ಸಂಬಿತ್ ಪಾತ್ರ  
ರಾಜ್ಯ

ಪ್ರಧಾನಿ ಮೋದಿ ಬದಲಿಗೆ ಇಂಡಿಯಾ ಒಕ್ಕೂಟ, ಕರ್ನಾಟಕದ ನಾಯಕರೊಂದಿಗೆ ಚರ್ಚೆ ನಡೆಸುವಂತೆ ರಾಹುಲ್ ಗಾಂಧಿಗೆ ಬಿಜೆಪಿ ಸವಾಲು!

ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಸವಾಲು ಹಾಕುವ ಬದಲು ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕರ್ನಾಟಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಚರ್ಚೆ ನಡೆಸಬೇಕು ಎಂದು ಪತ್ರಾ ಹೇಳಿದರು.

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಎಸ್‌ಐಆರ್ ಕುರಿತಾದ ಆರೋಪಗಳ ಬದಲಿಗೆ ಇಂಡಿಯಾ ಒಕ್ಕೂಟದ ಪಕ್ಷಗಳು ಮತ್ತು ಕರ್ನಾಟಕ ಕಾಂಗ್ರೆಸ್ ನಾಯಕರೊಂದಿಗೆ ಚರ್ಚೆ ನಡೆಸುವಂತೆ ರಾಹುಲ್ ಗಾಂಧಿಗೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಗುರುವಾರ ಸವಾಲು ಹಾಕಿದ್ದಾರೆ. ರಾಹುಲ್ ಗಾಂಧಿಯವರು ತಪ್ಪು ಮಾಹಿತಿ ಹರಡುತ್ತಿದ್ದಾರೆ" ಮತ್ತು ಈ ಪ್ರಕ್ರಿಯೆಯ ಬಗ್ಗೆ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಸವಾಲು ಹಾಕುವ ಬದಲು ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕರ್ನಾಟಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಚರ್ಚೆ ನಡೆಸಬೇಕು ಎಂದು ಪತ್ರಾ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಬಿತ್ ಪಾತ್ರ,ರಾಹುಲ್ ಗಾಂಧಿ, ಯಾವುದೇ ಡೇಟಾ ಇಲ್ಲದ ನಾಯಕ, ಕೇವಲ ಸದ್ದು ಮಾಡುವವರಾಗಿದ್ದಾರೆ.ರಾಹುಲ್ ಸಂಸತ್ತಿನ ಚರ್ಚೆಯಲ್ಲಿ ತೊಡಗಿಸಿಕೊಳ್ಳುವುದಕ್ಕಿಂತ ಗದ್ದಲ ಸೃಷ್ಟಿಸಲು ಆದ್ಯತೆ ನೀಡಿದ್ದಾರೆ ಎಂದು ಪುರಿ ಸಂಸದ ಆರೋಪಿಸಿದ್ದಾರೆ.

ಮೋದಿಗೆ ಗಾಂಧಿಯವರು ಚರ್ಚೆಗೆ ಆಹ್ವಾನಿಸಿದ್ದಾರೆ ಎಂಬ ವರದಿಗೆ ಪ್ರತಿಕ್ರಿಯಿಸಿದ ಪಾತ್ರ, ಪ್ರಜಾಪ್ರಭುತ್ವದ ಚರ್ಚೆಗಳಿಗೆ ಸಂಸತ್ತು ಸೂಕ್ತ ವೇದಿಕೆಯಾಗಿದೆ ಲೋಕಸಭೆಯ ವಿರೋಧ ಪಕ್ಷದ ನಾಯಕನಿಗೆ ಕಲಾಪಗಳಲ್ಲಿ ಕುಳಿತುಕೊಳ್ಳಲು ತಾಳ್ಮೆ ಇಲ್ಲ. "ಸಂಸತ್ತಿನಲ್ಲಿ ಸತತ ಐದು ರಿಂದ ಆರು ನಿಮಿಷಗಳ ಕಾಲ ಕುಳಿತುಕೊಳ್ಳಲು ಸಾಧ್ಯವಾಗದ ವ್ಯಕ್ತಿ, ಸಂಸತ್ತಿನಲ್ಲಿ ಚರ್ಚೆ ನಡೆಸಲು ಬಯಸುವುದಿಲ್ಲ. ಅವರು ಸಂಸತ್ತಿಗಿಂತ ಬೀದಿ ಜಗಳವನ್ನು ಬಯಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಕೇಜ್ರಿವಾಲ್ ಅವರೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ ಪಂಜಾಬ್‌ನಲ್ಲಿ ಎಎಪಿ ಸರ್ಕಾರದ ಬಗ್ಗೆ ಮತ್ತು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಅವರ ಹಿಂದಿನ ಹೇಳಿಕೆಗಳನ್ನು ಉಲ್ಲೇಖಿಸಿ, ಗಾಂಧಿಯವರು ಮೊದಲು ಇಂಡಿಯಾ ಬಣದೊಳಗಿನ ವಿರೋಧಾಭಾಸಗಳನ್ನು ಪರಿಹರಿಸಬೇಕೆಂದು ಪಾತ್ರ ಸೂಚಿಸಿದರು. ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಯಾವುದೇ ಪ್ರಮುಖ ಸಮಸ್ಯೆಗಳಿಲ್ಲ ಮತ್ತು ಮೃತ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಬೇಕು ಎಂಬ ಕರ್ನಾಟಕದ ಸಚಿವರ ವರದಿಯ ಹೇಳಿಕೆಯನ್ನು ಉಲ್ಲೇಖಿಸಿ, ಜಾರಕಿಹೊಳಿ ಅವರ ವಿರುದ್ಧ ಚರ್ಚೆ ನಡೆಸುವಂತೆ ಗಾಂಧಿಗೆ ಸವಾಲು ಹಾಕಿದರು.

ಅಕ್ಟೋಬರ್ 29 ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾರಕಿಹೊಳಿ, ಕಾಂಗ್ರೆಸ್ ಪ್ರತಿಭಟನೆ ಮತ್ತು ತರಬೇತಿಯಿಂದಾಗಿ ರಾಜ್ಯದಲ್ಲಿ ಸಮರ್ಪಕವಾಗಿ ಎಸ್ ಐಆರ್ ಪ್ರಕ್ರಿಯೆ ನಡೆಸುತ್ತಿದೆ. ಇತರ ರಾಜ್ಯಗಳಲ್ಲಿಯೂ ಇದೇ ರೀತಿಯಲ್ಲಿ ನಡೆಸಬೇಕು ಎಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Indian Stock Market: ದೀಪಾವಳಿ ಧಮಾಕಾ, ಸೆನ್ಸೆಕ್ಸ್ 2,009 ಅಂಕ ಜಿಗಿತ, 24,500ರ ಗಡಿ ದಾಟಿದ ನಿಫ್ಟಿ!

ಅಮೆರಿಕ ಮಧ್ಯಂತರ ಚುನಾವಣೆ ಎಫೆಕ್ಟ್: ಷೇರುಪೇಟೆ ಭಾರಿ ಏರಿಕೆ, ಒಂದೇ ದಿನದಲ್ಲಿ 8 ಲಕ್ಷ ಕೋಟಿ ರೂ. ಲಾಭ!

ವ್ಯವಸ್ಥೆಯ ವಿರುದ್ಧ ನಾನು ಯಾವಾಗಲೂ ಇರುತ್ತೇನೆ ನಾಸಿರುದ್ದೀನ್ ಶಾ ಪರ ಧ್ವನಿ ಎತ್ತಿದ ನಟ ಮನೋಜ್ ಬಾಜ್‌ಪೇಯಿ

ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್‌: ತುಟ್ಟಿಭತ್ಯೆ ಶೇ. 18ಕ್ಕೆ ಹೆಚ್ಚಿಸಿ ಆದೇಶ

ಜಾಗತಿಕ ಫುಟ್ಬಾಲ್ ಪ್ರೇಮಿಗಳಿಗೆ ಆಘಾತ; 23 ವರ್ಷಗಳ ಪಯಣಕ್ಕೆ Cristiano Ronaldo ವಿದಾಯ; ಕಣ್ಣೀರ Video ಬಿಡುಗಡೆ!