ಪ್ರಿಯಾಂಕ್ ಖರ್ಗೆ, ಎಚ್ ಡಿ ಕುಮಾರಸ್ವಾಮಿ  
ರಾಜ್ಯ

ನನ್ನ ಮೇಲೆ ಇಡಿ, ಐಟಿ ಛೂ ಬಿಡಲು ಕೇಂದ್ರ ಸಚಿವರ ಒತ್ತಡ: ಪ್ರಿಯಾಂಕ್‌ ಖರ್ಗೆ ಆರೋಪ!

ಆರ್‌ಎಸ್‌ಎಸ್‌ನ ಇತ್ತೀಚಿನ ‘ಗ್ರೂಪ್-ಡಿ’ ನೇಮಕಾತಿಯಂತಿರುವ ವ್ಯಕ್ತಿಯೊಬ್ಬರು ಈ ಹುನ್ನಾರದ ಹಿಂದೆ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಬೆಂಗಳೂರು: ಕೆಪಿಎಸ್‌ಸಿ ತನಿಖೆಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡು, ನನ್ನ ಹಾಗೂ ಸಂಪುಟ ಸಹೋದ್ಯೋಗಿಗಳ ವಿರುದ್ಧ ಐಟಿ ಹಾಗೂ ಇ.ಡಿ. ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವಂತೆ ಕೇಂದ್ರ ಸಚಿವರೊಬ್ಬರು ಮೋದಿ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಅವರು, ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡು ದಾಳಿ ನಡೆಸಲು ಸಿದ್ಧತೆ ನಡೆಯುತ್ತಿರುವ ಬಗ್ಗೆ ದೆಹಲಿಯ ಅಧಿಕಾರದ ಕಾರಿಡಾರ್‌ನಲ್ಲಿ ಮಾತುಗಳು ಕೇಳಿಬರುತ್ತಿವೆ ಎಂದು ತಿಳಿಸಿದ್ದಾರೆ.

ಆರ್‌ಎಸ್‌ಎಸ್‌ನ ಇತ್ತೀಚಿನ ‘ಗ್ರೂಪ್-ಡಿ’ ನೇಮಕಾತಿಯಂತಿರುವ ವ್ಯಕ್ತಿಯೊಬ್ಬರು ಈ ಹುನ್ನಾರದ ಹಿಂದೆ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಕೆಪಿಎಸ್‌ಸಿ ನೇಮಕಾತಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಮತ್ತು ನನ್ನ ಹೆಸರನ್ನು ಸುಳ್ಳು ಆರೋಪಗಳ ಮೂಲಕ ಸಿಲುಕಿಸಲು, ಪ್ರಕರಣದ ಎಲ್ಲ ಆರೋಪಿಗಳ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಇ.ಡಿ.ಯನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಅತ್ಯಂತ ಕಠಿಣ ಪರಿಶ್ರಮಿ ಎಂದು ಕರೆದೊಳ್ಳುವ ಸಚಿವರು, ಈ ಮಾನ್ಯ ಕೇಂದ್ರ ಸಚಿವರು ರಾಜಕೀಯವಾಗಿ ತಾವು ಒಬ್ಬರೇ ಮುಳುಗಲು ಸಿದ್ಧರಿಲ್ಲ. ತಮ್ಮ ಹತಾಶೆಯ ಪರಾಕಾಷ್ಠೆಯಲ್ಲಿ ಅವರು ತಮ್ಮ ಮೈತ್ರಿಕೂಟದ ಪಾಲುದಾರರನ್ನೂ ಜೊತೆಯಲ್ಲೇ ಮುಳುಗಿಸಲು ಹವಣಿಸುತ್ತಿದ್ದಾರೆ ಎಂದು ಪ್ರಿಯಾಂಕ್‌ ವ್ಯಂಗ್ಯವಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Ayodhya ರಾಮಮಂದಿರ ದೇಣಿಗೆ ದುರುಪಯೋಗ ಪ್ರಕರಣ: ವಿಚಾರಣೆ ಸ್ಥಳೀಯ ನ್ಯಾಯಾಲಯಕ್ಕೆ ವರ್ಗಾಯಿಸಿದ ಸುಪ್ರೀಂ ಕೋರ್ಟ್..!

ದೆಹಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ: ಮೊದಲ ದಿನವೇ 1,539 ವಾಹನಗಳಿಗೆ ನಿರ್ಬಂಧ, 68.4 ಲಕ್ಷ ರೂ. ದಂಡ ವಸೂಲಿ..!

ಅಮೆರಿಕದಲ್ಲಿ ಭೀಕರ ವಿಮಾನ ದುರಂತ: ಬೆಂಕಿ ಉಂಡೆಯಂತೆ ಜನನಿಬಿಡ ರಸ್ತೆಗೆ ಅಪ್ಪಳಿಸಿದ ಖಾಸಗಿ ಜೆಟ್; 9 ಮಂದಿ ದುರ್ಮರಣ..!

ಬರಿಗೈಯಲ್ಲೇ ಶೌಚಾಲಯ ಕ್ಲೀನ್ ಮಾಡಿದ ಬಿಜೆಪಿ ಸಂಸದ ಜನಾರ್ದನ ಮಿಶ್ರಾ, Video ವೈರಲ್

INDIA bloc's rally:'ಸರಿಯಾಗಿ ನಕಲಿ ಮಾಡಲೂ ಆಗಿಲ್ಲ; ರಾಮಲೀಲಾ ಮೈದಾನದ ಜನಸಾಗರ ತೋರಿಸಲು ಕಾಂಗ್ರೆಸ್ AI ಫೋಟೋ ಬಳಕೆ- ಕಿರಣ್ ರಿಜಿಜು ಲೇವಡಿ