ಪಟಾಕಿ ಸಿಡಿಸಿ ದೀಪಾವಳಿ ಆಚರಿಸುತ್ತಿರುವ ಮಹಿಳೆ. 
ರಾಜ್ಯ

ಬೆಳಕಿನ ಹಬ್ಬದಲ್ಲಿ ಕತ್ತಲೆ ತಂದ ಪಟಾಕಿ: ರಾಜಧಾನಿಯಲ್ಲಿ ನೂರಕ್ಕೂ ಅಧಿಕ ಮಂದಿಯ ಕಣ್ಣಿಗೆ ಗಾಯ, ಆಸ್ಪತ್ರೆಗೆ ದಾಖಲು..!

ನಾರಾಯಣ ನೇತ್ರಾಲಯದ ರಾಜಾಜಿನಗರ ಕೇಂದ್ರದಲ್ಲಿ 41 ಪ್ರಕರಣಗಳು ವರದಿಯಾಗಿವೆ. ಬೊಮ್ಮಸಂದ್ರ, ಬನ್ನೇರುಘಟ್ಟ ರಸ್ತೆ ಮತ್ತು ವೈಟ್‌ಫೀಲ್ಡ್ ಕೇಂದ್ರಗಳಲ್ಲಿ ಒಟ್ಟು 29 ಪ್ರಕರಣಗಳು ದಾಖಲಾಗಿವೆ.

ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ ರಾಜಧಾನಿ ಬೆಂಗಳೂರಿನಲ್ಲಿ ಪಟಾಕಿ ಸಿಡಿತದಿಂದ ಭಾರಿ ಅನಾಹುತ ಸಂಭವಿಸಿದೆ. ಹಬ್ಬದ ಆಚರಣೆಯ ವೇಳೆ ಪಟಾಕಿ ಸಿಡಿದು ನಗರದಲ್ಲಿ 100ಕ್ಕೂ ಹೆಚ್ಚು ಮಂದಿ ಕಣ್ಣಿಗೆ ಗಾಯ ಮಾಡಿಕೊಂಡಿದ್ದು, ಚಿಕಿತ್ಸೆಗಾಗಿ ವಿವಿಧ ಕಣ್ಣಿನ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

ಆಘಾತಕಾರಿ ವಿಷಯವೆಂದರೆ, ಗಾಯಗೊಂಡವರಲ್ಲಿ ಮೂರು ಮತ್ತು ಐದು ತಿಂಗಳ ಹಸುಗೂಸುಗಳು ಸೇರಿದಂತೆ ಮಕ್ಕಳು ಹಾಗೂ ಪಟಾಕಿ ಸಿಡಿಸುವುದನ್ನು ನೋಡುತ್ತಿದ್ದ ದಾರಿಹೋಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಹಲವರಿಗೆ ಗಂಭೀರ ಗಾಯಗಳಾಗಿದ್ದು, ಕೆಲವರನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಬೇಕಾಗಿದೆ. ಕೆಲವು ರೋಗಿಗಳಿಗೆ ಶಸ್ತ್ರಚಿಕಿತ್ಸೆಯ ಅಗತ್ಯವೂ ಉಂಟಾಗಿದೆ.

ನಾರಾಯಣ ನೇತ್ರಾಲಯದ ರಾಜಾಜಿನಗರ ಕೇಂದ್ರದಲ್ಲಿ 41 ಪ್ರಕರಣಗಳು ವರದಿಯಾಗಿವೆ. ಬೊಮ್ಮಸಂದ್ರ, ಬನ್ನೇರುಘಟ್ಟ ರಸ್ತೆ ಮತ್ತು ವೈಟ್‌ಫೀಲ್ಡ್ ಕೇಂದ್ರಗಳಲ್ಲಿ ಒಟ್ಟು 29 ಪ್ರಕರಣಗಳು ದಾಖಲಾಗಿವೆ. ಮಿಂಟೋ ನೇತ್ರ ಆಸ್ಪತ್ರೆಯಲ್ಲಿ 14 ಪ್ರಕರಣಗಳು ವರದಿಯಾಗಿದ್ದರೆ, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 26 ರೋಗಿಗಳ ದಾಖಲೆಗಳು ನಮೂದಾಗಿವೆ.

ನಾರಾಯಣ ನೇತ್ರಾಲಯದ ರಾಜಾಜಿನಗರ ಕೇಂದ್ರದಲ್ಲಿ ದಾಖಲಾದ 41 ಮಂದಿಯಲ್ಲಿ 24 ಮಂದಿ (ಶೇ.59) 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು. ಗಾಯಗೊಂಡವರಲ್ಲಿ 31 ಪುರುಷರು ಮತ್ತು 10 ಮಹಿಳೆಯರು ಇದ್ದಾರೆ.

ಇವರಲ್ಲಿ 29 ಮಂದಿ ತಾವೇ ಪಟಾಕಿ ಸಿಡಿಸುವಾಗ ಗಾಯಗೊಂಡಿದ್ದರೆ, ಉಳಿದ 12 ಮಂದಿ ಅಕ್ಕಪಕ್ಕದಲ್ಲಿದ್ದವರು. ಒಟ್ಟು 40 ಮಂದಿಗೆ ಔಷಧೋಪಚಾರದ ಮೂಲಕ ಚಿಕಿತ್ಸೆ ನೀಡಲಾಗಿದ್ದು, ಒಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಆಸ್ಪತ್ರೆಯ ಇತರ ಕೇಂದ್ರಗಳಲ್ಲಿ ವರದಿಯಾದ 29 ಪ್ರಕರಣಗಳ ಪೈಕಿ 15 ಮಂದಿ ಮಕ್ಕಳು. ಇವರಲ್ಲಿ ಏಳು ಮಂದಿ ಪಟಾಕಿ ಸಿಡಿಸುವಾಗ ಅಕ್ಕಪಕ್ಕದಲ್ಲಿದ್ದವರು. ಉಳಿದ 22 ಮಂದಿ ಸ್ವತಃ ಪಟಾಕಿ ಸಿಡಿಸುವಾಗ ಗಾಯಗೊಂಡಿದ್ದಾರೆ.

ಮಿಂಟೋ ನೇತ್ರ ಆಸ್ಪತ್ರೆಯಲ್ಲಿ ದಾಖಲಾದ 14 ಪ್ರಕರಣಗಳ ಪೈಕಿ 10 ಮಂದಿಗೆ ಗಂಭೀರ ಗಾಯಗಳಾಗಿದ್ದರೆ, ನಾಲ್ವರಿಗೆ ಸಾಮಾನ್ಯ ಗಾಯಗಳಾಗಿವೆ. ನವೆಂಬರ್ 8ರ ಒಂದೇ ದಿನ 12 ಪ್ರಕರಣಗಳು ವರದಿಯಾಗಿವೆ. ಗಾಯಗೊಂಡವರಲ್ಲಿ ಐವರು ಮಕ್ಕಳು. 14 ಮಂದಿಯಲ್ಲಿ 12 ಮಂದಿ ಇತರರು ಸಿಡಿಸಿದ ಪಟಾಕಿಯಿಂದ ಗಾಯಗೊಂಡವರು ಅಥವಾ ಅಕ್ಕಪಕ್ಕದಲ್ಲಿದ್ದವರು. ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದ್ದು, ಇಬ್ಬರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದರೆ, ಉಳಿದ ಇಬ್ಬರಿಗೆ ಶಸ್ತ್ರಚಿಕಿತ್ಸೆಯಿಲ್ಲದ ಚಿಕಿತ್ಸಾ ವಿಧಾನ ಅನುಸರಿಸಲಾಗಿದೆ.

ಗಾಯಗೊಂಡವರಲ್ಲಿ ಬಹುತೇಕರು ಬೆಂಗಳೂರಿನವರಾಗಿದ್ದಾರೆ. ರಾಯಚೂರು ಮತ್ತು ದೊಡ್ಡಬಳ್ಳಾಪುರದಿಂದ ತಲಾ ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಒಟ್ಟು 26 ಪ್ರಕರಣಗಳು ದಾಖಲಾಗಿವೆ. ಗಾಯಗೊಂಡವರ ವಯಸ್ಸು ಕೇವಲ ಮೂರು ತಿಂಗಳ ಹಸುಗೂಸಿನಿಂದ ಹಿಡಿದು 46 ವರ್ಷದ ವಯಸ್ಕರವರೆಗೆ ಇದೆ. ಐದು ತಿಂಗಳ ಮಗುವೊಂದು ತಾನೇ ಪಟಾಕಿಯಿಂದ ಸುಟ್ಟ ಗಾಯಕ್ಕೆ ಒಳಗಾದ ಪ್ರಕರಣವೂ ಆಸ್ಪತ್ರೆಯಲ್ಲಿ ವರದಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಚೀನಾ 'Spy' ಜೊತೆ ಪ್ರೀತಿ: Nvidia ಸಿಇಒ ಜೆನ್ಸನ್ ಹುವಾಂಗ್‌ಗೆ ಸಂಕಷ್ಟ; FBI ತನಿಖೆ ನಡೆಯುತ್ತಿದೆ ಎಂದ ಟ್ರಂಪ್, ಷೇರು ಮೌಲ್ಯದಲ್ಲಿ ಭಾರೀ ಕುಸಿತ..!

ದೆಹಲಿ ವಾಯು ಗುಣಮಟ್ಟದಲ್ಲಿ ಕೊಂಚ ಸುಧಾರಣೆ: 307ಕ್ಕೆ ಇಳಿದ AQI; ಆದರೂ 'ಅತ್ಯಂತ ಕಳಪೆ' ಸ್ಥಿತಿ ಮುಂದುವರಿಕೆ, ಧೂಳು ನಿಯಂತ್ರಣಕ್ಕೆ ರಸ್ತೆಗಳಲ್ಲಿ ನೀರು ಸಿಂಪಡಣೆ..!

ದೀಪಾವಳಿಯನ್ನು 'ಖುಷಿಯೋಂ ಕಾ ಈದ್' ಎಂದ ಖರ್ಗೆ: 'ಈದ್' ಎಂದರೆ ಹಬ್ಬವಷ್ಟೇ, ಧರ್ಮವಲ್ಲ: ತಂದೆ ಹೇಳಿಕೆ ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ

Sting operation ಸುಳಿಯಲ್ಲಿ 'ಕೈ' ಪಾಳಯ: ಡ್ಯಾಮೇಜ್ ಕಂಟ್ರೋಲ್‌ಗೆ ಮುಂದು; ದಿಢೀರ್ ಸಿದ್ದು ಭೇಟಿಯಾದ ಡಿಕೆಶಿ, ಒಂದೂವರೆ ಗಂಟೆ ರಹಸ್ಯ ಮಾತುಕತೆ..!

BDA ನಿವೇಶನ ಮಾಲೀಕರಿಗೆ ಸಿಹಿಸುದ್ದಿ: ಮಾರ್ಗಸೂಚಿ ದರದಲ್ಲಿ ಶೇ.50 ರಿಯಾಯಿತಿ ಘೋಷಣೆ; 1 ಲಕ್ಷ ಮಂದಿಗೆ ಲಾಭ..!