ಮೈಸೂರು: ಬಿಜೆಪಿಯಿಂದ ಡಿಸಿಎಂ, ಕಾಂಗ್ರೆಸ್‌ನಿಂದ ಮಂತ್ರಿ ಸ್ಥಾನದ ಆಫರ್ ಇದ್ದರೂ ಜೆಡಿಎಸ್ ಬಿಡಲಿಲ್ಲ, ಈಗ ಪಕ್ಷದಲ್ಲೇ ಮುಂದುವರಿಯುವುದು ಕುಮಾರಸ್ವಾಮಿ ಕೈಯಲ್ಲಿದೆ ಎಂದು ಹೇಳಿಕೆ ನೀಡಿದ್ದ ಜೆಡಿಎಸ್ ನಾಯಕ ಜಿಟಿ ದೇವೇಗೌಡ ಈಗ ಸಿಎಂ ಡಿಕೆ ಶಿವಕುಮಾರ್ ಅವರನ್ನು ಹಾಡಿ ಹೊಗಳಿದ್ದಾರೆ.
ಮೈಸೂರಿನ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಚಲಿಸುವ ಬಂಡೆ ಡಿಕೆ ಶಿವಕುಮಾರ್ ಸಂಶೋಧನೆ ಆಧಾರಿತ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ, ಡಿಕೆ ಶಿವಕುಮಾರ್ ಮತ್ತೆ ಸಿಎಂ ಆಗಬೇಕು. ಅವರು ಇಡೀ ರಾಜ್ಯದ ಎಲ್ಲಾ ಮನೆಗೆ ಬೆಳಕು ತಂದಿದ್ದಾರೆ. ಮೋದಿ 20 ಗಂಟೆ ಕೆಲಸ ಮಾಡಿದರೆ. ಮೋದಿಗಿಂತ ಹೆಚ್ಚು ಅವಧಿ ಡಿಕೆ ಶಿವಕುಮಾರ್ ಕೆಲಸ ಮಾಡುತ್ತಾರ ಎಂದು ಹೇಳಿದ್ದಾರೆ.
ಡಿಕೆ ಶಿವಕುಮಾರ್ ಗುರಿ, ಛಲ, ನಂಬಿಕೆಯಿಂದ ಹೋರಾಟ ಮಾಡಿ ಸಿಎಂ ಆಗಿದ್ದಾರೆ. ಎಸ್.ಎಂ. ಕೃಷ್ಣ ಅವರು ಬೆಂಗಳೂರು ಅಭಿವೃದ್ಧಿ ಕೊಟ್ಟ ಕೊಡುಗೆಯ ಶ್ರೇಯಸ್ಸು ಡಿಕೆ ಶಿವಕುಮಾರ್ ಅವರಿಗೆ ಸಲ್ಲುತ್ತದೆ. ಎಸ್.ಎಂ. ಕೃಷ್ಣ, ಸಿದ್ದರಾಮಯ್ಯ ಸಿಎಂ ಆಗಲು ಡಿಕೆ ಶಿವಕುಮಾರ್ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರು ರೀತಿ ಮೈಸೂರನ್ನು ನೋಡಿ
ಸಿದ್ದರಾಮಯ್ಯ ಅವರು ಸಿಎಂ ಆದ ಮೇಲೆ ಡಿಕೆ ಶಿವಕುಮಾರ್ ಸಿಎಂ ಆಗಲು ಸಾಧ್ಯವಿಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದರು. ಆದರೂ ಡಿಕೆ ಶಿವಕುಮಾರ್ ದೃತಿಗೆಡಲಿಲ್ಲ. ಮೈಸೂರು ಕಡೆ ಡಿಕೆ ಶಿವಕುಮಾರ್ ನೋಡುತ್ತಿಲ್ಲ, ಬೆಂಗಳೂರು ರೀತಿ ಮೈಸೂರನ್ನು ನೋಡಿ ಎಂದು ಮನವಿ ಮಾಡಿದ್ದಾರೆ.
ಡಿಕೆ ಶಿವಕುಮಾರ್ ಅವರಂತಹ ಎದೆಗಾರಿಕೆ ನಾಯಕ ರಾಜ್ಯಕ್ಕೆ ಮತ್ತೆ ಸಿಎಂ ಆಗಬೇಕು, ಮೋದಿ, ಅಮಿತ್ ಶಾ, ಅಕ್ಕಪಕ್ಕದ ರಾಜ್ಯದ ಎಲ್ಲಾ ಸಿಎಂಗಳನ್ನು ಧೈರ್ಯವಾಗಿ ಭೇಟಿ ಮಾಡುವ ಶಕ್ತಿ ಇರೋದು ಡಿಕೆ ಶಿವಕುಮಾರ್ಗೆ ಮಾತ್ರ. ಬೇರೆ ಯಾರು ಏನೂ ಮಾತಾಡಿದರೂ ಡಿಕೆ ಶಿವಕುಮಾರ್ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಜಿಟಿ ದೇವೇಗೌಡ ಹೇಳಿದ್ದಾರೆ.