ರೈತರು ಪೊಲೀಸರ ವಶಕ್ಕೆ 
ರಾಜ್ಯ

ಬೆಳಗಾವಿಯಲ್ಲಿ ‘ಜೈಲ್ ಭರೋ’ಚಳವಳಿ: ಪಾದಯಾತ್ರೆಗೆ ಸಜ್ಜಾಗಿದ್ದ ರೈತರು ಪೊಲೀಸರ ವಶಕ್ಕೆ, ಕಸ್ಟಡಿಯಲ್ಲೇ ಓರ್ವ ರೈತ ಅಸ್ವಸ್ಥ!

ಈ ವೇಳೆ ಸ್ಥಳದಲ್ಲಿ ಭಾರೀ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರ ವಾಹನದಲ್ಲಿದ್ದಾಗಲೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರೈತರೊಬ್ಬರು ಅಸ್ವಸ್ಥಗೊಂಡಿದ್ದಾರೆ.

ಬೆಳಗಾವಿ: ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಹಿಂಡಲಗಾ ಜೈಲು ಭರೋ ಚಳವಳಿ ವೇಳೆ ಬೆಳಗಾವಿಯತ್ತ ಪಾದಯಾತ್ರೆ ಮೂಲಕ ತೆರಳಲು ಸಜ್ಜಾಗಿದ್ದ ರೈತರನ್ನು ಭೂತರಾಮನಹಟ್ಟಿ ಗ್ರಾಮದ ಮುಕ್ತಿಮಠದ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ವೇಳೆ ಸ್ಥಳದಲ್ಲಿ ಭಾರೀ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರ ವಾಹನದಲ್ಲಿದ್ದಾಗಲೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರೈತರೊಬ್ಬರು ಅಸ್ವಸ್ಥಗೊಂಡಿದ್ದಾರೆ. ಇದು ಪ್ರತಿಭಟನಾನಿರತ ರೈತರ ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದೆ.

ಬೆಳಗಾವಿ ಹೊರವಲಯದ ಮುಕ್ತಿ ಮಠದಲ್ಲಿ ರೈತ ಮುಖಂಡ ಚೂನಪ್ಪ ಪೂಜೇರಿ ನೇತೃತ್ವದಲ್ಲಿ ಬೃಹತ್ ರಸ್ತೆ ತಡೆ ಹಾಗೂ ಪ್ರತಿಭಟನಾ ರ‍್ಯಾಲಿಗೆ ಅನ್ನದಾತರು ಸಜ್ಜಾಗಿದ್ದರು. ಈ ವೇಳೆ ಪ್ರತಿಭಟನೆಯನ್ನು ತಡೆಯಲು ಮುಂದಾದ ಪೊಲೀಸರು, ರೈತರನ್ನು ಬಲವಂತವಾಗಿ ವಶಕ್ಕೆ ಪಡೆಯಲು ಆರಂಭಿಸಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಚೂನಪ್ಪ ಪೂಜಾರಿ ಹಾಗೂ ರೈತರು, ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಪೊಲೀಸರ ದಿಢೀರ್ ಕ್ರಮದಿಂದಾಗಿ ಮುಕ್ತಿ ಮಠದ ಆವರಣದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ತಲೆದೋರಿತು.

ಮತ್ತೊಂದೆಡೆ, ಗುರ್ಲಾಪುರದಿಂದ ಬೆಳಗಾವಿಯತ್ತ ತೆರಳುತ್ತಿದ್ದ ಪ್ರಮುಖ ರೈತ ನಾಯಕ ಶಶಿಕಾಂತ ಗುರೂಜಿ ಅವರನ್ನು ಗೋಕಾಕ್ ಡಿವೈಎಸ್ಪಿ ನೇತೃತ್ವದ ಪೊಲೀಸ್ ತಂಡ ಮೂಡಲಗಿ ತಾಲೂಕಿನಲ್ಲಿ ತಡೆದು ವಶಕ್ಕೆ ಪಡೆದುಕೊಂಡಿತು.

ಪೊಲೀಸರ ವಶದಲ್ಲಿದ್ದಾಗಲೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಶಶಿಕಾಂತ ಗುರೂಜಿ, ಬೆಳಗಾವಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ನನ್ನನ್ನು ಹಾಗೂ ಚೂನಪ್ಪ ಪೂಜಾರಿ ಸೇರಿದಂತೆ ಎಲ್ಲಾ ಜಿಲ್ಲೆಗಳ ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಮುಖ್ಯ. ಆದ್ದರಿಂದ ಯಾವುದೇ ರೈತರು ಸದ್ಯಕ್ಕೆ ಬೆಳಗಾವಿಯತ್ತ ಧಾವಿಸಬೇಡಿ, ಮನೆಯಲ್ಲೇ ಇರಿ. ನಾವೆಲ್ಲರೂ ಸಂಜೆ ಮತ್ತೆ ಒಟ್ಟಾಗಿ ಸೇರೋಣ” ಎಂದು ಮನವಿ ಮಾಡಿದ್ದಾರೆ.

ಮುಕ್ತಿ ಮಠದಿಂದ ರೈತರನ್ನು ವಶಕ್ಕೆ ಪಡೆದುಕೊಂಡು ಪೊಲೀಸ್ ವಾಹನದಲ್ಲಿ ಗೋಕಾಕ್ ಕಡೆಗೆ ಕರೆದೊಯ್ಯುತ್ತಿದ್ದ ವೇಳೆ ವಾಹನದಲ್ಲಿದ್ದ, ಈ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರೈತರೊಬ್ಬರು ಏಕಾಏಕಿ ತೀವ್ರ ಅಸ್ವಸ್ಥಗೊಂಡರು. ಕೊನೆಗೆ ಬಸಾಪುರ ಗ್ರಾಮದ ಬಳಿಯ ನಿರ್ಜನ ಪ್ರದೇಶದಲ್ಲಿ ಅಸ್ವಸ್ಥ ರೈತನನ್ನು ಕೆಳಗಿಳಿಸಿ ಪೊಲೀಸರು ವಾಹನ ಸಮೇತ ತೆರಳಿದ್ದಾರೆ ಎಂದು ರೈತರು ಗಂಭೀರ ಆರೋಪ ಮಾಡಿದ್ದಾರೆ.

ನಂತರ ಜೊತೆಯಲ್ಲಿದ್ದ ಪ್ರತಿಭಟನಾ ರೈತರು ಆ ಅಸ್ವಸ್ಥ ರೈತನನ್ನು ಹೊತ್ತುಕೊಂಡು ಬಂದು ಬಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅನ್ನದಾತರ ಹಕ್ಕೊತ್ತಾಯದ ಹೋರಾಟವನ್ನು ದಮನಿಸಲು ಪೊಲೀಸರು ಇಷ್ಟೊಂದು ಕಠೋರವಾಗಿ ವರ್ತಿಸುತ್ತಿದ್ದಾರೆ ಎಂದು ರೈತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಮೆರಿಕ ಮಧ್ಯಂತರ ಚುನಾವಣೆ ಎಫೆಕ್ಟ್: ಷೇರುಪೇಟೆ ಭಾರಿ ಏರಿಕೆ, ಒಂದೇ ದಿನದಲ್ಲಿ 8 ಲಕ್ಷ ಕೋಟಿ ರೂ. ಲಾಭ!

ದೀಪಾವಳಿಗೂ ಮುನ್ನ ರೈತರಿಗೆ ಸಿಹಿಸುದ್ದಿ ನೀಡಿದ ರಾಜ್ಯ ಸರ್ಕಾರ: ಬರ ಪರಿಹಾರ ಮೊತ್ತ 5 ಸಾವಿರಕ್ಕೆ ಏರಿಕೆ ಮಾಡಿದ ಡಿಕೆಶಿ

ಕೆಎಂಎಫ್‌ನಿಂದ ಮತ್ತೊಂದು ಬೆಲೆ ಏರಿಕೆ ಬಿಸಿ: ಹಾಲು, ಮೊಸರಿನ ನಂತರ ನಂದಿನಿ ತುಪ್ಪ, ಬೆಣ್ಣೆ ಹಾಗೂ ಪನೀರ್ ಬೆಲೆಯಲ್ಲಿ ಭಾರಿ ಏರಿಕೆ!

ಅರೆಸ್ಟ್ ಅಲ್ಲ, ವಶಕ್ಕೆ ಪಡೆದ ಕ್ಷಣದಿಂದಲೇ deadline ಆರಂಭ: 24 ಗಂಟೆ ಗಡುವು ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

Iran ಜೊತೆ ನಂಟು ಆರೋಪ: 'ನೀವು ನಮ್ಮ ಪರವಾಗಿರಿ, ಇಲ್ಲವೇ ವಿರುದ್ಧವಾಗಿರಿ'; ಭಾರತ ಮೂಲದ ದಂಪತಿಗೆ ಅಮೆರಿಕಾ ಬಿಗ್ ಶಾಕ್; ಹಲವು ಕಂಪನಿಗಳಿಗೂ ನಿರ್ಬಂಧ..!