ಸಂಗ್ರಹ ಚಿತ್ರ 
ರಾಜ್ಯ

ಹೊಸ ಟ್ರಾಫಿಕ್ ರೂಲ್ಸ್: ರಾಜ್ಯದಲ್ಲಿ ಹಾಫ್ ಹೆಲ್ಮೆಟ್ ಬ್ಯಾನ್; ಫುಟ್‌ಪಾತ್‌ ಮೇಲೆ ಬೈಕ್ ಓಡಿಸಿದರೆ ₹5,000 ದಂಡ, Ola, Uberಗೂ ಕಡಿವಾಣ!

ರಾಜ್ಯದಲ್ಲಿ ಹೊಸ ಟ್ರಾಫಿಕ್ ರೂಲ್ಸ್ ಜಾರಿಗೆ ತರಲು ಸರ್ಕಾರ ಉದ್ದೇಶಿಸಿದೆ. ಅದರಂತೆ ಫುಟ್‌ಪಾತ್‌ ಮೇಲೆ ಬೈಕ್ ಚಲಾಯಿಸುವುದಕ್ಕೆ ವಿಧಿಸುವ ದಂಡವನ್ನು ₹1,000ರಿಂದ ₹5,000ಕ್ಕೆ ಹೆಚ್ಚಿಸುವ ಉದ್ದೇಶಿಸಲಾಗಿದೆ.

ಬೆಂಗಳೂರು: ರಾಜ್ಯದಲ್ಲಿ ಹೊಸ ಟ್ರಾಫಿಕ್ ರೂಲ್ಸ್ ಜಾರಿಗೆ ತರಲು ಸರ್ಕಾರ ಉದ್ದೇಶಿಸಿದೆ. ಅದರಂತೆ ಫುಟ್‌ಪಾತ್‌ ಮೇಲೆ ವಾಹನ ಚಲಾಯಿಸುವುದಕ್ಕೆ ವಿಧಿಸುವ ದಂಡವನ್ನು ₹1,000ರಿಂದ ₹5,000ಕ್ಕೆ ಹೆಚ್ಚಿಸುವ ಉದ್ದೇಶದ ಜೊತೆಗೆ ಓಲಾ, ಊಬರ್, ನಮ್ಮ ಯಾತ್ರಿ ಸೇರಿದಂತೆ ಆ್ಯಪ್ ಆಧಾರಿತ ಕ್ಯಾಬ್‌ಗಳು ಹಾಗೂ ಆಟೋಗಳಿಗೆ ಮೀಟರ್ ಕಡ್ಡಾಯಗೊಳಿಸುವ ಪ್ರಸ್ತಾವವೂ ಮುನ್ನೆಲೆಗೆ ಬಂದಿದೆ. ಇದರಿಂದ ಪ್ರಯಾಣಿಕರ ಸುರಕ್ಷತೆ, ದರ ನಿಯಂತ್ರಣ ಮತ್ತು ಸಾರಿಗೆ ನಿಯಮಗಳ ಪಾಲನೆಗೆ ಹೊಸ ಚೌಕಟ್ಟು ರೂಪಿಸುವ ಸಾಧ್ಯತೆ ಇದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಭೈರತಿ ಸುರೇಶ್, ಪ್ರಸ್ತಾವಿತ ನಿಯಮದಂತೆ ಮೊದಲ ಬಾರಿಗೆ ಪಾದಚಾರಿ ಮಾರ್ಗದಲ್ಲಿ ವಾಹನ ಓಡಿಸಿದರೆ ₹5,000, ಎರಡನೇ ಬಾರಿ ₹10,000 ದಂಡ ವಿಧಿಸಲಾಗುವುದು. ಮೂರನೇ ಮತ್ತು ನಾಲ್ಕನೇ ಬಾರಿ ಇದೇ ರೀತಿಯ ಉಲ್ಲಂಘನೆ ಮಾಡಿದರೆ ವಾಹನವನ್ನು ವಶಕ್ಕೆ ಪಡೆದು ಸೀಜ್ ಮಾಡುವ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಕ್ರಮದ ಹಿಂದೆ ಪ್ರಮುಖ ಕಾರಣವೇ ನಗರಗಳಲ್ಲಿ ಹೆಚ್ಚುತ್ತಿರುವ ಪಾದಚಾರಿ ಮಾರ್ಗದ ಅತಿಕ್ರಮಣ. ವಾಹನಗಳು ಪಾದಚಾರಿ ಮಾರ್ಗವನ್ನೇ ಸಂಚಾರದ ಮಾರ್ಗವಾಗಿ ಬಳಸುವುದರಿಂದ ಪಾದಚಾರಿಗಳು ರಸ್ತೆಗೆ ಇಳಿದು ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಇದೇ ವೇಳೆ, ಆ್ಯಪ್ ಆಧಾರಿತ ಕ್ಯಾಬ್ ಸೇವೆಗಳಿಗೂ ಸಾರಿಗೆ ಇಲಾಖೆ ಹೊಸ ನಿಯಮ ಜಾರಿಗೆ ತರಲು ಸಿದ್ಧತೆ ನಡೆಸಿದೆ. ಓಲಾ, ಊಬರ್, ನಮ್ಮ ಯಾತ್ರಿ ಸೇರಿದಂತೆ ಕ್ಯಾಬ್‌ಗಳು ಮೀಟರ್ ಅಳವಡಿಸಿಕೊಂಡಿರಬೇಕು. ಮೀಟರ್ ಇಲ್ಲದೆ ಕ್ಯಾಬ್ ಅಥವಾ ಆಟೋ ಸಂಚಾರ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ. ಸಾಂಪ್ರದಾಯಿಕ ಆಟೋ ಸೇವೆಯಲ್ಲಿ ಮೀಟರ್ ಕಡ್ಡಾಯವಾಗಿದ್ದರೂ, ಆ್ಯಪ್ ಆಧಾರಿತ ಕ್ಯಾಬ್ ಸೇವೆಗಳ ದರ ವ್ಯವಸ್ಥೆ ಪ್ರತ್ಯೇಕ ಮಾದರಿಯಲ್ಲಿ ರೂಪುಗೊಂಡಿತ್ತು. ಬೇಡಿಕೆ, ಸಮಯ ಮತ್ತು ಸ್ಥಳದ ಆಧಾರದ ಮೇಲೆ ದರ ಬದಲಾಗುವ ವ್ಯವಸ್ಥೆ ಪ್ರಯಾಣಿಕರಿಗೆ ಕೆಲವೊಮ್ಮೆ ಹೆಚ್ಚಿನ ದರದ ಹೊರೆಯಾಗುತ್ತಿದೆ ಎಂಬ ದೂರುಗಳೂ ಇವೆ.

ಈ ಹಿನ್ನೆಲೆಯಲ್ಲಿ ಮೀಟರ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವ ಪ್ರಸ್ತಾವವು ದರ ನಿಯಂತ್ರಣದ ಪ್ರಶ್ನೆಯನ್ನೂ ಮುನ್ನೆಲೆಗೆ ತಂದಿದೆ. ಏರ್‌ಪೋರ್ಟ್ ಮಾರ್ಗದಲ್ಲಿ ಸಂಚರಿಸುವ ಕ್ಯಾಬ್‌ಗಳಿಗೂ ಮೀಟರ್ ಅಳವಡಿಕೆ ಕಡ್ಡಾಯವಾಗಲಿದೆ. ಮೀಟರ್ ಇಲ್ಲದೆ ಆಟೋ ಅಥವಾ ಕ್ಯಾಬ್ ಓಡಿಸಿದರೆ ದಂಡ ವಿಧಿಸಲಾಗುವುದು ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಹೊಸ ವರ್ಷದ ವೇಳೆಗೆ ಈ ನಿಯಮ ಜಾರಿಗೆ ಬರುವ ಸಾಧ್ಯತೆ ಇದ್ದು, ಈಗಾಗಲೇ ಕರಡು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಗ್ರೀನ್ MS ಟ್ಯಾಕ್ಸಿಗೂ ಮೀಟರ್ ಕಡ್ಡಾಯ

ವಿಯೇಟ್ನಾಂ ಮೂಲದ ಗ್ರೀನ್ MS ಕಂಪನಿಯ ಟ್ಯಾಕ್ಸಿ ಸೇವೆ ರಾಜ್ಯದಲ್ಲಿ ವಿಸ್ತರಿಸುತ್ತಿರುವ ಬೆನ್ನಲ್ಲೇ, ಅದರ ನೋಂದಣಿಗೂ ಸಾರಿಗೆ ಇಲಾಖೆ ನಿಯಂತ್ರಣ ಹೇರಲು ಮುಂದಾಗಿದೆ. ಈಗಾಗಲೇ ಸುಮಾರು 100 ಗ್ರೀನ್ ಎಸ್‌ಎಂ ಟ್ಯಾಕ್ಸಿಗಳು ನೋಂದಣಿಯಾಗಿವೆ. ಇನ್ನು ಮುಂದೆ ಹೊಸ ನೋಂದಣಿಗೆ ಅವಕಾಶ ನೀಡದಂತೆ ಸಾರಿಗೆ ಇಲಾಖೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಆದರೆ ಸರ್ಕಾರದ ನಿಲುವು ಸಂಪೂರ್ಣವಾಗಿ ಸೇವೆ ನಿರ್ಬಂಧಿಸುವುದಲ್ಲ. ಆಟೋಗಳ ಮಾದರಿಯಲ್ಲಿ ಗ್ರೀನ್ ಎಸ್‌ಎಂ ಟ್ಯಾಕ್ಸಿಗಳಲ್ಲೂ ಮೀಟರ್ ಅಳವಡಿಕೆ ಕಡ್ಡಾಯವಾಗಬೇಕು. ಮೀಟರ್ ಇದ್ದರೆ ಮಾತ್ರ ಅನುಮತಿ ನೀಡುವ ಕುರಿತು ಸರ್ಕಾರ ಚಿಂತನೆ ನಡೆಸಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭೈರತಿ ಸುರೇಶ್ ತಿಳಿಸಿದ್ದಾರೆ. ಇದರಿಂದ ಹೊಸದಾಗಿ ರಾಜ್ಯ ಪ್ರವೇಶಿಸುತ್ತಿರುವ ಕ್ಯಾಬ್ ಕಂಪನಿಗಳಿಗೂ ಸ್ಥಳೀಯ ಸಾರಿಗೆ ನಿಯಮಗಳನ್ನು ಪಾಲಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'SIRಗೆ ಆದೇಶ ನೀಡಿದ್ದು ಯಾರು?': ಚುನಾವಣಾ ಆಯೋಗದ ವಿರುದ್ಧ 48 ಪ್ರಶ್ನೆಗಳ ಅಸ್ತ್ರ; ಸುಪ್ರೀಂ ಅನುಮತಿ ಕೋರಿದ INDIA!

ಆರ್ಥಿಕ ಸಹಾಯಕ್ಕಾಗಿ ಮನವಿ ವಿಡಿಯೋ ವೈರಲ್: 'ಜೋಶ್' ನಟ ಶರದ್ ಕಪೂರ್ ಭೇಟಿ ಮಾಡಿದ ಸೋನು ಸೂದ್! Video

'ನಮ್ಮ ಮಕ್ಕಳನ್ನೇ ಸೋಲಿಸೋಕೆ ಆಗಿಲ್ಲ, ಇನ್ನು?': U19 ಏಷ್ಯಾಕಪ್ ಗೆಲುವಿನ ಬೆನ್ನಲ್ಲೇ ಪಾಕ್ ಕಾಲೆಳೆದ ಓವೈಸಿ, Video

ಬಾಕ್ಸ್ ಆಫೀಸ್‌ನಲ್ಲಿ 'Ramayana' ಹೊಸ ದಾಖಲೆ; 11 ದಿನಕ್ಕೆ ವಿಶ್ವಾದ್ಯಂತ 1,384 ಕೋಟಿ ರೂ. ಕಲೆಕ್ಷನ್! ಧುರಂದರ್ 2 ದಾಖಲೆ ಪತನ

ಚಹಾಲ್ ಮಾಜಿ ಪತ್ನಿ ಹೊಸ ಇನ್ನಿಂಗ್ಸ್ ಆರಂಭ; ಸಿನಿಮಾ ಕ್ಷೇತ್ರಕ್ಕೆ ಧನಶ್ರೀ ವರ್ಮಾ ಪಾದಾರ್ಪಣೆ!