ಕೆಎಂ ಶಿವಲಿಂಗೇಗೌಡ 
ರಾಜ್ಯ

ಹಾಸನಾಂಬೆ ದರ್ಶನೋತ್ಸವ: ಕಾಂಗ್ರೆಸ್ ಪದಾಧಿಕಾರಿಗಳಿಗೆ ಸಚಿವ ಶಿವಲಿಂಗೇಗೌಡ ಭರ್ಜರಿ ಗಿಫ್ಟ್!

ಹಾಸನಾಂಬೆ ದರ್ಶನ ಆರಂಭವಾದ ಐದನೇ ದಿನವಾದ ಮಂಗಳವಾರವೂ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ದೇವಿಯ ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ.

ಹಾಸನ: ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನ ಪಡೆಯಲು ರಾಜ್ಯದ ಮೂಲೆ ಮೂಲೆಗಳಿಂದ ಭಕ್ತ ಸಾಗರವೇ ಹರಿದುಬರುತ್ತಿದೆ.

ಹಾಸನಾಂಬೆ ದರ್ಶನ ಆರಂಭವಾದ ಐದನೇ ದಿನವಾದ ಮಂಗಳವಾರವೂ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ದೇವಿಯ ದರ್ಶನಕ್ಕಾಗಿ ಆಗಮಿಸುತ್ತಿದ್ದು, ಸಾಮಾನ್ಯ ಧರ್ಮದರ್ಶನದ ಸಾಲಿನ ಜೊತೆಗೆ, 300 ರೂಪಾಯಿ ಹಾಗೂ 1,000 ರೂಪಾಯಿ ಮೌಲ್ಯದ ವಿಶೇಷ ದರ್ಶನದ ಟಿಕೆಟ್ ಪಡೆದವರ ಸರತಿ ಸಾಲುಗಳಲ್ಲೂ ಕಾಲಿಡಲು ಜಾಗವಿಲ್ಲದಷ್ಟು ಜನದಟ್ಟಣೆ ಇತ್ತು.

ಇನ್ನೊಂದೆಡೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಅವರು ಕಾಂಗ್ರೆಸ್ ಪದಾಧಿಕಾರಿಗಳಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ.

ಸಚಿವ ಶಿವಲಿಂಗೇಗೌಡ ಅವರು ಹಾಸನಾಂಬೆ ದರ್ಶನಕ್ಕೆ ತಮ್ಮ ಆಪ್ತರಿಗಾಗಿ 5 ಲಕ್ಷ ರೂಪಾಯಿ ನೀಡಿ 500 ಟಿಕೆಟ್ ಖರೀದಿಸಿದ್ದಾರೆ. ಖುದ್ದು ತಾವೇ ಕೌಂಟರ್​ಗೆ ತೆರಳಿ 1 ಸಾವಿರ ರೂ. ಮೌಲ್ಯದ 500 ಟಿಕೆಟ್ ಖರೀದಿಸಿದ್ದು, ಬಳಿಕ ಟಿಕೆಟ್ ಗಳನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಅವರಿಗೆ ಹಸ್ತಾಂತರಿಸಿದರು.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಶಿವಲಿಂಗೇಗೌಡ ಅವರು, ಹೆಚ್ಚುವರಿ ಟಿಕೆಟ್ ಪ್ರಿಂಟ್ ಮಾಡಿಸಲು ಆಗಲ್ಲ. ಹೆಚ್ಚು ಟಿಕೆಟ್ ಹಂಚಿದರೆ ಸಾಮಾನ್ಯ ಭಕ್ತರಿಗೆ ತೊಂದರೆ ಆಗುತ್ತದೆ. ಹೀಗಾಗಿ ಪಕ್ಷದ ಪದಾಧಿಕಾರಿಗಳಿಗೆ 500 ಟಿಕೆಟ್ ಖರೀದಿಸಿದ್ದೇನೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾಂಗ್ರೆಸ್ ನಾಯಕರನ್ನು ತುಂಡು ತುಂಡಾಗಿ ಕತ್ತರಿಸಿ ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ': ನಾಲಿಗೆ ಹರಿಬಿಟ್ಟ ನಾರಾಯಣಸ್ವಾಮಿ!

ಮಾವೋ ಬಳಿಕ ದಾಖಲೆ ಸಂಖ್ಯೆಯಲ್ಲಿ CCP ಪದಾಧಿಕಾರಿಗಳ ಉಚ್ಚಾಟನೆ: ಚೀನಾದಲ್ಲಿ ಮುಂದುವರಿದ Xi ಸರ್ವಾಧಿಕಾರಿ ಧೋರಣೆ!

Raptadu ಶಾಲಾ ವಿದ್ಯಾರ್ಥಿನಿ ಮೇಲೆ ಹಲ್ಲೆ: ಆರೋಪಿ ಹೇಮಂತ್‌ ಕಾಲು ಕತ್ತರಿಸಿ ಹಾಕಿದ ವೈದ್ಯರು!

'ಅಂಕಲ್ ಜೊತೆ ರೊಮ್ಯಾನ್ಸ್, ಯಾವಾಗ ಸಾಯುತ್ತೇನೋ ಅಂತ ಕಾಯ್ತಿದ್ದೆ': ತೆಲುಗು ನಟನ ಸಿನಿಮಾ ಕುರಿತು ನಟಿ Radhika Apte ಅಸಮಾಧಾನ! Video

ದೇಶಾದ್ಯಂತ ಅರಾಜಕತೆ ಸೃಷ್ಟಿಸಲು ರಾಹುಲ್ ಗಾಂಧಿ ಯತ್ನ: ಬಿಜೆಪಿ ಪ್ರತಿಭಟನೆಯಲ್ಲಿ ವಿಜಯೇಂದ್ರ ವಾಗ್ದಾಳಿ