೆ ಅನ್ಯಾಯ

ನೀಟ್ ಪರೀಕ್ಷೆಗೆ ಚೆನ್ನಾಗಿ ಓದಿ ಪರೀಕ್ಷೆ ಬರೆದವರ ಕಥೆ ಏನಾಗಬೇಕು, ನೀವು ಕೇಂದ್ರ ಸರ್ಕಾರವನ್ನು ಟೀಕೆ ಮಾಡಿ ಬರೆಯಿರಿ ಎಂದು ಪತ್ರಕರ್ತರಿಗೆ ಸಿಎಂ ಸಿದ್ದರಾಮಯ್ಯ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!