ಸಚಿವ ವಿ. ಸೋಮಣ್ಣ 
ರಾಜ್ಯ

ಬೆಂಗಳೂರು ಸುತ್ತ ರೈಲ್ವೆ ಅಭಿವೃದ್ಧಿಗೆ ವೇಗ; ರಾಜ್ಯದಲ್ಲಿ 50 ಸಾವಿರ ಕೋಟಿ ರೂ ರೈಲ್ವೆ ಕಾಮಗಾರಿಗಳು ಪ್ರಗತಿಯಲ್ಲಿವೆ- ವಿ. ಸೋಮಣ್ಣ

ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ (DRM) ಕಚೇರಿಯಲ್ಲಿ ನಡೆದ ಸಮನ್ವಯ ಸಭೆಯಲ್ಲಿ, ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರಮುಖ ರೈಲ್ವೆ ಮೂಲಸೌಕರ್ಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಬೆಂಗಳೂರು: ರಾಜ್ಯದಾದ್ಯಂತ 50 ಸಾವಿರ ಕೋಟಿ ರೂ.ಗೂ ಹೆಚ್ಚು ಮೊತ್ತದ ರೈಲ್ವೆ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಶನಿವಾರ ಹೇಳಿದ್ದಾರೆ.

ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ (DRM) ಕಚೇರಿಯಲ್ಲಿ ನಡೆದ ಸಮನ್ವಯ ಸಭೆಯಲ್ಲಿ, ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರಮುಖ ರೈಲ್ವೆ ಮೂಲಸೌಕರ್ಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ರೈಲ್ವೆ ಟರ್ಮಿನಲ್‌ಗಳ ಮೇಲಿನ ಒತ್ತಡ ಕಡಿಮೆ ಮಾಡುವುದು, ಪ್ರಯಾಣಿಕರ ಅನುಕೂಲತೆ ಹೆಚ್ಚಿಸುವುದು ಹಾಗೂ ಸುರಕ್ಷತಾ ಕಾಮಗಾರಿಗಳನ್ನು ವೇಗಗೊಳಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಸಭೆಯಲ್ಲಿ ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಭಾಗವಹಿಸಿದ್ದರು.

ಬೆಂಗಳೂರು ಸುತ್ತಮುತ್ತ 100 ಕಿ.ಮೀ ವ್ಯಾಪ್ತಿಯಲ್ಲಿರುವ ಲೆವೆಲ್ ಕ್ರಾಸಿಂಗ್‌ಗಳ ಬದಲಿಗೆ ನಿರ್ಮಿಸಲಾಗುತ್ತಿರುವ ರಸ್ತೆ ಮೇಲ್ಸೇತುವೆ (ROB) ಮತ್ತು ರಸ್ತೆ ಅಂಡರ್‌ಪಾಸ್‌ಗಳ (RUB) ಕಾಮಗಾರಿಗಳ ಪ್ರಗತಿಯನ್ನು ಸಚಿವರು ಪರಿಶೀಲಿಸಿದರು. ಭೂಸ್ವಾಧೀನ ಹಾಗೂ ವಿವಿಧ ಇಲಾಖೆಗಳ ನಡುವಿನ ಸಮನ್ವಯ ಸಮಸ್ಯೆಗಳ ಕುರಿತು ಅಧಿಕಾರಿಗಳು ಚರ್ಚಿಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ವಿ. ಸೋಮಣ್ಣ ಅವರು, “ಬೆಂಗಳೂರು ಸುತ್ತಮುತ್ತ ಸುಮಾರು 100 ಲೆವೆಲ್ ಕ್ರಾಸಿಂಗ್‌ಗಳಿವೆ. ಈಗಾಗಲೇ 46 ಸ್ಥಳಗಳಲ್ಲಿ ROB ಮತ್ತು RUB ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಇನ್ನೂ 24 ಕಡೆಗಳಿಗೆ ಡಿಪಿಆರ್‌ಗಳು (ವಿವರವಾದ ಯೋಜನಾ ವರದಿ) ಸಿದ್ಧವಾಗುತ್ತಿವೆ. ಉಳಿದ ಸ್ಥಳಗಳಿಗೂ ಪ್ರಸ್ತಾವನೆಗಳು ತಯಾರಾಗುತ್ತಿವೆ” ಎಂದು ಹೇಳಿದರು.

ಇದೇ ವೇಳೆ ತುಮಕೂರು–ಬೆಂಗಳೂರು ನಾಲ್ಕು ಮಾರ್ಗದ ರೈಲು ಹಳಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ ಅವರು, ಬೆಂಗಳೂರು ಮತ್ತು ಕೋಲಾರ ನಡುವೆ ನೇರ ರೈಲು ಮಾರ್ಗ ನಿರ್ಮಾಣದ ಯೋಜನೆಯೂ ಸಿದ್ಧವಾಗುತ್ತಿದೆ ಎಂದು ತಿಳಿಸಿದರು.

ಇದೇ ವೇಳೆ ಮೇ 17ರಂದು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಲೋಕಮಾನ್ಯ ತಿಲಕ್ ಟರ್ಮಿನಸ್ ನಡುವಿನ ವಾರಕ್ಕೆ ಎರಡು ಬಾರಿ ಸಂಚರಿಸುವ ಹೊಸ ರೈಲು ಸೇವೆಯನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಯನಾಡು ಭೂಕುಸಿತ 'ಮಾನವ ನಿರ್ಮಿತ'; ಮಣ್ಣು ತೆರವುಗೊಳಿಸಲು ಗುತ್ತಿಗೆದಾರರಿಗೆ ಸರ್ಕಾರ ಸೂಚಿಸಿದ್ರೂ ನಿರ್ಲಕ್ಷ್ಯ!

Varanasi Movie: ವಾರಣಾಸಿ ಚಿತ್ರದಲ್ಲಿ ಶ್ರೀರಾಮನಾಗಿ ಮಹೇಶ್ ಬಾಬು! ವೈರಲ್ ಆಗಿರುವ ಫೋಟೋ ರಿಯಾಲಿಟಿ ಏನು?

'MS Dhoni won an era': "ಥಾಲಾ' ನ 45ನೇ ಹುಟ್ಟುಹಬ್ಬಕ್ಕೆ ರೈನಾ, ಚೋಪ್ರಾ ಸೇರಿದಂತೆ ಹಲವರ ಶುಭಾಶಯ!

ಕೇತನ್​ ಕೊಲೆಗೂ ಮುನ್ನ ಚೇತನ್​ನೊಂದಿಗೆ ರಹಸ್ಯವಾಗಿ ಸಿಯಾ ಮದುವೆ; ಚಾಟ್​ನಿಂದ ಗುಟ್ಟು ರಟ್ಟು!

ಪ್ರಜ್ವಲ್ ದೇವರಾಜ್ Vs ರಾಜ್ ಬಿ ಶೆಟ್ಟಿ: ಹೀಗೆ ಆದರೆ ಕನ್ನಡ ಇಂಡಸ್ಟ್ರಿ ಉದ್ಧಾರ ಆಗಲ್ಲ ಅಂದಿದ್ದೇಕೆ Raj B Shetty!