ಶಿಗ್ಗಾಂವಿಯಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಹೆಲಿಕಾಪ್ಟರ್. 
ರಾಜ್ಯ

ಹಾವೇರಿ: IAF helicopter ತುರ್ತು ಲ್ಯಾಂಡಿಂಗ್: ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ

ಲಭ್ಯವಿರುವ ಮಾಹಿತಿಯ ಪ್ರಕಾರ, ZD 4050 ನೋಂದಣಿ ಸಂಖ್ಯೆಯನ್ನು ಹೊಂದಿರುವ ಐಎಎಫ್ ಹೆಲಿಕಾಪ್ಟರ್ ತಮಿಳುನಾಡಿನ ಕೊಯಮತ್ತೂರು ಬಳಿಯ ಸುಲೂರು ವಾಯುಪಡೆ ನಿಲ್ದಾಣದಿಂದ ಕರ್ನಾಟಕದ ಬೆಳಗಾವಿಗೆ ಹಾರುತ್ತಿದ್ದಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

ಹುಬ್ಬಳ್ಳಿ: ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಯ (ಐಎಎಫ್) ಹೆಲಿಕಾಪ್ಟರ್‌ವೊಂದು ಬುಧವಾರ ಸಂಜೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ರಾಷ್ಟ್ರೀಯ ಹೆದ್ದಾರಿ-48ರ ಪಕ್ಕದಲ್ಲಿರುವ ಕಾಮನಹಳ್ಳಿ ಗ್ರಾಮದ ಸಮೀಪ ರೈತರೊಬ್ಬರ ಜಮೀನಿನಲ್ಲಿ ಹೆಲಿಕಾಪ್ಟರ್ ಇಳಿದಿದೆ.

ಲಭ್ಯವಿರುವ ಮಾಹಿತಿಯ ಪ್ರಕಾರ, ZD 4050 ನೋಂದಣಿ ಸಂಖ್ಯೆಯನ್ನು ಹೊಂದಿರುವ ಐಎಎಫ್ ಹೆಲಿಕಾಪ್ಟರ್ ತಮಿಳುನಾಡಿನ ಕೊಯಮತ್ತೂರು ಬಳಿಯ ಸುಲೂರು ವಾಯುಪಡೆ ನಿಲ್ದಾಣದಿಂದ ಕರ್ನಾಟಕದ ಬೆಳಗಾವಿಗೆ ಹಾರುತ್ತಿದ್ದಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

ಅಪಾಯದ ಮುನ್ಸೂಚನೆ ಅರಿತ ಪೈಲಟ್ ಮತ್ತು ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ, ರಾಷ್ಟ್ರೀಯ ಹೆದ್ದಾರಿ-48ರ ಪಕ್ಕದಲ್ಲಿರುವ ಕಾಮನಹಳ್ಳಿ ಸಮೀಪದ ಖಾಲಿ ಜಮೀನಿನಲ್ಲಿ ತುರ್ತು ಭೂಸ್ಪರ್ಶ ಮಾಡಲು ನಿರ್ಧರಿಸಿದ್ದಾರೆ. ವಾಯುಪಡೆಯ ಅಧಿಕಾರಿ ದೀಪಕ್ ಶರ್ಮಾ ಸೇರಿದಂತೆ ಒಟ್ಟು ಆರು ಮಂದಿ ಹೆಲಿಕಾಪ್ಟರ್‌ನಲ್ಲಿದ್ದರು ಎಂದು ತಿಳಿದುಬಂದಿದೆ.

ಪೈಲಟ್ ಸಮಯಪ್ರಜ್ಞೆಯಿಂದ ಕೈಗೊಂಡ ನಿರ್ಧಾರದಿಂದ ಯಾವುದೇ ಪ್ರಾಣಹಾನಿ ಅಥವಾ ಗಾಯ ಸಂಭವಿಸಿಲ್ಲ. ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲ ಆರು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಜಮೀನಿನಲ್ಲಿ ವಾಯುಪಡೆಯ ಹೆಲಿಕಾಪ್ಟರ್ ಇಳಿದಿರುವ ಅಪರೂಪದ ದೃಶ್ಯ ಸ್ಥಳೀಯ ಗ್ರಾಮಸ್ಥರು ಮತ್ತು ವಾಹನ ಸವಾರರ ಗಮನ ಸೆಳೆದಿದೆ. ಕುತೂಹಲದಿಂದ ಹಲವರು ಸ್ಥಳದಲ್ಲಿ ಜಮಾಯಿಸಿದ್ದಾರೆ.

ಈ ನಡುವೆ ಶಿಗ್ಗಾಂವಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ಭಾರತೀಯ ವಾಯುಪಡೆಯ ತಾಂತ್ರಿಕ ತಂಡಕ್ಕೂ ಮಾಹಿತಿ ರವಾನಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಎನ್‌ವಿಡಿಯಾದ ಮಾಜಿ CEO ಜೆನ್ಸನ್ ಹುವಾಂಗ್‌ಗೆ ಮತ್ತೊಬ್ಬ ಮಹಿಳಾ ಉದ್ಯೋಗಿ ಜೊತೆ ಸಂಬಂಧ: ರಾಯಿಟರ್ಸ್ ವರದಿ

Nvidia ನೂತನ CEO ಸ್ಥಾನಕ್ಕೆ ಟಿಮ್ ಕುಕ್ ಹೆಸರು ಸೂಚಿಸಿದ ಡೊನಾಲ್ಡ್ ಟ್ರಂಪ್!

ಬೇಹುಗಾರಿಕೆ, ವಿವಾಹೇತರ ಸಂಬಂಧದ ಆರೋಪ; Nvidia CEO Jensen Huang ರಾಜಿನಾಮೆ; ಹೊಸ ಸಿಇಒ ಯಾರು?

ಬಂದೂಕುಗಳು ಮೌನವಾಗುವವರೆಗೆ ಕಾದರೆ ತಡವಾಗಬಹುದು: ಪಾಕ್ ಜೊತೆ ಮಾತುಕತೆಗೆ ಫಾರೂಕ್ ಅಬ್ದುಲ್ಲಾ ಆಗ್ರಹ!

ಪ್ರಧಾನಿ ಮೋದಿ ಬಳಿ ಚರ್ಚೆಗೆ ಖಾಸಗಿ ಟೈಮ್ ಕೇಳಿದೆ, ಡೆಲ್ಲಿಗೆ ಬನ್ನಿ ಅಂದ್ರು- ಸಂಚಲನ ಮೂಡಿಸಿದ CM DK Shivakumar ಮಾತು