ಮಾಜಿ ಸಚಿವ ಎಚ್ ಕೆ ಪಾಟೀಲ್ 
ರಾಜ್ಯ

ಭ್ರಷ್ಟಾಚಾರ ಆರೋಪ: HK ಪಾಟೀಲ್`ಗೆ ಲೋಕಾಯುಕ್ತ ಕಂಟಕ, ದಾಖಲೆ ನೀಡುವಂತೆ ಕೋರ್ಟ್ ಸೂಚನೆ

2014ರಲ್ಲಿ ಎಚ್.ಕೆ. ಪಾಟೀಲ್ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಸಂದರ್ಭದಲ್ಲಿ, ವಾಣಿಜ್ಯ ಉದ್ದೇಶದ ಸೋಲಾರ್ ವಿದ್ಯುತ್ ಉತ್ಪಾದಕರಿಗೆ 10 ವರ್ಷಗಳ ಕಾಲ ವೀಲಿಂಗ್ ಮತ್ತು ಬ್ಯಾಂಕಿಂಗ್ ಶುಲ್ಕ..

ಬೆಂಗಳೂರು: ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಚ್.ಕೆ. ಪಾಟೀಲ್ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ತೀವ್ರ ಸಂಕಷ್ಟ ಎದುರಾಗಿದ್ದು, ಕರ್ನಾಟಕ ಲೋಕಾಯುಕ್ತಕ್ಕೆ ವಿಶೇಷ ನ್ಯಾಯಾಲಯದಿಂದ ತೀವ್ರ ಹಿನ್ನಡೆಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿ ಮತ್ತು ಅಗತ್ಯ ದಾಖಲೆಗಳನ್ನು ದೂರುದಾರರಿಗೆ ನೀಡಲು ನಿರಾಕರಿಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

2014ರಲ್ಲಿ ಎಚ್.ಕೆ. ಪಾಟೀಲ್ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಸಂದರ್ಭದಲ್ಲಿ, ವಾಣಿಜ್ಯ ಉದ್ದೇಶದ ಸೋಲಾರ್ ವಿದ್ಯುತ್ ಉತ್ಪಾದಕರಿಗೆ 10 ವರ್ಷಗಳ ಕಾಲ ವೀಲಿಂಗ್ ಮತ್ತು ಬ್ಯಾಂಕಿಂಗ್ ಶುಲ್ಕ ಹಾಗೂ ಕ್ರಾಸ್ ಸಬ್ಸಿಡಿ ಸರ್‌ಚಾರ್ಜ್ ಪಾವತಿಯಿಂದ ವಿನಾಯಿತಿ ನೀಡುವ ಆದೇಶ ಹೊರಡಿಸಲಾಗಿತ್ತು.

ಈ ನಿರ್ಧಾರದಲ್ಲಿ ಭ್ರಷ್ಟಾಚಾರ, ಅಕ್ರಮ ಹಣ ವರ್ಗಾವಣೆ ಮತ್ತು ಅಧಿಕಾರ ದುರುಪಯೋಗ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು.

ಈ ಪ್ರಕರಣದ ತನಿಖೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಎಚ್.ಕೆ. ಪಾಟೀಲ್ ಅವರ ಪಾತ್ರಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದ್ದರು.

ದೂರುದಾರರ ಅರ್ಜಿ ಪುರಸ್ಕರಿಸಿದ ಕೋರ್ಟ್

ಲೋಕಾಯುಕ್ತ ಪೊಲೀಸರು 2025ರ ಮಾರ್ಚ್ 21ರಂದು ಸಲ್ಲಿಸಿದ್ದ ಸ್ಥಿತಿಗತಿ ವರದಿಯನ್ನು ಪ್ರಶ್ನಿಸಿ ದೂರುದಾರ ಅಬ್ರಹಾಂ ಟಿ.ಜೆ. ನ್ಯಾಯಾಲಯದ ಮೊರೆ ಹೋಗಿದ್ದರು. 2026ರ ಜನವರಿ 9ರಂದು ಸಲ್ಲಿಸಿದ ಅರ್ಜಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳು ಮತ್ತು ಮಾಹಿತಿಗಳನ್ನು ಒದಗಿಸುವಂತೆ ಕೋರಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಸಂಸದರು ಮತ್ತು ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶಿವಪ್ರಸಾದ್ ಕೆ.ಬಿ., ದೂರುದಾರರ ಆಕ್ಷೇಪವನ್ನು ಪುರಸ್ಕರಿಸಿದ್ದಾರೆ.

ಅಲ್ಲದೆ, ಅರ್ಜಿಯ 19ನೇ ಪ್ಯಾರಾದಲ್ಲಿ ಉಲ್ಲೇಖಿಸಿರುವ 1 ಮತ್ತು 4ರಿಂದ 9ನೇ ಕ್ರಮಸಂಖ್ಯೆಯಲ್ಲಿನ ಮಾಹಿತಿಯನ್ನು ಅಪರಾಧ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 91ರ ಅಡಿಯಲ್ಲಿ ದೂರುದಾರರಿಗೆ ಒದಗಿಸುವಂತೆ ಕರ್ನಾಟಕ ಲೋಕಾಯುಕ್ತಕ್ಕೆ ನಿರ್ದೇಶನ ನೀಡಿದ್ದಾರೆ.

ಮಾಹಿತಿ ಮುಚ್ಚಿಡಲು ಸಾಧ್ಯವಿಲ್ಲ ಎಂದ ನ್ಯಾಯಾಲಯ

ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 124ರ ಪ್ರಕಾರ, ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗುವ ಸಾಧ್ಯತೆ ಇದ್ದರೆ ಸರ್ಕಾರಿ ಅಧಿಕಾರಿಗಳು ಅಧಿಕೃತ ಗೌಪ್ಯತೆಯಲ್ಲಿ ಪಡೆದ ಮಾಹಿತಿಯನ್ನು ಬಹಿರಂಗಪಡಿಸಲು ನಿರಾಕರಿಸಬಹುದು. ಆದರೆ, ಲೋಕಾಯುಕ್ತ ಪೊಲೀಸರು ಕೇಳಲಾದ ದಾಖಲೆಗಳು ಆಂತರಿಕ ಅಧಿಕೃತ ಸಂವಹನಕ್ಕೆ ಸೇರಿದ್ದು, ಆದ್ದರಿಂದ ಅವುಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಮಾತ್ರ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.

ಕೇವಲ ಆಂತರಿಕ ಅಧಿಕೃತ ಮಾಹಿತಿ ಎಂಬ ಕಾರಣಕ್ಕೆ ದಾಖಲೆಗಳನ್ನು ನೀಡಲು ನಿರಾಕರಿಸಲು ಸಾಧ್ಯವಿಲ್ಲ. ಭಾರತೀಯ ಸಾಕ್ಷ್ಯ ಕಾಯ್ದೆ ಅಥವಾ ಮಾಹಿತಿ ಹಕ್ಕು ಕಾಯ್ದೆಯಡಿ ಇಂತಹ ಮಾಹಿತಿಯನ್ನು ನೀಡುವುದಕ್ಕೆ ಸಂಪೂರ್ಣ ನಿರ್ಬಂಧವಿಲ್ಲ ಎಂದು ವಿಶೇಷ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹೀಗಾಗಿ, ದೂರುದಾರರು ಕೇಳಿರುವ ವಿವರಗಳನ್ನು ಒದಗಿಸಬೇಕು ಎಂದು ನ್ಯಾಯಾಲಯ ಲೋಕಾಯುಕ್ತಕ್ಕೆ ಸೂಚಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕ್ಯಾನ್ಸರ್ ರೋಗಿಗಳಿಗೆ ಗುಡ್‌ನ್ಯೂಸ್: ಕಿದ್ವಾಯಿಯಲ್ಲಿ 200 ಹಾಸಿಗೆಗಳ ಹೊಸ ಘಟಕ, 5 ಜಿಲ್ಲೆಗಳಲ್ಲಿ ಆಸ್ಪತ್ರೆ: ಸಿಎಂ ಡಿಕೆಶಿ ಘೋಷಣೆ

5th ODI: 5ನೇ ಏಕದಿನ ಪಂದ್ಯ: ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ, ಭಾರತ ತಂಡದಲ್ಲಿ 2 ಬದಲಾವಣೆ, ಯಶ್ ಠಾಕೂರ್ ಪದಾರ್ಪಣೆ!

'ಮತ್ತೆ ಮರ್ಯಾದೆ ಹೊಯ್ತು, ನಾವು ಶೂನ್ಯ, ಭಾರತಕ್ಕೆ ಹೋಲಿಕೆಯೇ ಇಲ್ಲ': U19 ಏಷ್ಯಾಕಪ್ ಫೈನಲ್ ಸೋಲು ಬೆನ್ನಲ್ಲೇ PCB ವಿರುದ್ಧ ಮಾಜಿ ಕ್ರಿಕೆಟಿಗ ಕಿಡಿ

ಕೊನೆಯ ಎಸೆತದವರೆಗೂ ಹೋರಾಡಿ ಗೆದ್ದ ಯುವಪಡೆ: ಟೀಮ್ ಇಂಡಿಯಾ ಭವಿಷ್ಯದ ಬಗ್ಗೆ ಬಿಸಿಸಿಐ ಮೆಚ್ಚುಗೆ, VVS ಲಕ್ಷ್ಮಣ್ ತರಬೇತಿಗೂ ಶ್ಲಾಘನೆ!

'ಕಾಂಗ್ರೆಸ್ ನಾಯಕರನ್ನು ಬೆದರಿಸಲು ಫೋನ್ ಕದ್ದಾಲಿಕೆ': ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್