ದುರ್ಘಟನೆಗೆ ಶಾಸಕ ಎಚ್‌ಡಿ ರಂಗನಾಥ್ ಸಂತಾಪ ಸೂಚಿಸಿದರು. 
ರಾಜ್ಯ

ನ್ಯಾಯಾಧೀಶನಾಗಬೇಕೆಂಬ ಕನಸು ಹೊತ್ತಿದ್ದ ದಾವಣಗೆರೆ ವಕೀಲ ಉತ್ತರಾಖಂಡ್ ಹೆಲಿಕಾಪ್ಟರ್ ದುರಂತಕ್ಕೆ ಬಲಿ..!

ಸುಧೀರ್ ಅವರು ವಕೀಲ ವೃತ್ತಿಯಲ್ಲಿದ್ದರೂ ಹಣದ ಆಸೆಯಿಲ್ಲದೆ, ತಮ್ಮ ಹುಟ್ಟೂರಾದ ತ್ಯಾವನಿಗೆ ಗ್ರಾಮದ ಬಡ ಜನರಿಗೆ ಉಚಿತವಾಗಿ ಅಥವಾ ಅತ್ಯಂತ ಕಡಿಮೆ ವೆಚ್ಚದಲ್ಲಿ ಕಾನೂನು ನೆರವು ನೀಡುತ್ತಿದ್ದರು.

ಬೆಂಗಳೂರು: ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಕರ್ನಾಟಕದ ಐದು ಯಾತ್ರಿಕರಲ್ಲಿ ಬೆಂಗಳೂರಿನ ವಕೀಲ ಸುಧೀರ್ ಕೆ (49) ಕೂಡ ಒಬ್ಬರಾಗಿದ್ದು, ತಂದೆಯ ಹಾದಿಯಲ್ಲೇ ಸಾಗಿ ತಾವೂ ನ್ಯಾಯಾಧೀಶರಾಗಬೇಕೆಂಬ ಅವರ ದೊಡ್ಡ ಕನಸು ಇದೀಗ ಅರ್ಧಕ್ಕೆ ಕಮರಿಹೋಗಿದೆ.

ಮೃತ ಸುಧೀರ್ ಅವರು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ತ್ಯಾವನಿಗೆ ಗ್ರಾಮದ ಪ್ರಸಿದ್ಧ ಹಾಗೂ ಸುಶಿಕ್ಷಿತ 'ಕೊಕ್ಕನೂರು' ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಇವರ ತಂದೆ ಮಲ್ಲೇಶಪ್ಪ ಅವರು ಈ ಹಿಂದೆ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು. ತಂದೆಯ ಪ್ರೇರಣೆಯಿಂದ ಸುಧೀರ್ ಅವರಿಗೂ ನ್ಯಾಯಾಧೀಶರಾಗಬೇಕೆಂಬ ತೀವ್ರ ಆಸೆಯಿತ್ತು.

ಸುಧೀರ್ ಅವರು ವಕೀಲ ವೃತ್ತಿಯಲ್ಲಿದ್ದರೂ ಹಣದ ಆಸೆಯಿಲ್ಲದೆ, ತಮ್ಮ ಹುಟ್ಟೂರಾದ ತ್ಯಾವನಿಗೆ ಗ್ರಾಮದ ಬಡ ಜನರಿಗೆ ಉಚಿತವಾಗಿ ಅಥವಾ ಅತ್ಯಂತ ಕಡಿಮೆ ವೆಚ್ಚದಲ್ಲಿ ಕಾನೂನು ನೆರವು ನೀಡುತ್ತಿದ್ದರು.

ಬೆಂಗಳೂರಿಗೆ ಬಂದು ಕೋರ್ಟ್ ವೆಚ್ಚ ಭರಿಸಲು ಸಾಧ್ಯವಾಗದ ಬಡ ಹಳ್ಳಿಗರ ಪರವಾಗಿ ಅವರು ವಕಾಲತ್ತು ವಹಿಸುವ ಮೂಲಕ ಜನಪ್ರಿಯತೆಗಳಿಸಿದ್ದರು.

ಈ ಕುರಿತು ಮಾತನಾಡಿದ ಅವರ ಸಂಬಂಧಿ ಜಗದೀಶ್, ಸುಧೀರ್ ಕುಟುಂಬದವರೊಂದಿಗೆ ಹಾಗೂ ಗ್ರಾಮಸ್ಥರೊಂದಿಗೆ ಬಹಳ ಆತ್ಮೀಯವಾಗಿದ್ದರು. ಬೆಂಗಳೂರಿಗೆ ತೆರಳಲು ಸಾಧ್ಯವಾಗದ ಗ್ರಾಮಸ್ಥರ ಪ್ರಕರಣಗಳನ್ನು ಅವರೇ ನಿರ್ವಹಿಸಿ ನ್ಯಾಯ ದೊರಕಿಸಿಕೊಡಲು ಸಹಾಯ ಮಾಡುತ್ತಿದ್ದರು ಎಂದು ತಿಳಿಸಿದರು.

ಬಡವರು ಮತ್ತು ನಿರ್ಗತಿಕರಿಗೆ ನ್ಯಾಯ ದೊರಕಿಸಿಕೊಡಲು ಸದಾ ಶ್ರಮಿಸುತ್ತಿದ್ದ ಸುಧೀರ್ ಅವರು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಸುಧೀರ್ ಅವರ ಮೃತದೇಹವನ್ನು ಸ್ವಗ್ರಾಮಕ್ಕೆ ತರಲು ಸಂಬಂಧಿಕರು ಈಗಾಗಲೇ ಉತ್ತರಾಖಂಡಕ್ಕೆ ತೆರಳಿದ್ದಾರೆ. ಅಂತ್ಯಕ್ರಿಯೆಯನ್ನು ಎಲ್ಲಿ ನಡೆಸಬೇಕು ಎಂಬುದರ ಕುರಿತು ಕುಟುಂಬದವರು ಇನ್ನೂ ನಿರ್ಧಾರ ಕೈಗೊಂಡಿಲ್ಲ.

ಸುಧೀರ್ ಅವರ ಚಿಕ್ಕಪ್ಪ ಕೃಷ್ಣಕುಮಾರ್ ಮಾತನಾಡಿ, ಉತ್ತರಾಖಂಡದ ಕೇದಾರನಾಥ ಮತ್ತು ಬದರಿನಾಥ ಯಾತ್ರೆಗೆ ತೆರಳುವ ಮೊದಲು ಸುಧೀರ್ ಅವರು ಪ್ರಕರಣವೊಂದರ ಸಂಬಂಧ ಸುಪ್ರೀಂ ಕೋರ್ಟ್‌ಗೆ ಭೇಟಿ ನೀಡಿದ್ದರು ಎಂದು ಹೇಳಿದ್ದಾರೆ.

ನಮಗೆ ಬೆಳಗಿನ ಜಾವ 3 ಗಂಟೆಗೆ ಈ ದುಃಖದ ಸುದ್ದಿ ತಿಳಿಯಿತು. ಘಟನೆಯಿಂದ ಕುಟುಂಬದವರೆಲ್ಲ ತೀವ್ರ ದುಃಖಕ್ಕೊಳಗಾಗಿದ್ದೇವೆ ಎಂದು ಕಂಬನಿ ಮಿಡಿದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಕೂಟದ ಬೃಹತ್ ರ‍್ಯಾಲಿಗೆ ರಾಮಲೀಲಾ ಮೈದಾನ ಸಜ್ಜು: ದೆಹಲಿಗೆ ರಾಜಕೀಯ ನಾಯಕರ, ಬೆಂಬಲಿಗರ ಆಗಮನ

ಕನ್ನಡ ಕೇವಲ ಭಾಷೆಯಲ್ಲ, ನಮ್ಮ ಅಸ್ಮಿತೆ, ಆತ್ಮಗೌರವ: ಕನ್ನಡದ ಕಂಪು ಜಗದಗಲ ಪಸರಿಸಲಿ; ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವ ಶುಭಾಶಯ ಕೋರಿದ ಸಿಎಂ

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಶಿಕ್ಷೆ ಕೊಡಿಸಿದ್ದ ತನಿಖಾಧಿಕಾರಿಗಳು ಸೇರಿ ರಾಜ್ಯ 6 ಅಧಿಕಾರಿಗಳಿಗೆ ಕೇಂದ್ರ ಗೃಹಮಂತ್ರಿ ದಕ್ಷತಾ ಪದಕ!

ಸರ್ಕಾರದ ರಾಜೀನಾಮೆಗೆ ಆಗ್ರಹ: ಮಣಿಪುರದಲ್ಲಿ ಸಾವಿರಾರು ಜನರ ಪ್ರತಿಭಟನೆ, ಕೇಂದ್ರಕ್ಕೆ 'ಅಂತಿಮ ಕರೆ'

ಜಿ20 ರಾಷ್ಟ್ರಗಳ ವಿದೇಶಾಂಗ ಸಚಿವರೊಂದಿಗೆ ವಿದೇಶಾಂಗ ಸಚಿವ ಜೈಶಂಕರ್ ದ್ವಿಪಕ್ಷೀಯ ಸಭೆ: ಉಕ್ರೇನ್ ಸಂಘರ್ಷದ ಬಗ್ಗೆ ಚರ್ಚೆ