ಏಳು ಮಂದಿಯ ಶವ ಸಾಗಿಸಿದ ಕಾರು 
ರಾಜ್ಯ

'ಪತ್ರಕರ್ತರ ಪ್ರವಾಸದ ಬ್ಯಾನರ್, ಪ್ರೆಸ್ ಸ್ಟಿಕ್ಕರ್: ಬೆಂಗಳೂರಿನಲ್ಲಿ 7 ಮಂದಿ ಹತ್ಯೆಗೈದ ಕಾರು ಚಾಲಕ ಶವಗಳನ್ನು ಸಾಗಿಸಿದ್ದು ಹೇಗೆ ಗೊತ್ತಾ?

ಆರೋಪಿ ಇಂದುಶೇಖರ್ ತನ್ನ ಹಳದಿ ನಂಬರ್ ಪ್ಲೇಟ್ ಹೊಂದಿರುವ ಟೊಯೊಟಾ ಎಟಿಯೋಸ್ (Toyota Etios) ಕಾರಿನ ಮೇಲೆ 'ದಸರಾ ಮತ್ತು ದೀಪಾವಳಿ ಸಂದರ್ಭದಲ್ಲಿ ಪತ್ರಕರ್ತರ ಪ್ರವಾಸ' ಎಂದು ಬರೆದ ಬ್ಯಾನರ್ ಹಾಕಿಕೊಂಡಿದ್ದ

ಬೆಂಗಳೂರು: ರಾಜಾಜಿನಗರದಲ್ಲಿ ಏಳು ಮಂದಿಯ ಸರಣಿ ಹತ್ಯೆ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆರೋಪಿ ಕ್ಯಾಬ್ ಚಾಲಕನ ಬಗ್ಗೆ ಬಗೆದಷ್ಟು ಹೊಸ ಹೊಸ ಮಾಹಿತಿಗಳು ಹೊರಬರುತ್ತಿವೆ. ಈತ ಪತ್ರಕರ್ತನೆಂದು ಸುಳ್ಳು ಗುರುತು ಸೃಷ್ಟಿಸಿಕೊಂಡು, ಕಾರಿನ ಮೇಲೆ 'ಪತ್ರಕರ್ತರ ಪ್ರವಾಸ' (Journalists' Tour) ಎಂಬ ಸ್ಟಿಕ್ಕರ್ ಬಳಸುವ ಮೂಲಕ ಯಾರಿಗೂ ಅನುಮಾನ ಬಾರದಂತೆ ಶವಗಳನ್ನು ಸಾಗಿಸಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಆರೋಪಿ ಇಂದುಶೇಖರ್ ತನ್ನ ಹಳದಿ ನಂಬರ್ ಪ್ಲೇಟ್ ಹೊಂದಿರುವ ಟೊಯೊಟಾ ಎಟಿಯೋಸ್ (Toyota Etios) ಕಾರಿನ ಮೇಲೆ 'ದಸರಾ ಮತ್ತು ದೀಪಾವಳಿ ಸಂದರ್ಭದಲ್ಲಿ ಪತ್ರಕರ್ತರ ಪ್ರವಾಸ' ಎಂದು ಬರೆದ ಬ್ಯಾನರ್ ಹಾಕಿಕೊಂಡಿದ್ದ. ಇದನ್ನು ಕಾರಿನ ನಂಬರ್ ಪ್ಲೇಟ್ ಕಾಣದಂತೆ ಮುಚ್ಚುವ ರೀತಿಯಲ್ಲಿ ಹಾಕಲಾಗಿತ್ತು.

ಕಾರಿನ ಹಿಂಬದಿಯ ಗಾಜಿನ ಮೇಲೆ 'ಪ್ರೆಸ್' (PRESS) ಎಂದು ಬರೆಯಲಾಗಿತ್ತು. ಇದರಿಂದಾಗಿ ಆ ಕಾರು ಪತ್ರಕರ್ತರೊಬ್ಬರಿಗೆ ಸೇರಿದ್ದು ಎಂಬಂತೆ ಭಾಸವಾಗುತ್ತಿತ್ತು. ತನಿಖೆಯ ಪ್ರಕಾರ, ಇಂದುಶೇಖರ್ ಯೂಟ್ಯೂಬ್ ಚಾನೆಲ್ ಒಂದನ್ನು ನಡೆಸುತ್ತಿದ್ದ. ತಾನು ಪತ್ರಕರ್ತನೆಂದು ನಂಬಿಸಲು ವಿಸಿಟಿಂಗ್ ಕಾರ್ಡ್‌ಗಳು ಹಾಗೂ ಗುರುತಿನ ಚೀಟಿಗಳನ್ನು ಸಹ ಮಾಡಿಕೊಂಡಿದ್ದ.

ಯಾರಿಗೂ ಅನುಮಾನ ಬಾರದಂತೆ ಕಾರಿನೊಳಗೆ ಶವಗಳನ್ನು ಸಾಗಿಸಲು, ಈ 'ಪ್ರೆಸ್' ಸ್ಟಿಕ್ಕರ್ ಮತ್ತು ಪ್ರವಾಸದ ಬ್ಯಾನರ್ ಅನ್ನು ಒಂದು ಮರೆಮಾಚುವ ಸಾಧನವಾಗಿ ಆರೋಪಿ ಬಳಸಿಕೊಂಡಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಸಕಲೇಶಪುರ ಮತ್ತು ಮಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಆರೋಪಿಯ ಕಾರಿನ ಮೇಲೆ ಇದೇ ಬ್ಯಾನರ್ ಕಂಡುಬಂದಿದೆ. ವಿವಿಧ ಸ್ಥಳಗಳಲ್ಲಿ ಶವಗಳನ್ನು ಎಸೆಯುವಾಗಲು ಆತ ಇದೇ ತಂತ್ರವನ್ನು ಬಳಸಿದ್ದಿರಬಹುದು ಎಂದು ಪೊಲೀಸರು ಅನುಮಾನಿಸಿದ್ದಾರೆ. ಅನುಮಾನ ಬಾರದಿರಲಿ ಎಂಬ ಉದ್ದೇಶದಿಂದ, ಆರೋಪಿಯು ಎಲ್ಲಾ ಶವಗಳನ್ನು ಒಟ್ಟಿಗೆ ಸಾಗಿಸುವ ಬದಲು, ಬೇರೆ ಬೇರೆ ಕಡೆಗಳಲ್ಲಿ ಎಸೆದಿದ್ದಾನೆ ಎಂದು ತಿಳಿದುಬಂದಿದೆ.

ಪ್ರಸ್ತುತ ಇಂದುಶೇಖರ್ ಮತ್ತು ಇತರ ಆರೋಪಿಗಳನ್ನು ಪೊಲೀಸ್ ವಶದಲ್ಲಿಟ್ಟುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಹತ್ಯೆಗಳ ನಂತರ ಶವಗಳನ್ನು ಯಾವಾಗ, ಎಲ್ಲಿ ಮತ್ತು ಹೇಗೆ ಸಾಗಿಸಲಾಯಿತು ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಶವಗಳನ್ನು ಸಾಗಿಸುವಾಗ ತಾನು ಪತ್ರಕರ್ತನೆಂಬ ಸುಳ್ಳು ಗುರುತನ್ನು ಬಳಸಿಕೊಂಡಿದ್ದು ಆರೋಪಿ ತಪಾಸಣೆಯಿಂದ ತಪ್ಪಿಸಿಕೊಳ್ಳಲು ನೆರವಾಯಿತೇ ಎಂಬ ದೃಷ್ಟಿಯಿಂದಲೂ ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ವಿರುದ್ಧ ವಿದೇಶಿ ನಾಯಕನ ಟೀಕೆ: 'ಭಾರತಕ್ಕೆ ಪ್ರಜಾಪ್ರಭುತ್ವದ ಪಾಠ ಹೇಳುವ ಅಗತ್ಯವಿಲ್ಲ': ಇಟಲಿ ಪ್ರಧಾನಿ ಮೆಲೋನಿ ಆಪ್ತೆ ತಿರುಗೇಟು

ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ; Akvan ತೀವ್ರ, ತ.ನಾಡು, ಆಂಧ್ರ ಪ್ರದೇಶ, ಒಡಿಶಾದಲ್ಲಿ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ

ಸಣ್ಣ ಜಗಳಕ್ಕೆ ರಣಾಂಗಣವಾದ ಕ್ರಿಕೆಟ್ ಮೈದಾನ; ಬ್ಯಾಟ್, ವಿಕೆಟ್ ಹಿಡಿದು ಆಟಗಾರರ ಮಾರಾಮಾರಿ

ಬಿಲ್ಕಿಸ್ ಬಾನೋ ಪ್ರಕರಣ: ಇಬ್ಬರು ಅಪರಾಧಿಗಳ ಜೀವಾವಧಿ ಶಿಕ್ಷೆ ಅಮಾನತುಗೊಳಿಸಿದ ಸುಪ್ರೀಂ ಕೋರ್ಟ್! ಜಾಮೀನು ಮಂಜೂರು

ಅಕ್ರಮ ಭೂ ಒತ್ತುವರಿದಾರರ ಅಟ್ಟಹಾಸ, NGT ಆದೇಶಕ್ಕೂ ಕಿಮ್ಮತ್ತಿಲ್ಲ: ಯಲಹಂಕದ ಎಲೆಮಲ್ಲಪ್ಪ ಚೆಟ್ಟಿ ಕೆರೆಯಲ್ಲೇ ರಸ್ತೆ ನಿರ್ಮಾಣ!