ಸಿದ್ದರಾಮಯ್ಯ 
ರಾಜ್ಯ

ಹಾಸನಾಂಬೆ ದರ್ಶನ ಪಡೆದ ಸಿದ್ದರಾಮಯ್ಯ; ಡಿಸಿ, ಎಸ್‌ಪಿ ಎಡವಟ್ಟಿನಿಂದ ದಾರಿ ತಪ್ಪಿದ ಮಾಜಿ ಸಿಎಂ ಕಾರು!

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು 1000 ರೂ ವಿಶೇಷ ದರ್ಶನದ ಟಿಕೆಟ್‌ ಪಡೆದು ದೇವಿಯ ದರ್ಶನ ಪಡೆದರು. ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ, ಸಂಸದ ಶ್ರೇಯಸ್‌ಪಟೇಲ್ ಸಾಥ್ ನೀಡಿದರು.

ಹಾಸನ: ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನ ಪಡೆಯಲು ರಾಜ್ಯದ ಮೂಲೆ ಮೂಲೆಗಳಿಂದ ಭಕ್ತ ಸಾಗರವೇ ಹರಿದುಬರುತ್ತಿದ್ದು, ಶುಕ್ರವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸನಾಂಬೆಯ ದರ್ಶನ ಪಡೆದಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು 1000 ರೂ. ವಿಶೇಷ ದರ್ಶನದ ಟಿಕೆಟ್‌ ಪಡೆದು ದೇವಿಯ ದರ್ಶನ ಪಡೆದರು. ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ, ಸಂಸದ ಶ್ರೇಯಸ್‌ಪಟೇಲ್ ಸಾಥ್ ನೀಡಿದರು.

ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ವೇಳೆ ಎರಡು ಬಾರಿ ಹಾಸನಾಂಬ ದೇವಿಯ ದರ್ಶನ ಪಡೆದಿದ್ದರು. ಇಂದು ತಮ್ಮ ಆಪ್ತರ ಜೊತೆ ಮತ್ತೆ ಹಾಸನಾಂಬ ದೇವಿ ದರ್ಶನ ಪಡೆದಿದ್ದಾರೆ.

ಡಿಸಿ, ಎಸ್‌ಪಿ ಎಡವಟ್ಟಿನಿಂದ ದಾರಿ ತಪ್ಪಿದ ಮಾಜಿ ಸಿಎಂ ಕಾರು

ಸಿದ್ದರಾಮಯ್ಯ ಆಗಮಿಸಿದ್ದ ವೇಳೆ ಒಂದು ಸಣ್ಣ ಎಡವಟ್ಟು ಆಗಿದ್ದು, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಯ ಕಾರು ಹಾಗೂ ಮತ್ತೊಂದು ಇನ್ನೋವಾ ಕಾರು ಬರುತ್ತಲೆ ಗೇಟ್ ಬಂದ್ ಮಾಡಲಾಗಿದೆ. ಆದರೆ ಸಿದ್ದರಾಮಯ್ಯ ಅವರ ಎಸ್ಕಾರ್ಟ್ ಹಾಗೂ ಪೈಲಟ್ ವಾಹನಗಳು ಮುಂದೆ ಸಾಗಿದ್ದು, ಗೇಟ್ ಬಂದ್ ಆಗಿದ್ದರಿಂದ ದಾರಿ ಮಿಸ್ ಆಗಿ ಸಿದ್ದರಾಮಯ್ಯ ಅವರ ಕಾರು ನೂರಾರು ವಾಹನಗಳ ನಡುವೆ ಟ್ರಾಫಿಕ್‌ನಲ್ಲಿ ಸಿಲುಕುವಂತಾಗಿತ್ತು. ಈ ವೇಳೆ ಸಿದ್ದರಾಮಯ್ಯ ಅವರು ಎಲ್ಲಿ ಹೋದರು ಎಂದು ಎಸ್‌ಪಿ ಹಾಗೂ ಡಿಸಿ ಗೊಂದಲಕ್ಕೀಡಾದರು. ನಂತರ ಸಿದ್ದರಾಮಯ್ಯ ಅವರ ಕಾರು ಸಂತೇಪೇಟೆ ಸರ್ಕಲ್ ಬಳಸಿ ದೇವಾಲಯದ ಬಳಿ ಬಂದಿದೆ. ಈ ವೇಳೆ ಶಿವಲಿಂಗೇಗೌಡರು ಯಾಕೆ ಹೀಗೆ ಗೊಂದಲ ಮಾಡ್ತೀರಿ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಾಡ ಕುಸ್ತಿ ಫೈನಲ್ ಪಂದ್ಯಕ್ಕೆ ಚಾಲನೆ

ದೇವಿಯ ದರ್ಶನದ ಬಳಿಕ ಹಾಸನ ಮಹಾನಗರಪಾಲಿಕೆ ವಸ್ತು ಪ್ರದರ್ಶನ ಮೈದಾನದಲ್ಲಿ ಫಲ ಪುಷ್ಪ ಪ್ರದರ್ಶನ ಉದ್ಘಾಟಿಸಿದರು. ಬಳಿಕ ನಾಡ ಕುಸ್ತಿ ಫೈನಲ್ ಪಂದ್ಯಕ್ಕೆ ಚಾಲನೆ ನೀಡಿ, ಪಂದ್ಯ ವೀಕ್ಷಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿರೋಧದ ಬೆನ್ನಲ್ಲೇ ದೆಹಲಿ-ಮಹಾರಾಷ್ಟ್ರ ಸೇರಿ 7 ರಾಜ್ಯಗಳಲ್ಲಿ SIRಗೆ ಸಂಬಂಧ ಚುನಾವಣಾ ಆಯೋಗದಿಂದ ಮಹತ್ವದ ಆದೇಶ!

Yash ಹ್ಯಾಟ್ರಿಕ್ ಸಾಧನೆ: ಸತತ 3 ಚಿತ್ರಗಳು ಮೊದಲ ದಿನವೇ 140+ ಕೋಟಿ ಗ್ರಾಸ್ ಕಲೆಕ್ಷನ್; ಭಾರತೀಯ ಚಿತ್ರರಂಗದ ಮೊದಲ ನಟ!

ಅಕ್ಷಯ್ ಕುಮಾರ್ ಪುತ್ರ ಆರವ್ 'ನನ್ನ ಹಾರ್ಟ್': ನಟಿ ಅನನ್ಯಾ ಪಾಂಡೆಗೆ ಮತ್ತೊಂದು ಲವ್?

ಕಿಟಕಿಯ ಚೌಕಟ್ಟು ಮುರಿದು ಹೋಟೆಲ್‌ನ 7ನೇ ಮಹಡಿಯಿಂದ ಬಿದ್ದು ಯುವತಿ ಸಾವು: ಭೀಕರ ದೃಶ್ಯ ಕ್ಯಾಮೆರಾದಲ್ಲಿ ಸೆರೆ; Video

ಮೂರನೇ ಮುಖ್ಯಮಂತ್ರಿಯ ಪ್ರಶ್ನೆಯೇ ಇಲ್ಲ, ಡಿಕೆಶಿ CM ಆಗಿ ಮುಂದುವರೆಯುತ್ತಾರೆ: ಕುತೂಹಲ ಮೂಡಿಸಿದ ಸತೀಶ್ ಜಾರಕಿಹೊಳಿ ಹೇಳಿಕೆ!