ಬಿಎಸ್ ವಿಜಯೇಂದ್ರ, ಧನುಷ್ ಕುಮಾರ್ ಐಪಿಎಸ್ 
ರಾಜ್ಯ

ಕನ್ನಡಿಗರನ್ನು ಹೀಯಾಳಿಸಿದ ತಮಿಳುನಾಡು IPS ಅಧಿಕಾರಿ: ಕ್ಷಮೆಯಾಚನೆಗೆ ವಿಜಯೇಂದ್ರ ಆಗ್ರಹ!

ಕನ್ನಡ, ಕನ್ನಡಿಗ ಹಾಗೂ ಕರ್ನಾಟಕವನ್ನು ಹೀಯಾಳಿಸುವ ಪರಿಯಲ್ಲಿ ವ್ಯಂಗ ಮಾಡಿರುವ ತಮಿಳುನಾಡು ಮೂಲದ ಐಪಿಎಸ್ ಅಧಿಕಾರಿ ಬಿ.ಎಸ್ ಧನುಷ್ ಕುಮಾರ್ ನಡೆ ಉದ್ಧಟತನದ ಪರಮಾವಧಿ ಮೀರಿದೆ.

ಬೆಂಗಳೂರು: ಕನ್ನಡ, ಕನ್ನಡಿಗ ಹಾಗೂ ಕರ್ನಾಟಕವನ್ನು ಹೀಯಾಳಿಸುವ ಪರಿಯಲ್ಲಿ ವ್ಯಂಗ ಮಾಡಿರುವ ತಮಿಳುನಾಡು ಮೂಲದ ಐಪಿಎಸ್ ಅಧಿಕಾರಿ ಬಿ.ಎಸ್ ಧನುಷ್ ಕುಮಾರ್ ನಡೆ ಉದ್ಧಟತನದ ಪರಮಾವಧಿ ಮೀರಿದೆ. ಕನ್ನಡಿಗರು ಸೌಹಾರ್ದತೆ, ಬಾಂಧವ್ಯ ಬೆಸೆಯುವ ಸಂಸ್ಕೃತಿಗೆ ಹೆಸರಾದ ಶ್ರೀಮಂತ ಪರಂಪರೆ ಹೊಂದಿರುವ ಹೆಮ್ಮೆಯ ಭಾರತೀಯರಾಗಿದ್ದಾರೆ. ನಾಡು, ನುಡಿ, ಜನ ಹಾಗೂ ಜಲ ಸಂರಕ್ಷಣೆಯ ಪ್ರಶ್ನೆ ಬಂದಾಗ ಸ್ವಾಭಿಮಾನದಿಂದ ದನಿ ಎತ್ತುತ್ತಾರೆ.

ಕರ್ನಾಟಕದ ನೆಲ, ಜಲ ಹಾಗೂ ಇತರ ಮೂಲಭೂತ ಸೌಲಭ್ಯಗಳನ್ನು ಬಳಸಿಕೊಂಡು, ಉದ್ಯಮ‌ ಸ್ಥಾಪನೆ ಮಾಡಿ, ಆದಾಯ ಗಳಿಸುವ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಹೋರಾಟ ನಡೆಸುವ ಕನ್ನಡ ಪರ ಸಂಘಟನೆಗಳ ಕಾಳಜಿಯನ್ನು ವ್ಯಂಗ್ಯ ಮಾಡಿದರೆ, ಅದು ಅವರ ಅಸಹಿಷ್ಣುತೆಯನ್ನು ಸಂಕೇತಿಸುತ್ತದೆ. ಭಾರತೀಯ ಪೊಲೀಸ್ ಸೇವೆಗೆ ಆಯ್ಕೆಯಾಗಿ, ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತ ಅಧಿಕಾರಿಯೊಬ್ಬರು ಕನ್ನಡಿಗರನ್ನು ಕೆಣಕುವ ಕುಚೋದ್ಯದ ಪೋಸ್ಟ್ ಮಾಡಿರುವುದು ಇವರ ಸಂಕುಚಿತ ಮನೋಭಾವವನ್ನು ಸಾಕ್ಷೀಕರಿಸುತ್ತದೆ.

ತಮಿಳುನಾಡಿನಲ್ಲಿ ತಮಿಳು-ತಮಿಳಿಗ ಹೇಗೆ ಆದ್ಯತೆಯೋ ಕರ್ನಾಟಕದಲ್ಲಿ ಕನ್ನಡ-ಕನ್ನಡಿಗನೂ ಆದ್ಯತೆಯಾಗುವುದು ಸಹಜ ನ್ಯಾಯದ ಪ್ರತೀಕ. ಬಿ.ಎಸ್ ಧನುಷ್ ಕುಮಾರ್ ನಡೆ ಭಾಷಾ ಸಹೋದರತ್ವ ಹಾಗೂ ಬಾಂಧವ್ಯದಲ್ಲಿ ಬಿರುಕು ಮೂಡಿಸುವ ವಿಕೃತ ಮನೋಭಾವವನ್ನು ತೋರಿಸುತ್ತಿದೆ.

ಕನ್ನಡಿಗರ ಶಕ್ತಿ ಹಾಗೂ ಪ್ರತಿಭಾ ಸಾಮರ್ಥ್ಯವನ್ನು ಅಪಮಾನಿಸಿರುವ ಐಪಿಎಸ್ ಅಧಿಕಾರಿ ಬಿ.ಎಸ್. ಧನುಷ್ ಕುಮಾರ್ ಕೂಡಲೇ ಕರ್ನಾಟಕದ ಜನತೆಯ ಕ್ಷಮೆ ಯಾಚಿಸಲಿ. ತಮಿಳುನಾಡು ಸರ್ಕಾರ ಈ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲಿ. ಸಾಮಾಜಿಕ ಜಾಲತಾಣದಿಂದ ಪೋಸ್ಟ್ ಅಳಿಸಬಹುದು. ಆದರೆ ಕನ್ನಡಿಗರ ಸ್ವಾಭಿಮಾನಕ್ಕೆ ಮಾಡಿದ ಅವಮಾನವನ್ನು ಅಳಿಸಲು ಸಾಧ್ಯವಿಲ್ಲ. ಕನ್ನಡಿಗರ ಸ್ವಾಭಿಮಾನದ ವಿಷಯದಲ್ಲಿ ಯಾವುದೇ ರಾಜಿಯ ಪ್ರಶ್ನೆಯೇ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಎಂಟಿಸಿ ಬಸ್ ದರ ಶೇ. 33-35ರಷ್ಟು; ಇತರ ಸಾರಿಗೆ ಬಸ್ ದರ ಶೇ. 23ರಷ್ಟು ಹೆಚ್ಚಳ; ನೂತನ ದರ ಇಂದು ಮಧ್ಯರಾತ್ರಿಯಿಂದ ಜಾರಿ; Video

ಅಮೆರಿಕ ಮಧ್ಯಂತರ ಚುನಾವಣೆ ಫಲಿತಾಂಶ: 'Mr. ಪ್ರಧಾನಿ ಮೋದಿ ಎಚ್ಚರ.. ಭಾರತದಲ್ಲೂ ಇದೇ ಮರುಕಳಿಸುತ್ತೆ': ಕಾಂಗ್ರೆಸ್ ನಾಯಕಿ Shama Mohamed

‘Hazardous Waste’: ಅಮೆರಿಕ ಅಧ್ಯಕ್ಷ Donald Trump ರನ್ನು ಕಸದ ಬುಟ್ಟಿಗೆ ಎಸೆದ ಇರಾನ್! ಚುನಾವಣಾ ಹಿನ್ನಡೆಗೆ ಭೀಕರ ವ್ಯಂಗ್ಯ!

ಬೆಳಗಾವಿ: ಪ್ರೇಯಸಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಉಸಿರುಗಟ್ಟಿಸಿ ಕೊಂದ ಕಾನ್ಸ್‌ಟೇಬಲ್!

ಗ್ಯಾಸ್ ಸಿಲಿಂಡರ್ ಡೆಲಿವರಿ ವೇಳೆ ಭಾರಿ ಅಗ್ನಿ ಅವಘಡ, ದೇವರ ದೀಪದಿಂದ ಹೊತ್ತಿದ ಬೆಂಕಿ, Video Viral