ನ.13ಕ್ಕೆ ಪ್ರಧಾನಿ ನರೇಂದ್ರ ಮೋದಿಯಿಂದ ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆ  Online Desk
ರಾಜ್ಯ

ನ.15 ಅಲ್ಲ, 13ಕ್ಕೆ ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆ ಎಂದ ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು ನಮ್ಮ ಮೆಟ್ರೋದ ಬಹುನಿರೀಕ್ಷಿತ ಪಿಂಕ್ ಲೈನ್ ಮೊದಲ ಹಂತದ ಉದ್ಘಾಟನೆ ನವೆಂಬರ್ 13ರಂದು ನಡೆಯಲಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮಾಹಿತಿ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ಬೆಂಗಳೂರಿನ ಮೆಟ್ರೋ ಪ್ರಯಾಣಿಕರು ಬಹುದಿನಗಳಿಂದ ಕಾಯುತ್ತಿದ್ದ ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಮೊದಲ ಹಂತದ ಉದ್ಘಾಟನೆ ನವೆಂಬರ್ 13 ರಂದು ನಡೆಯಲಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

ಈ ಹಿಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಮಂತ್ರಣ ನೀಡಿ, ನವೆಂಬರ್ 15 ರಂದು ಮಾರ್ಗವನ್ನು ಲೋಕಾರ್ಪಣೆಗೊಳಿಸುವ ಸಾಧ್ಯತೆಯಿದೆ ಎಂದು ತಿಳಿಸಿದ್ದರು. ಆದರೆ, ಪ್ರಧಾನಿಯವರ ಕರ್ನಾಟಕ ಪ್ರವಾಸದ ವೇಳಾಪಟ್ಟಿಗೆ ಅನುಗುಣವಾಗಿ ಇದೀಗ ಎರಡು ದಿನ ಮುಂಚಿತವಾಗಿ, ಅಂದರೆ ನವೆಂಬರ್ 13ಕ್ಕೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ಸಂಸದರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ "November 13th. 🩷 #PinkLine" ಎಂದು ಪೋಸ್ಟ್ ಮಾಡುವ ಮೂಲಕ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಈಗ ಸಿಎಂ ಹೇಳಿದ್ದ ದಿನಾಂಕಕ್ಕಿಂತ ಎರಡು ದಿನ ಮುಂಚಿತವಾಗಿಯೇ ಮೆಟ್ರೋ ಹಳಿಗೆ ಇಳಿಯಲು ಸಜ್ಜಾಗಿದೆ.

ಯಾವ ಮಾರ್ಗ ಮುಕ್ತ?

ಈ ಮೊದಲ ಹಂತದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆ ವರೆಗಿನ ಒಟ್ಟು 7.5 ಕಿಲೋಮೀಟರ್ ಉದ್ದದ ಎಲಿವೇಟೆಡ್ ಮಾರ್ಗ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ. ಅದರಂತೆ, ಈ ಮಾರ್ಗದಲ್ಲಿ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂ-ಬಿ, ಜೆ.ಪಿ. ನಗರ 4ನೇ ಹಂತ, ಜಯದೇವ ಆಸ್ಪತ್ರೆ ಮತ್ತು ತಾವರೆಕೆರೆ ಸೇರಿದಂತೆ ಒಟ್ಟು 6 ನಿಲ್ದಾಣಗಳು ಕಾರ್ಯಾಚರಣೆ ಆರಂಭಿಸಲಿವೆ. ಒಟ್ಟಾರೆಯಾಗಿ, ಈ ಮಾರ್ಗದ ಆರಂಭದೊಂದಿಗೆ ಬೆಂಗಳೂರು ಮೆಟ್ರೋದ ಒಟ್ಟು ಕಾರ್ಯಾಚರಣೆಯ ಜಾಲವು 96.10 ಕಿ.ಮೀ ನಿಂದ 103.60 ಕಿ.ಮೀ ಗೆ ವಿಸ್ತರಣೆಯಾಗಲಿದೆ.

ಹಾಗಾದ್ರೆ, ಉಳಿದ ಸುರಂಗ ಮಾರ್ಗ ಓಪನ್ ಯಾವಾಗ?

ಈ ಪಿಂಕ್ ಲೈನ್ನ ಒಟ್ಟು 21.3 ಕಿ.ಮೀ ಮಾರ್ಗದಲ್ಲಿ, ಡೈರಿ ಸರ್ಕಲ್‌ನಿಂದ ನಾಗವಾರದವರೆಗಿನ ಉಳಿದ 13.8 ಕಿ.ಮೀ ಉದ್ದದ ಸುರಂಗ ಮಾರ್ಗದ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜಾತಿ ಬಲದಿಂದಲೇ HDK ಸಿಎಂ ಆಗಿದ್ದು, ನಾನೂ ಎಲ್ಲವನ್ನು ಬಿಟ್ಟು ನಿಂತರೆ ಕಷ್ಟವಾಗುತ್ತೆ: ಪ್ರಿಯಾಂಕ್ ಖರ್ಗೆ ಎಚ್ಚರಿಕೆ

ನವೆಂಬರ್ 7, ದೀಪಾವಳಿ ಹಬ್ಬದಂದು ದೆಹಲಿ-ಎನ್‌ಸಿಆರ್‌ನಲ್ಲಿ ಹಸಿರು ಪಟಾಕಿ ಸಿಡಿಸಲು 'ಸುಪ್ರೀಂ' ಅನುಮತಿ

ಡಾ. ಶ್ರೀನಿಧಿ ಜೊತೆ ಶಾಸಕ ದರ್ಶನ್ ಧ್ರುವನಾರಾಯಣ್‌ ಎಂಗೇಜ್‌ಮೆಂಟ್; 4 ವರ್ಷ ಪ್ರೀತಿಸಿ ಮದುವೆಗೆ ಸಜ್ಜಾದ ಜೋಡಿ!

ಮಹಂತ್ ಕಾಶ್ಮೀರಿ ಗಿರಿ ಮನೆಯಲ್ಲಿ ಡ್ರಗ್ಸ್ ಇಟ್ಟು ಸಿಕ್ಕಿಬಿದ್ದ ಪೊಲೀಸರು; ತಾನೇ ತೋಡಿದ ಖೆಡ್ಡಾಗೆ ಬಿದ್ದ ASI ಅಮಾನತು! Video

ಸ್ಟಿಂಗ್ ಆಪರೇಷನ್: ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕನ ಜೊತೆ ಸಿಎಂ ಡಿಕೆಶಿ ಕನೆಕ್ಷನ್! CDR ದಾಖಲೆ ಬಿಡುಗಡೆ; ಕೃಪಾ ಆಳ್ವರನ್ನು ವಿದೇಶಕ್ಕೆ ಕಳುಹಿಸಿದ್ದು ಯಾಕೆ?- HDK