ನಂದಿನಿ ಬೆನ್ನಲ್ಲೇ ಖಾಸಗಿ ಹಾಲು, ಮೊಸರಿನ ದರವೂ ಭಾರೀ ಏರಿಕೆ! AI Image
ರಾಜ್ಯ

ಗಾಯದ ಮೇಲೆ ಬರೆ: ನಂದಿನಿ ಬೆನ್ನಲ್ಲೇ ಖಾಸಗಿ ಹಾಲು, ಮೊಸರಿನ ದರವೂ ಭಾರೀ ಏರಿಕೆ!

ಕರ್ನಾಟಕದಲ್ಲಿ ನಂದಿನಿ ಹಾಲು ಮತ್ತು ಮೊಸರಿನ ದರ ಏರಿಕೆಯ ಬೆನ್ನಲ್ಲೇ, ಹೆರಿಟೇಜ್ ಹಾಗೂ ದೊಡ್ಲಾ ಸೇರಿದಂತೆ ಪ್ರಮುಖ ಖಾಸಗಿ ಬ್ರ್ಯಾಂಡ್‌ಗಳೂ ಸಹ ತಮ್ಮ ಹಾಲು ಮತ್ತು ಮೊಸರಿನ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿ ಗ್ರಾಹಕರಿಗೆ ಶಾಕ್ ನೀಡಿವೆ. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ಕರ್ನಾಟಕದಲ್ಲಿ ನಂದಿನಿ ಉತ್ಪನ್ನಗಳ ಬೆಲೆ ಏರಿಕೆಯ ಬೆನ್ನಲ್ಲೇ ಇದೀಗ ಖಾಸಗಿ ಬ್ರ್ಯಾಂಡ್‌ಗಳ ಹಾಲು ಮತ್ತು ಮೊಸರಿನ ದರವೂ ಸಹ ಗಣನೀಯವಾಗಿ ಹೆಚ್ಚಳವಾಗಿದ್ದು, ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ನಂದಿನಿ ಬ್ರ್ಯಾಂಡ್‌ನ ಬೆಲೆ ಏರಿಕೆಯಿಂದಾಗಿ ಜನರು ಖಾಸಗಿ ಬ್ರ್ಯಾಂಡ್‌ಗಳತ್ತ ಮುಖ ಮಾಡಬಹುದು ಎಂದು ಅಂದಾಜಿಸಲಾಗಿತ್ತಾದರೂ, ಇದೀಗ ಖಾಸಗಿ ಕಂಪನಿಗಳೂ ಕೂಡ ಹಾಲು ಮತ್ತು ಮೊಸರಿನ ದರವನ್ನು ದಿಢೀರ್ ಪರಿಷ್ಕರಿಸಿವೆ. ಹಾಗಾದರೆ ಯಾವೆಲ್ಲಾ ಖಾಸಗಿ ಬ್ರ್ಯಾಂಡ್‌ಗಳ ಬೆಲೆ ಎಷ್ಟು ಹೆಚ್ಚಾಗಿದೆ? ಆ ಕುರಿತ ವರದಿ ಇಲ್ಲಿದೆ:

ರಾಜ್ಯ ಸರ್ಕಾರ ಮತ್ತು ಕೆಎಂಎಫ್ ನವೆಂಬರ್ 1ರಿಂದ ಅನ್ವಯವಾಗುವಂತೆ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ₹8 ರಿಂದ ₹12 ರವರೆಗೆ ಮತ್ತು ಮೊಸರಿನ ದರವನ್ನು ಪ್ರತಿ ಲೀಟರ್‌ಗೆ ₹14 ರಷ್ಟು ಹೆಚ್ಚಿಸಿತ್ತು. ಇದರ ಬೆನ್ನಲ್ಲೇ ಖಾಸಗಿ ಡೈರಿ ಕಂಪನಿಗಳೂ ಸಹ ದರ ಪರಿಷ್ಕರಣೆ ಮಾಡಿರುವುದರಿಂದ ಮಧ್ಯಮ ವರ್ಗದ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಹಾಗಾದ್ರೆ, ಯಾವ ಕಂಪನಿಯ ಹಾಲು ಹಾಗೂ ಮೊಸರಿನ ದರ ಎಷ್ಟು ಏರಿಕೆ ಆಗಿದೆ ಗೊತ್ತಾ?

  • ಮದರ್ ಡೇರಿ: ಏಕರೂಪವಾಗಿ ₹2 ಹೆಚ್ಚಳ

  • ಹೆರಿಟೇಜ್ ಹಾಲು: ಪ್ರತಿ ಲೀಟರ್‌ಗೆ ₹5.90 ಹೆಚ್ಚಳವಾಗಿದ್ದು, ಕನಿಷ್ಠ ₹2.50 ರಿಂದ ಗರಿಷ್ಠ ₹4 ವರೆಗೆ ವಿವಿಧ ಪ್ಯಾಕೆಟ್‌ಗಳ ದರ ಏರಿಕೆಯಾಗಿದೆ

  • ಹೆರಿಟೇಜ್ ಮೊಸರು: ಪ್ರತಿ ಕೆಜಿಗೆ ₹14 ಹೆಚ್ಚಳವಾಗಿದೆ

  • ದೊಡ್ಲಾ ಹಾಲು: ಪ್ರತಿ ಲೀಟರ್‌ಗೆ ₹6 ಏರಿಕೆಯಾಗಿದೆ

  • ದೊಡ್ಲಾ ಮೊಸರು: ಪ್ರತಿ ಕೆಜಿಗೆ ₹12 ಹೆಚ್ಚಳವಾಗಿದೆ

  • ಇತರೆ ಬ್ರ್ಯಾಂಡ್‌ಗಳು: ತಿರುಮಲ ಮತ್ತು ಹಡ್ಸನ್ ಸೇರಿದಂತೆ ಇತರ ಖಾಸಗಿ ಡೈರಿ ಸಂಸ್ಥೆಗಳೂ ಹಾಲು, ಮೊಸರಿನ ದರ ಪರಿಷ್ಕರಣೆ ಮಾಡಿವೆ.

ಇದಕ್ಕೂ ಮುಂಚೆ, ನಂದಿನಿ ಟೋನ್ಡ್ ಹಾಲಿನ ದರ ಲೀಟರ್‌ಗೆ ₹46 ರಿಂದ ₹54 ಕ್ಕೆ ಏರಿಕೆಯಾಗಿದೆ. ಮೊಸರಿನ ಬೆಲೆ ಲೀಟರ್‌ಗೆ ₹54 ರಿಂದ ₹68 ಕ್ಕೆ ತಲುಪಿತ್ತು. ಆದರೆ, ಸಾರ್ವಜನಿಕರು ಮತ್ತು ಹೋಟೆಲ್ ಮಾಲೀಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆ ಮೇರೆಗೆ ಕೆಎಂಎಫ್ ನಂದಿನಿ ಮೊಸರಿನ ದರವನ್ನು ಪ್ರತಿ ಲೀಟರ್‌ಗೆ ₹2 ರಷ್ಟು ಕಡಿತಗೊಳಿಸಲು ಒಪ್ಪಿಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀವು ರಾಂಗ್ ನಂಬರ್ ಡಯಲ್ ಮಾಡಿದ್ದೀರಿ: ಇದು ಧರಣಿ, ಪ್ರತಿಭಟನೆಯ ಕಾಲ, ಅದನ್ನೇ ಮಾಡಿ ಎಂದು SC, ST ಕ್ಷೇತ್ರಗಳ ರೊಟೇಷನ್ ಅರ್ಜಿ ವಜಾಗೊಳಿಸಿದ ಸುಪ್ರೀಂ

ಪತ್ನಿಗೆ ಕೈಕೊಟ್ಟಾಗ ಧನಶ್ರೀ ಗರ್ಭೀಣಿ?: ಯುಜ್ವೇಂದ್ರ ಚಹಾಲ್ ಮಾಜಿ ಗೆಳತಿ ಆರ್‌ಜೆ ಮಹ್ವಾಶ್ ಸ್ಫೋಟಕ ಹೇಳಿಕೆ!

'ಮೊದಲು ಮೋದಿ, BJPಗೆ ಡೀಸೆಲ್ ದರ ಇಳಿಸೋಕೆ ಹೇಳಿ': ಬಸ್ ಪ್ರಯಾಣ ದರ ಹೆಚ್ಚಳ ಸಮರ್ಥಿಸಿಕೊಂಡ ಸಿಎಂ ಡಿಕೆ ಶಿವಕುಮಾರ್!

ಬೆಳಿಗ್ಗೆ 11 ಗಂಟೆಗೆ ಕುಡಿದು ಬರ್ತಾರೆ: ಪಂಜಾಬ್ ಸಿಎಂ ವಿರುದ್ಧ ರಾಹುಲ್ ಗಾಂಧಿ ಗಂಭೀರ ಆರೋಪ; Video

ದೀಪಾವಳಿಗೂ ಮುನ್ನ ಕೇಂದ್ರದಿಂದ ಗುಡ್ ನ್ಯೂಸ್: 18,000 ಅಗ್ನಿವೀರರ ಸೇವಾ ಅವಧಿ ನಾಲ್ಕು ವರ್ಷದಿಂದ ಆರು ವರ್ಷಗಳಿಗೆ ವಿಸ್ತರಣೆ! Video