ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ 
ರಾಜ್ಯ

'ಬಲಿತ ದಲಿತ ತುಳಿತ; ನನ್ನ ಜನ ಅನಾಥ: ಮೀಸಲಾತಿ ಅನುಕೂಲ ಪಡೆದವರಿಗೆ ಮತ್ತೆ ಮತ್ತೆ ಸೌಲಭ್ಯ; ಎಚ್.ಡಿ ಕುಮಾರಸ್ವಾಮಿ

70ರ ದಶಕದಿಂದಲೂ ಸತತವಾಗಿ ವಿಧಾನಸಭೆ, ಲೋಕಸಭೆ, ರಾಜ್ಯಸಭೆಗೆ ಹೋಗುತ್ತಾ ಶಾಸಕರಾಗಿ, ಪ್ರತಿಪಕ್ಷ ನಾಯಕರಾಗಿ, ಸಂಸದರಾಗಿ, ಸಂಸತ್ತಿನ ಪ್ರತಿಪಕ್ಷ ನಾಯಕರಾಗಿ, ಕೇಂದ್ರ ಮತ್ತು ರಾಜ್ಯದ ಸಚಿವರಾಗಿ ನಿರಂತರವಾಗಿ ಅಧಿಕಾರ ಅನುಭವಿಸುತ್ತಾ ಬಂದಿದ್ದಾರೆ

ಬೆಂಗಳೂರು : ಡಾ.ಬಿ.ಆರ್.ಅಂಬೇಡ್ಕರ್ ಅವರ ಶ್ರಮದ ಫಲವಾಗಿ ಅನುಷ್ಠಾನಕ್ಕೆ ಬಂದ ಮೀಸಲಾತಿ ಅನುಕೂಲವನ್ನು ಪಡೆದವರೇ ಮತ್ತೆ ಮತ್ತೆ ಪಡೆಯುತ್ತಿದ್ದಾರೆ ಎಂದು ಕೇಂದ್ರದ ಸಚಿವ ಎಚ್.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಗರದಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಆಯೋಜಿಸಿದ್ದ ಚಿ.ನಾ. ರಾಮು ಬರೆದಿರುವ ‘ಬಲಿತ ದಲಿತ ತುಳಿತ; ನನ್ನ ಜನ ಅನಾಥ' ಕೃತಿಯ ಮೂರನೇ ಮುದ್ರಣದ ಆವೃತ್ತಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

70ರ ದಶಕದಿಂದಲೂ ಸತತವಾಗಿ ವಿಧಾನಸಭೆ, ಲೋಕಸಭೆ, ರಾಜ್ಯಸಭೆಗೆ ಹೋಗುತ್ತಾ ಶಾಸಕರಾಗಿ, ಪ್ರತಿಪಕ್ಷ ನಾಯಕರಾಗಿ, ಸಂಸದರಾಗಿ, ಸಂಸತ್ತಿನ ಪ್ರತಿಪಕ್ಷ ನಾಯಕರಾಗಿ, ಕೇಂದ್ರ ಮತ್ತು ರಾಜ್ಯದ ಸಚಿವರಾಗಿ ನಿರಂತರವಾಗಿ ಅಧಿಕಾರ ಅನುಭವಿಸುತ್ತಾ ಬಂದಿದ್ದಾರೆ. ಅವರು ದುರ್ಬಲ ಸ್ಥಿತಿಯಿಂದ ಸಬಲರಾದ ಮೇಲೆಯೂ ತಾವು ಅನುಭವಿಸುತ್ತಿರುವ ಮೀಸಲು ಸೌಲಭ್ಯವನ್ನು ದುರ್ಬಲ ದಲಿತರಿಗೆ ವರ್ಗಾಯಿಸಲು ತಯಾರಿಲ್ಲ ಎಂದು ಅವರು ಹೇಳಿದರು.

ಇತ್ತೀಚೆಗೆ ನಾನು ರಾಜ್ಯದ ಸಚಿವರೊಬ್ಬರ ಬಗ್ಗೆ ‘ಬಲಿತ ದಲಿತ' ಎಂಬ ಪದಬಳಕೆ ಮಾಡಿದ್ದು, ವಿವಾದಕ್ಕೆ ಕಾರಣವಾಗಿದೆ. ಕ್ಷಮೆಯಾಚಿಸಬೇಕು ಎಂದು ಆ ಸಚಿವರು, ಇನ್ನೂ ಹಲವರು ಒತ್ತಾಯ ಮಾಡಿದ್ದನ್ನು ನಾನು ಗಮನಿಸಿದ್ದೇನೆ. ಕೆನೆಪದರ ವ್ಯವಸ್ಥೆಯನ್ನು ಅನುಷ್ಠಾನ ಮಾಡಲು ಕೆಲ ಪ್ರಭಾವಿಗಳು ಬಿಡುತ್ತಿಲ್ಲ. ಅಲ್ಲಿಗೆ ದುರ್ಬಲರು ತಮ್ಮ ಸರಿಸಮಾನವಾಗಿ ಸಬಲರಾಗಬಾರದು, ಭವಿಷ್ಯದಲ್ಲಿ ಅವರು ತಮಗೆ ರಾಜಕೀಯ ಪ್ರತಿಸ್ಪರ್ಧಿಗಳಾಗಬಾರದು ಎಂಬ ಕಾರಣಕ್ಕೆ ಬಲಿತ ಪಟ್ಟಭದ್ರರು ಸತತವಾಗಿ ಪ್ರಯತ್ನ ಮಾಡಿಕೊಂಡೇ ಬರುತ್ತಿದ್ದಾರೆ ಎಂದು ಅವರು ದೂರಿದರು.

ನಾನು ಬಲಿತ ದಲಿತ ಎಂದ ವ್ಯಕ್ತಿ, ಅವರ ತಂದೆ ಮೀಸಲು ಸೌಲಭ್ಯವನ್ನು ಸತತವಾಗಿ ಪಡೆದುಕೊಂಡು ಬರುತ್ತಾ, ಅದು ದುರ್ಬಲರಿಗೆ ಸಿಗುವಂತೆ ಆಗಬಾರದು ಎಂದು ಹುನ್ನಾರ ನಡೆಸಿಕೊಂಡು ಬಂದರು. ಶೋಷಿತ ಸಮುದಾಯ ಈಗ ಅವರ ಹುನ್ನಾರವನ್ನು ಅರ್ಥ ಮಾಡಿಕೊಳ್ಳುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ದಲಿತ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ನೀಡಲು ಮೀಸಲಿಟ್ಟ ಜಾಗದಲ್ಲಿ ನಿರ್ಮಿಸಲಾದ ಟ್ರಸ್ಟ್ ಗಳಿಗೆ ದಲಿತರನ್ನು ಸೇರಿಸಿಕೊಳ್ಳದೆ, ಕೇವಲ ತಂದೆ ಮಗ ಮತ್ತು ಅಳಿಯನನ್ನು ಟ್ರಸ್ಟಿಗಳನ್ನಾಗಿ ಮಾಡಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

India-EU: ಪ್ರಧಾನಿ ಮೋದಿ ಭೇಟಿ ಮುನ್ನ ಸಂಶೋಧನೆ, ನಾವೀನ್ಯತೆ ಕಾರ್ಯಕ್ರಮ ಸಂಬಂಧಿಸಿದ ಮಾತುಕತೆ ಪೂರ್ಣ

IAS ಅಧಿಕಾರಿ ದಿವ್ಯಾ ಮಿತ್ತಲ್ ಬಳಿಕ ಯುಪಿ ಪಿಸಿಎಸ್ ಅಧಿಕಾರಿ 'ಅನುಪಮಾ ರಾಗ್' ರಾಜೀನಾಮೆ: ರಾಜಕೀಯ ಪ್ರವೇಶದ ಸುಳಿವು! Video

ಡಿಸೆಂಬರ್ 2 ಬೆಳಗಾವಿ ಅಧಿವೇಶನಕ್ಕೆ ಮುನ್ನ ಮಹಿಳೆಗೆ ಸಚಿವ ಸ್ಥಾನ: ಸಿಎಂ ಡಿಕೆ ಶಿವಕುಮಾರ್; Video

ಟೆಸ್ಟ್ ಕ್ರಿಕೆಟಿಗೆ ವಿದಾಯ ಘೋಷಿಸಿದ ಭಾರತದ ವೇಗಿ ಮೊಹಮ್ಮದ್ ಶಮಿ! Video ಸಂದೇಶದಲ್ಲಿ ಹೇಳಿದ್ದು ಏನು?

ಭಾರತ V/S ನ್ಯೂಜಿಲೆಂಡ್ ಮೊದಲ ಏಕದಿನ ಪಂದ್ಯ: ಮಹಿಳಾ ಅಭಿಮಾನಿಗಳ ಮನಗೆದ್ದ ಶ್ರೇಯಸ್ ಅಯ್ಯರ್! Video