ಎಲೆಮಲ್ಲಪ್ಪ ಚೆಟ್ಟಿ ಕೆರೆಯಲ್ಲೇ ರಸ್ತೆ ನಿರ್ಮಾಣ 
ರಾಜ್ಯ

ಅಕ್ರಮ ಭೂ ಒತ್ತುವರಿದಾರರ ಅಟ್ಟಹಾಸ, NGT ಆದೇಶಕ್ಕೂ ಕಿಮ್ಮತ್ತಿಲ್ಲ: ಯಲಹಂಕದ ಎಲೆಮಲ್ಲಪ್ಪ ಚೆಟ್ಟಿ ಕೆರೆಯಲ್ಲೇ ರಸ್ತೆ ನಿರ್ಮಾಣ!

ಎರಡು ವರ್ಷಗಳ ಹಿಂದೆಯೇ ಕೆರೆಯನ್ನು ಸಂರಕ್ಷಿಸುವಂತೆ ಎನ್‌ಜಿಟಿ ಆದೇಶ ನೀಡಿತ್ತು. ಆದರೂ ಕೆರೆಯೊಳಗೆ ರಸ್ತೆ ನಿರ್ಮಾಣಕ್ಕೆ ಪ್ರಯತ್ನಿಸಿರುವುದು ಸ್ಥಳೀಯರು ಮತ್ತು ಪರಿಸರ ಕಾಳಜಿಯುಳ್ಳವರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ಅಕ್ರಮ ಭೂಒತ್ತುವರಿದಾರರ ಅಟ್ಟಹಾಸ ಮಿತಿ ಮೀರಿದ್ದು, ಯಲಹಂಕದ ಯಲಮಲ್ಲಪ್ಪ ಚೆಟ್ಟಿ ಕೆರೆಯಲ್ಲೇ ರಸ್ತೆ ನಿರ್ಮಾಣ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಕೆರೆಗಳ ಸಂರಕ್ಷಣೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಆದೇಶ ನೀಡಿದ್ದರೂ, ಬೆಂಗಳೂರಿನ ಪೂರ್ವ ಭಾಗದಲ್ಲಿರುವ 500 ಎಕರೆ ವಿಸ್ತೀರ್ಣದ ಯಲಮಲ್ಲಪ್ಪ ಚೆಟ್ಟಿ ಕೆರೆಯಲ್ಲಿ ಅಕ್ರಮ ಚಟುವಟಿಕೆಗಳು ನಿಂತಿಲ್ಲ.

ಇದೀಗ ಕೆರೆಯ ಜಾಗದಲ್ಲೇ ಮಣ್ಣು ಮತ್ತು ಕಟ್ಟಡ ತ್ಯಾಜ್ಯ ಸುರಿದು ರಸ್ತೆ ನಿರ್ಮಾಣ ಮಾಡಿರುವ ಆರೋಪ ಕೇಳಿಬಂದಿದೆ.

ಎರಡು ವರ್ಷಗಳ ಹಿಂದೆಯೇ ಕೆರೆಯನ್ನು ಸಂರಕ್ಷಿಸುವಂತೆ ಎನ್‌ಜಿಟಿ ಆದೇಶ ನೀಡಿತ್ತು. ಆದರೂ ಕೆರೆಯೊಳಗೆ ರಸ್ತೆ ನಿರ್ಮಾಣಕ್ಕೆ ಪ್ರಯತ್ನಿಸಿರುವುದು ಸ್ಥಳೀಯರು ಮತ್ತು ಪರಿಸರ ಕಾಳಜಿಯುಳ್ಳವರ ಆಕ್ರೋಶಕ್ಕೆ ಕಾರಣವಾಗಿದೆ.

ಮಣ್ಣು, ಕಟ್ಟಡ ತ್ಯಾಜ್ಯ ಸುರಿದು ರಸ್ತೆ ನಿರ್ಮಾಣ

ಮೂರು ತಿಂಗಳ ಹಿಂದೆ ಕೆಲವರು ಕೆರೆಯ ಜಾಗದಲ್ಲಿ ಮಣ್ಣು ಮತ್ತು ಕಟ್ಟಡ ತ್ಯಾಜ್ಯ ಸುರಿದು ರಸ್ತೆ ನಿರ್ಮಿಸಲು ಪ್ರಯತ್ನಿಸಿದ್ದರು. ಈ ಬಗ್ಗೆ ಆವಲಹಳ್ಳಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದವರು ಪರಾರಿಯಾಗಿದ್ದರು. ಈ ವೇಳೆ ಕೆಲವು ವಾಹನಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ, ಅಕ್ರಮದ ಹಿಂದೆ ಯಾರಿದ್ದಾರೆ ಎಂಬುದು ಇನ್ನೂ ಪತ್ತೆಯಾಗಿಲ್ಲ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2.6 ಕಿ.ಮೀ. ಬೇಲಿ ಕಾಮಗಾರಿ ಬಾಕಿ

ಇನ್ನು ಕೆರೆಯ ಸಂರಕ್ಷಣೆಗೆ ಸಂಬಂಧಿಸಿದಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಒಟ್ಟು 9 ಕಿ.ಮೀ. ಉದ್ದದ ಬೇಲಿ ನಿರ್ಮಾಣ ಕಾಮಗಾರಿಯಲ್ಲಿ 2.6 ಕಿ.ಮೀ. ಕಾಮಗಾರಿ ಬಾಕಿ ಇದೆ. ಮುಂದಿನ ಎರಡು ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಳಿಸಿ ಕೆರೆಗೆ ಸೂಕ್ತ ರಕ್ಷಣೆ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

ಬಡಾವಣೆ, ಅಪಾರ್ಟ್‌ಮೆಂಟ್‌ಗಳಿಗೆ ರಸ್ತೆ ನಿರ್ಮಾಣದ ಆರೋಪ

ಕೆರೆ ಒತ್ತುವರಿ ವಿರುದ್ಧ ಎನ್‌ಜಿಟಿಯಲ್ಲಿ ಅರ್ಜಿ ಸಲ್ಲಿಸಿರುವ ಜಗನ್ ಕುಮಾರ್, ಕೆರೆಯ ದುಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಚೆನ್ನೈ ಪೀಠದ ಎನ್‌ಜಿಟಿ ಕೆರೆಯ ಪುನಶ್ಚೇತನಕ್ಕೆ ಆದೇಶ ನೀಡಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಕೆರೆಯ ನಿರ್ವಹಣೆ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿರುವುದರಿಂದ ಆ ಇಲಾಖೆಯನ್ನೇ ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿ ಮಾಡಲಾಗಿದೆ ಎಂದಿದ್ದಾರೆ.

"ಭಾರೀ ಯಂತ್ರಗಳನ್ನು ಬಳಸಿ ಕೆರೆಯೊಳಗೆ ಅಕ್ರಮ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಕೆರೆ ಪ್ರದೇಶದಲ್ಲಿ ತಲೆ ಎತ್ತಿರುವ ಹೊಸ ಬಡಾವಣೆಗಳು, ಅಪಾರ್ಟ್‌ಮೆಂಟ್‌ಗಳು ಮತ್ತು ಅಕ್ರಮ ಕೈಗಾರಿಕಾ ಶೆಡ್‌ಗಳಿಗೆ ಸಂಪರ್ಕ ಕಲ್ಪಿಸಿ, ಅವುಗಳ ವಾಣಿಜ್ಯ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡುವುದೇ ಈ ರಸ್ತೆಯ ಉದ್ದೇಶ" ಎಂದು ಜಗನ್ ಕುಮಾರ್ ಆರೋಪಿಸಿದ್ದಾರೆ.

ಮೇಡಹಳ್ಳಿ ಭಾಗದಲ್ಲಿಯೂ ಜಲ್ಲಿ ಕಲ್ಲುಗಳನ್ನು ಸುರಿಯಲಾಗಿದೆ. ಈಗಾಗಲೇ ಕೆರೆಯೊಳಗೆ ಕಚ್ಚಾ ರಸ್ತೆ ನಿರ್ಮಿಸಲಾಗಿದೆ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಈ ಅಕ್ರಮ ರಸ್ತೆಗೆ ಡಾಂಬರು ಹಾಕಿದರೂ ಅಚ್ಚರಿಯಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ವಿರುದ್ಧ ವಿದೇಶಿ ನಾಯಕನ ಟೀಕೆ: 'ಭಾರತಕ್ಕೆ ಪ್ರಜಾಪ್ರಭುತ್ವದ ಪಾಠ ಹೇಳುವ ಅಗತ್ಯವಿಲ್ಲ': ಇಟಲಿ ಪ್ರಧಾನಿ ಮೆಲೋನಿ ಆಪ್ತೆ ತಿರುಗೇಟು

ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ; Akvan ತೀವ್ರ, ತ.ನಾಡು, ಆಂಧ್ರ ಪ್ರದೇಶ, ಒಡಿಶಾದಲ್ಲಿ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ

ವಿಧಾನ ಪರಿಷತ್ ಸದಸ್ಯರಾಗಿ ಎ.ಪಿ. ರಂಗನಾಥ್, ಶಶೀಲ್ ಜಿ. ನಮೋಶಿ, ಎಸ್.ವಿ. ಸಂಕನೂರ ಮತ್ತು ಕೆ.ಎಂ. ಸುರೇಶ್ ಪ್ರಮಾಣ ವಚನ ಸ್ವೀಕಾರ!

2ನೇ ಮದುವೆಯಾದ ನಟಿ ರಶ್ಮಿ ದೇಸಾಯಿ ಮಾಜಿ ಪತಿ ನಂದೀಶ್ ಸಂಧು; ಕಿರುತೆರೆ ನಟಿ ಕವಿತಾ ಬ್ಯಾನರ್ಜಿ ಜೊತೆ ಸಪ್ತಪದಿ!

ಫಿಲಿಪ್ಪೀನ್ಸ್ ಪ್ರವಾಸ ಆರಂಭಿಸಿದ ಪ್ರಧಾನಿ ಮೋದಿ; ಭಾರತದ ಆಕ್ಟ್ ಈಸ್ಟ್ ನೀತಿಯಲ್ಲಿ ASEAN ಪಾತ್ರಕ್ಕೆ ಒತ್ತು