ತಿಂಗಳಿಗೆ ₹15 ಸಾವಿರ ಸಂಬಳದವನ ಹೆಸರಿನಲ್ಲಿ ₹350 ಕೋಟಿ ಫ್ರಾಡ್! AI Image
ರಾಜ್ಯ

ತಿಂಗಳಿಗೆ ₹15 ಸಾವಿರ ಸಂಬಳದವನ ಹೆಸರಿನಲ್ಲಿ ₹350 ಕೋಟಿ ಫ್ರಾಡ್! GST ನೋಟಿಸ್ ನೋಡಿ ಬೆಚ್ಚಿಬಿದ್ದ ಬಳ್ಳಾರಿ ಯುವಕ

ಬಳ್ಳಾರಿಯಲ್ಲಿ ತಿಂಗಳಿಗೆ ಕೇವಲ ₹15 ಸಾವಿರ ಸಂಬಳ ಪಡೆಯುವ ರೋಷನ್ ಎಂಬ ಯುವಕನ ವೈಯಕ್ತಿಕ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡಿರುವ ವಂಚಕರು, ಆತನ ಹೆಸರಿನಲ್ಲಿ ಬರೋಬ್ಬರಿ ₹350 ಕೋಟಿ ಮೌಲ್ಯದ ಜಿಎಸ್‌ಟಿ ವಂಚನೆ ಎಸಗಿರುವ ಬೃಹತ್ ಪ್ರಕರಣ ಬೆಳಕಿಗೆ ಬಂದಿದೆ. ಆ ಕುರಿತ ವರದಿ ಇಲ್ಲಿದೆ:

ಬಳ್ಳಾರಿ: ತಿಂಗಳಿಗೆ 15 ಸಾವಿರ ರೂಪಾಯಿ ಸಂಬಳ ಪಡೆಯುವ ಸಾಮಾನ್ಯ ಯುವಕನ ಹೆಸರಿನಲ್ಲಿ ಬರೋಬ್ಬರಿ 350 ಕೋಟಿ ರೂಪಾಯಿಗೂ ಅಧಿಕ ಹಣದ ಜಿಎಸ್‌ಟಿ ವಂಚನೆ ನಡೆದಿರುವ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ವಂಚಕರ ಕೈಚಳಕಕ್ಕೆ ಖಾಸಗಿ ಕಂಪನಿಯೊಂದರಲ್ಲಿ (ಟೊಯೋಟಾ ಶೋರೂಮ್) ಸರ್ವಿಸ್ ಅಡ್ವೈಸರ್ ಆಗಿ ಕೆಲಸ ಮಾಡುವ ಯುವಕನ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದ್ದು, ಬಳ್ಳಾರಿ ಸೈಬರ್ ಕ್ರೈಂ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಈ ಶಾಕಿಂಗ್ ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ:

ಏನಿದು ಪ್ರಕರಣ?

ಬಳ್ಳಾರಿ ನಗರದ ನಿವಾಸಿ ರೋಷನ್ ಎಂಬುವವರು ಟೊಯೋಟಾ ಶೋರೂಮ್‌ನಲ್ಲಿ ಸರ್ವಿಸ್ ಅಡ್ವೈಸರ್ ಆಗಿ ತಿಂಗಳಿಗೆ ₹15,000 ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ. ಇವರ ತಂದೆ ಪಕೃದ್ದೀನ್ ಎಸಿ ಗೋಡೌನ್‌ನಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದು, ಕುಟುಂಬವು ಸಾಮಾನ್ಯ ಆರ್ಥಿಕ ಸ್ಥಿತಿಯಲ್ಲಿದೆ. ಆದರೆ, ವಂಚಕರು ರೋಷನ್ ಅವರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಹಾಗೂ ಮನೆಯ ವಿದ್ಯುತ್ ಬಿಲ್ ದಾಖಲೆಗಳನ್ನು ಬಳಸಿಕೊಂಡು 'ರೋಷನ್ ಎಂಟರ್‌ಪ್ರೈಸಸ್' ಎಂಬ ನಕಲಿ ಸಂಸ್ಥೆಯ ಹೆಸರಿನಲ್ಲಿ ಜಿಎಸ್‌ಟಿ ನೋಂದಣಿ ಮಾಡಿಸಿದ್ದಾರೆ. ಜೊತೆಗೆ, ನೋಂದಣಿ ವೇಳೆ ಬೇರೆಯವರ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ ನೀಡಿದ್ದರಿಂದ, ಒಟಿಪಿ ಅಥವಾ ಯಾವುದೇ ವಹಿವಾಟಿನ ಸಂದೇಶಗಳು ರೋಷನ್ ಅವರಿಗೆ ಬಂದಿರಲಿಲ್ಲ.

ಐದೇ ತಿಂಗಳಲ್ಲಿ ₹350 ಕೋಟಿ ವಹಿವಾಟು

ಪ್ಲಾಸ್ಟಿಕ್ ವ್ಯಾಪಾರದ ಹೆಸರಿನಲ್ಲಿ ಕೇವಲ ಐದು ತಿಂಗಳ ಅವಧಿಯಲ್ಲಿ ₹350 ಕೋಟಿ ರೂಪಾಯಿಗಳಷ್ಟು ಬೃಹತ್ ಜಿಎಸ್‌ಟಿ ವಹಿವಾಟು ನಡೆಸಿರುವ ಖದೀಮರು, ನಂತರ ಆ ಖಾತೆಯನ್ನು ಮುಚ್ಚಿದ್ದಾರೆ. ಆದರೆ, ನವೆಂಬರ್ 12ರಂದು ಜಿಎಸ್‌ಟಿ ಅಧಿಕಾರಿಗಳು ರೋಷನ್ ಅವರ ಮನೆಗೆ ಭೇಟಿ ನೀಡಿ, "ಇಷ್ಟೊಂದು ದೊಡ್ಡ ವಹಿವಾಟು ನಡೆಸಿ ಏಕಾಏಕಿ ಜಿಎಸ್‌ಟಿ ಖಾತೆಯನ್ನು ಏಕೆ ಮುಚ್ಚಿದ್ದೀರಿ?" ಎಂದು ವಿಚಾರಿಸಿದಾಗ ಈ ವಂಚನೆ ಬೆಳಕಿಗೆ ಬಂದಿದೆ. ಆಘಾತಕ್ಕೊಳಗಾದ ರೋಷನ್ ಮತ್ತು ಅವರ ಕುಟುಂಬಸ್ಥರು ತಕ್ಷಣವೇ ಬಳ್ಳಾರಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಔಟ್‌ಲುಕ್ ಸಮಸ್ಯೆ ಬಗೆಹರಿಸಿದ Microsoft, ಜಾಗತಿಕ ವ್ಯತ್ಯಯಕ್ಕೆ ಕೊನೆ; ಗ್ರಾಹಕರಲ್ಲಿ ಕ್ಷಮೆಯಾಚನೆ

'ನಮಗೆ ಪಾಠ ಮಾಡುವ ಮೊದಲು ನಿಮ್ಮ ಪೂರ್ವಗ್ರಹ ಸರಿಪಡಿಸಿಕೊಳ್ಳಿ, ಆಂತರಿಕ ವಿಚಾರದಲ್ಲಿ ಮೂಗು ತೂರಿಸಬೇಡಿ': ಅಮೆರಿಕಕ್ಕೆ ಭಾರತ ಖಡಕ್ ತಿರುಗೇಟು!

ತಾಯಿಯ ಅಂತ್ಯಕ್ರಿಯೆಗಾಗಿ ಉಡುಪಿಗೆ ಬಂದ ಭೂಗತ ಪಾತಕಿ ರವಿ ಪೂಜಾರಿ; ಬಿಗಿ ಪೊಲೀಸ್ ಭದ್ರತೆ

'ಶೀಘ್ರದಲ್ಲೇ, ಬಾಹ್ಯಾಕಾಶದಿಂದಲೇ ನೇರವಾಗಿ ನಿಮ್ಮ ಮನೆಗೆ ವಿದ್ಯುತ್': ಆಂಧ್ರ CM ಚಂದ್ರಬಾಬು ನಾಯ್ಡು ಭರವಸೆ

T20 cricket: ನಾಯಕತ್ವದಲ್ಲೂ ಹೊಸ ವಿಶ್ವ ದಾಖಲೆ ಬರೆದ ವೈಭವ್ ಸೂರ್ಯವಂಶಿ!