ರಾಜ್ಯ

GT vs RCB IPL Final 2026: ಸಂಭ್ರಮಾಚರಣೆಗೆ 'NO' ಎಂದ ಬೆಂಗಳೂರು ಪೊಲೀಸರು, ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟ..!

ನಗರದ ವಿವಿಧ ಭಾಗಗಳಲ್ಲಿ ವಾಹನ ತಪಾಸಣೆ ನಡೆಸಲಾಗುವುದು. ಸಂಚಾರ ಸಿಗ್ನಲ್‌ಗಳು, ಮಾರ್ಗ ಬದಲಾವಣೆಗಳ ಸೂಚನೆಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಿದ್ದಾರೆ.

ಬೆಂಗಳೂರು: ಐಪಿಎಲ್ ಫೈನಲ್ ಪಂದ್ಯ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರಿ ಪೊಲೀಸ್ ಮತ್ತು ನಗರ ಪೊಲೀಸ್ ಇಲಾಖೆಯು ಸಾರ್ವಜನಿಕ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕಾಗಿ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಕಳೆದ ವರ್ಷದ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.

ಈ ಕುರಿತು ವಿಶೇಷ ಮಾರ್ಗಸೂಚಿಗಳನ್ನು ಪ್ರಕಟಿಸಿರುವ ಪೊಲೀಸರು, ಪಂದ್ಯ ಫಲಿತಾಂಶದ ಬಳಿಕ ರಸ್ತೆಗಳಲ್ಲಿ ವಿಜಯೋತ್ಸವ, ಮೆರವಣಿಗೆ ಅಥವಾ ಸಂಭ್ರಮಾಚರಣೆಗೆ ಅವಕಾಶ ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ನಗರಾದ್ಯಂತ ರಾತ್ರಿ ಪೂರ್ತಿ ಕುಡಿದು ವಾಹನ ಚಾಲನೆ (ಡ್ರಂಕ್ ಅಂಡ್ ಡ್ರೈವ್) ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತದೆ.

ನಗರದ ವಿವಿಧ ಭಾಗಗಳಲ್ಲಿ ವಾಹನ ತಪಾಸಣೆ ನಡೆಸಲಾಗುವುದು. ಸಂಚಾರ ಸಿಗ್ನಲ್‌ಗಳು, ಮಾರ್ಗ ಬದಲಾವಣೆಗಳ ಸೂಚನೆಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಿದ್ದಾರೆ.

ನಿಷೇಧಿತ ಚಟುವಟಿಕೆಗಳು

ರಸ್ತೆ ಸಂಭ್ರಮಾಚರಣೆ ನಿಷೇಧ: ಸಾರ್ವಜನಿಕ ರಸ್ತೆ ಅಥವಾ ಫುಟ್‌ಪಾತ್‌ಗಳಲ್ಲಿ ಯಾವುದೇ ರೀತಿಯ ವಿಜಯೋತ್ಸವ, ಮೆರವಣಿಗೆ ಅಥವಾ ಗುಂಪುಗೂಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಬೈಕ್ ಸ್ಟಂಟ್‌ಗಳಿಗೆ ಬ್ರೇಕ್: ಬೈಕ್ ರ್ಯಾಲಿ, ವೀಲಿಂಗ್, ರೇಸಿಂಗ್ ಹಾಗೂ ಅಪಾಯಕಾರಿ ಸ್ಟಂಟ್‌ಗಳನ್ನು ಮಾಡುವುದನ್ನು ಕಟ್ಟುನಿಟ್ಟಾಗಿ ತಡೆಯಲಾಗಿದೆ.

ಅತಿಯಾದ ಹಾರ್ನ್ ಬಳಕೆ: ಸಂಭ್ರಮಾಚರಣೆಯ ಹೆಸರಿನಲ್ಲಿ ಅತಿಯಾಗಿ ಹಾರ್ನ್ ಬಾರಿಸಿ ಶಬ್ದ ಮಾಲಿನ್ಯ ಉಂಟುಮಾಡುವ ವಾಹನಗಳಿಗೆ ದಂಡ ವಿಧಿಸಲಾಗುತ್ತದೆ.

ಪಟಾಕಿ ನಿಷೇಧ: ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸುವುದು ಹಾಗೂ ಸಾರ್ವಜನಿಕರಿಗೆ ತೊಂದರೆ ಕೊಡುವುದನ್ನು ನಿಷೇಧಿಸಲಾಗಿದೆ.

ಸನ್‌ರೂಫ್ ಬಳಕೆ ನಿಷೇಧ: ಚಲಿಸುವ ಕಾರುಗಳ ಸನ್‌ರೂಫ್‌ಗಳಿಂದ ಹೊರಗೆ ತಲೆ ಹಾಕುವುದು ಅಥವಾ ಕಿಟಕಿಗಳಿಂದ ಹೊರಗೆ ನೇತಾಡುವುದನ್ನು ನಿಷೇಧಿಸಲಾಗಿದೆ.

ಸಾರ್ವಜನಿಕ ಮದ್ಯಪಾನ ನಿಷೇಧ: ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದು, ಗಲಾಟೆ ಮಾಡುವುದು ಅಥವಾ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ತಕ್ಷಣದ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

ಹೊರಾಂಗಣ ಎಲ್‌ಇಡಿ ಪ್ರದರ್ಶನ ಇಲ್ಲ: ಮಾಲ್‌ಗಳು, ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳು ಸಾರ್ವಜನಿಕ ರಸ್ತೆಗಳಿಗೆ ಮುಖಮಾಡಿ ದೊಡ್ಡ ಸ್ಕ್ರೀನ್ ಅಥವಾ ಎಲ್‌ಇಡಿ ಗೋಡೆಗಳ ಮೂಲಕ ಪಂದ್ಯವನ್ನು ಪ್ರದರ್ಶಿಸುವಂತಿಲ್ಲ.

ಪೂರ್ವ ಅನುಮತಿ ಕಡ್ಡಾಯ: ರಸ್ತೆ ಬದಿಯ ವಾಣಿಜ್ಯ ಎಲ್‌ಇಡಿ ಸ್ಕ್ರೀನ್‌ಗಳನ್ನು ಆಫ್ ಮಾಡಬೇಕು ಅಥವಾ ಮುಚ್ಚಬೇಕು. ಪೂರ್ವ ಅನುಮತಿ ಇಲ್ಲದೆ ಪ್ರದರ್ಶನ ನೀಡುವಂತಿಲ್ಲ.

ಸಾಮಾಜಿಕ ಜಾಲತಾಣಗಳ ಮೇಲೂ ನಿಗಾ: ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕ ಪೋಸ್ಟ್‌ಗಳು, ದ್ವೇಷದ ಸಂದೇಶಗಳು ಅಥವಾ ಎದುರಾಳಿ ತಂಡದ ಅಭಿಮಾನಿಗಳನ್ನು ಗುರಿಯಾಗಿಸಿಕೊಂಡು ನಿಂದಿಸುವುದನ್ನು ಮಾಡಬಾರದು ಎಂದು ಸೂಚಿಸಲಾಗಿದೆ.

ಸಂಚಾರ ಮತ್ತು ತಪಾಸಣೆ

ರಾತ್ರಿ ಪೂರ್ತಿ ಡ್ರಂಕ್ ಆಂಡ್ ಡ್ರೈವ್ ಚೆಕ್ಕಿಂಗ್: ನಗರದಾದ್ಯಂತ ಪ್ರಮುಖ ಜಂಕ್ಷನ್‌ಗಳಲ್ಲಿ ರಾತ್ರಿ ಪೂರ್ತಿ ಕಟ್ಟುನಿಟ್ಟಿನ ವಾಹನ ತಪಾಸಣೆ ಮತ್ತು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಕಾರ್ಯಾಚರಣೆ ನಡೆಯಲಿದೆ.

ಟೋಯಿಂಗ್ ಕಾರ್ಯಾಚರಣೆ: ಮುಖ್ಯ ರಸ್ತೆ ಹಾಗೂ ಫುಟ್‌ಪಾತ್‌ಗಳಲ್ಲಿ ಅಕ್ರಮವಾಗಿ ಪಾರ್ಕಿಂಗ್ ಮಾಡಿ ಸಂಚಾರಕ್ಕೆ ಅಡ್ಡಿಪಡಿಸುವ ವಾಹನಗಳನ್ನು ಟೋಯಿಂಗ್ ಮಾಡಲಾಗುತ್ತದೆ.

ದೂರು ನೀಡಲು ಸಹಾಯವಾಣಿ: ಸಾರ್ವಜನಿಕರು ಎಲ್ಲಾದರೂ ಅತಿವೇಗದ ಚಾಲನೆ ಅಥವಾ ನಿಯಮ ಉಲ್ಲಂಘನೆಯನ್ನು ಗಮನಿಸಿದರೆ ತಕ್ಷಣ ತುರ್ತು ಸಹಾಯವಾಣಿ ಸಂಖ್ಯೆ 112 ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಜೊತೆ ಶಾಂತಿ ಒಪ್ಪಂದದತ್ತ ಅಮೆರಿಕಾ; ಅಣ್ವಸ್ತ್ರ ತ್ಯಜಿಸಲು ಒಪ್ಪಿದ ಟೆಹ್ರಾನ್, ಟ್ರಂಪ್ ಮಹತ್ವದ ಹೇಳಿಕೆ..!

ಭಾರತೀಯ ಸೇನೆಗೆ ಹೊಸ ಸಾರಥಿ: CDS ಆಗಿ ಎನ್‌ಎಸ್ ರಾಜಾ ಸುಬ್ರಮಣಿ ಅಧಿಕಾರ ಸ್ವೀಕಾರ..!

US-Iran war: ಶಾಂತಿ ಕರಡು ಪ್ರತಿಗೆ ತಿದ್ದುಪಡಿ: ಪರಮಾಣು ಮುಕ್ತ ಇರಾನ್‌ಗೆ ಟ್ರಂಪ್ ಪಟ್ಟು, ಕೊನೆ ಕ್ಷಣದಲ್ಲಿ ಬಿಗ್ ಶಾಕ್ ಕೊಟ್ಟ ಅಮೆರಿಕಾ..!

ರೂ.1,413 ಕೋಟಿ ಆಸ್ತಿ, ರೂ.900 ಕೋಟಿಯ ಮಾಲ್.. ಆದ್ರೆ ನಮ್ಮ ಮುಂದಿನ ಸಿಎಂ ಡಿಕೆಶಿ ಹೆಸರಲ್ಲಿರೋದು ಒಂದೇ ಒಂದು ಹಳೇ ಕ್ವಾಲಿಸ್ ಕಾರ್..!

ಸಚಿವ ಸಂಪುಟ ರಚನೆಗೆ ಕಾಂಗ್ರೆಸ್ ಭಾರೀ ಕಸರತ್ತು: ಸಿದ್ದು-ಡಿಕೆಶಿ ಬಣ ಸಮತೋಲನಕ್ಕೆ ಮಾಸ್ಟರ್‌ಪ್ಲ್ಯಾನ್, 11:11:11 ಫಾರ್ಮುಲಾಗೆ ಹೈಕಮಾಂಡ್ ಗ್ರೀನ್ ಸಿಗ್ನಲ್..?

SCROLL FOR NEXT