ಸಂಗ್ರಹ ಚಿತ್ರ 
ರಾಜ್ಯ

ಸೋತ ಅಭ್ಯರ್ಥಿಗಳಿಗೆ ಸಾರ್ವಜನಿಕ ಹುದ್ದೆ 'ಸಾಂತ್ವನ ಬಹುಮಾನ'ವಲ್ಲ; ಸರ್ಕಾರದ ಹಿಂಬಾಗಿಲ ನೇಮಕಕ್ಕೆ ಹೈಕೋರ್ಟ್ ತಡೆ..!

ಚುನಾವಣೆಯಲ್ಲಿ ಜನರಿಂದ ತಿರಸ್ಕೃತರಾದವರನ್ನು ಮತ್ತೆ ಅದೇ ಕ್ಷೇತ್ರದ ಸಮಿತಿಗಳಿಗೆ ಅಧ್ಯಕ್ಷರನ್ನಾಗಿ ಕೂರಿಸುವುದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾದುದು.

ಬೆಂಗಳೂರು: ಸೋತವರಿಗೆ ಅಭ್ಯರ್ಥಿಗೆ ಹಿಂಬಾಗಿಲ ಪ್ರವೇಶಕ್ಕೆ ಅವಕಾಶವಿಲ್ಲ, ರಾಜಕೀಯ ನಿಷ್ಠೆಗೆ ಸಾರ್ವಜನಿಕ ಹುದ್ದೆಗಳ ಬಹುಮಾನವಾಗಿ ನೀಡಬೇಡಿ: ಸರ್ಕಾರಕ್ಕೆ ಹೈಕೋರ್ಟ್ ಖಡಕ್ ಎಚ್ಚರಿಕೆ

ಬೆಂಗಳೂರು: ಚುನಾವಣೆಯಲ್ಲಿ ಸಾರ್ವಜನಿಕರಿಂದ ತಿರಸ್ಕೃತರಾದ ರಾಜಕಾರಣಿಗಳಿಗೆ ಹಿಂಬಾಗಿಲಿನಿಂದ ಅಧಿಕಾರ ನೀಡುವ ರಾಜ್ಯ ಸರ್ಕಾರದ ತಂತ್ರಕ್ಕೆ ಭಾರೀ ಹಿನ್ನಡೆಯಾಗಿದೆ.

ಸಾರ್ವಜನಿಕ ಹುದ್ದೆಗಳು ಜನಸೇವೆಗಾಗಿ ಇವೆಯೇ ಹೊರತು, ಚುನಾವಣೆಯಲ್ಲಿ ಸೋತವರಿಗೆ ನೀಡುವ ಸಾಂತ್ವನ ಬಹುಮಾನಗಳಲ್ಲ ಎಂದು ನ್ಯಾಯಾಲಯ ತೀಕ್ಷ್ಣವಾಗಿ ಹೇಳಿದೆ.

ಆಡಳಿತಾತ್ಮಕ ಮತ್ತು ಸಾರ್ವಜನಿಕ ಹುದ್ದೆಗಳನ್ನು ರಾಜಕೀಯ ನಿಷ್ಠೆ ಅಥವಾ ವೈಯಕ್ತಿಕ ಮಹತ್ವಾಕಾಂಕ್ಷೆಗಳಿಗೆ ತೃಪ್ತಿಪಡಿಸುವ ಬಹುಮಾನವಾಗಿ ಬಳಸಿಕೊಳ್ಳಬಾರದು. ಚುನಾವಣೆಯಲ್ಲಿ ಜನರಿಂದ ತಿರಸ್ಕೃತರಾದವರನ್ನು ಮತ್ತೆ ಅದೇ ಕ್ಷೇತ್ರದ ಸಮಿತಿಗಳಿಗೆ ಅಧ್ಯಕ್ಷರನ್ನಾಗಿ ಕೂರಿಸುವುದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾದುದು ಎಂದು ಹೇಳಿದೆ.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಭೂ ಸಕ್ರಮ (ಫಾರಂ 50, 53, 57) ಹೆಚ್ಚುವರಿ ಸಮಿತಿಗೆ ಅಧ್ಯಕ್ಷರನ್ನಾಗಿ ಸೋತ ಅಭ್ಯರ್ಥಿಯನ್ನು ನೇಮಿಸಿದ್ದ ಸರ್ಕಾರದ ಆದೇಶವನ್ನು ಹೈಕೋರ್ಟ್‌ನ ವಿಭಾಗೀಯ ಪೀಠ ಸಂಪೂರ್ಣವಾಗಿ ರದ್ದುಗೊಳಿಸಿದೆ. ಇದರ ಮುಂದುವರಿದ ಭಾಗವಾಗಿ 2023ರ ಡಿಸೆಂಬರ್ 26ರಂದು ಹೊರಡಿಸಲಾಗಿದ್ದ ಅಧಿಸೂಚನೆಯನ್ನೂ ರದ್ದುಗೊಳಿಸಿದೆ.

ಇದೇ ವೇಳೆ ಕರ್ನಾಟಕ ಭೂಕಂದಾಯ ನಿಯಮಗಳು-1966ರ ನಿಯಮ 108-ಇಇ(1)(ಎ) ಅಡಿಯಲ್ಲಿ ಸರ್ಕಾರಿ ಭೂಮಿಯ ಅನಧಿಕೃತ ಒತ್ತುವರಿಯನ್ನು ಸಕ್ರಮಗೊಳಿಸುವ ಅರ್ಜಿಗಳ ಪರಿಶೀಲನೆಗಾಗಿ ರಚಿಸಲಾಗುವ ಹೆಚ್ಚುವರಿ ಸಮಿತಿಯ ಅಧ್ಯಕ್ಷರ ನೇಮಕಕ್ಕೆ ಮಾರ್ಗಸೂಚಿಗಳನ್ನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಸಮಿತಿಯ ಅಧ್ಯಕ್ಷರ ನೇಮಕಕ್ಕೆ ನಿರ್ದಿಷ್ಟ ಉದ್ದೇಶ ಹಾಗೂ ಮಾನದಂಡಗಳನ್ನು ನಿಗದಿಪಡಿಸಬೇಕು. ಸೂಕ್ತ ಕಾನೂನು ಜ್ಞಾನ, ಆಡಳಿತಾತ್ಮಕ ಸಾಮರ್ಥ್ಯ, ಸಂಬಂಧಿತ ಅನುಭವ, ಪ್ರಾಮಾಣಿಕತೆ, ಗೌಪ್ಯತೆ ಕಾಪಾಡುವ ಗುಣ ಹಾಗೂ ನಿಷ್ಕಳಂಕ ನಡವಳಿಕೆಯಂತಹ ಅರ್ಹತೆಗಳನ್ನು ಪರಿಗಣಿಸಬೇಕು ಎಂದು ನ್ಯಾಯಮೂರ್ತಿ ಡಿ.ಕೆ. ಸಿಂಗ್ ಮತ್ತು ನ್ಯಾಯಮೂರ್ತಿ ಎಚ್. ಶಾಂತಿ ಭೂಷಣ್ ಅವರನ್ನೊಳಗೊಂಡ ವಿಭಾಗೀಯ ಪೀಠ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದ ಬಿಜೆಪಿ ಶಾಸಕ ಗುರುರಾಜ್ ಗಂಟಿಹೊಳೆ ಅವರು 2026ರಲ್ಲಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ. 2026ರ ಆಗಸ್ಟ್ 4ರಂದು ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಅವರು ಪ್ರಶ್ನಿಸಿದ್ದರು.

ಪ್ರಕರಣದ ಹಿನ್ನೆಲೆ

2023ರ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಗೆಲುವು ಸಾಧಿಸಿದ್ದರು. ಆದರೆ, ಕಾಂಗ್ರೆಸ್ ಸರ್ಕಾರವು ಅಲ್ಲಿ ಸೋತಿದ್ದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರ ನೇತೃತ್ವದಲ್ಲಿ 12,313 ಬಾಕಿ ಇರುವ ಭೂ ಸಕ್ರಮ ಅರ್ಜಿಗಳ ವಿಲೇವಾರಿಗಾಗಿ 'ಹೆಚ್ಚುವರಿ ಸಮಿತಿ'ಯನ್ನು ರಚಿಸಿ, ಸರ್ಕಾರದ ಅಧಿಸೂಚನೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಶಾಸಕ ಗುರುರಾಜ್ ಗಂಟಿಹೊಳೆ ಅವರು ಕಾನೂನು ಹೋರಾಟ ನಡೆಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಮೆರಿಕ ಮಧ್ಯಂತರ ಚುನಾವಣೆ: ಡೆಮೋಕ್ರಾಟ್ ಪಕ್ಷ ಮುನ್ನಡೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಹಿನ್ನಡೆ

ಇಸ್ರೇಲ್‌ಗೆ ವಾರ್ಷಿಕ 3.8 ಶತಕೋಟಿ ಡಾಲರ್ ಭದ್ರತಾ ನೆರವು ಸ್ಥಗಿತ: ಅಮೆರಿಕ ಮಧ್ಯಂತರ ಚುನಾವಣೆ ನಡುವೆ ಟ್ರಂಪ್ ಘೋಷಣೆ

ಪಶ್ಚಿಮ ಏಷ್ಯಾ ಸಂಘರ್ಷದಲ್ಲಿ 23 ಭಾರತೀಯರ ಸಾವು: MEA

'2 ವಿಮಾನ, 6 ನಿವೇಶನ': EDಯಿಂದ ಅನಿಲ್ ಅಂಬಾನಿ ಸಮೂಹದ ₹510 ಕೋಟಿ ರೂ ಮೌಲ್ಯದ ಆಸ್ತಿ ವಶಕ್ಕೆ!

ಪ್ರಧಾನಿ ಮೋದಿ ಮನೆ ಸಮೀಪದ ಮಸೀದಿ ನಂತರ ಮತ್ತೊಂದು ಮಸೀದಿ ತೆರವಿಗೆ ಕೇಂದ್ರ ನಿರ್ಧಾರ; ಹೈಕೋರ್ಟ್‌ಗೆ ಮಾಹಿತಿ!