ಸಂಗ್ರಹ ಚಿತ್ರ 
ರಾಜ್ಯ

ಗುಂಡ್ಲುಪೇಟೆಯಲ್ಲಿ ಕೋಮು ಬಣ್ಣ ಪಡೆಯುತ್ತಿದ್ದ ಪ್ರಕರಣಕ್ಕೆ ಟ್ವಿಸ್ಟ್; ದೇವಸ್ಥಾನದ ಮುಂದೆ ಮಾಂಸ ಹಾಕಿದ್ದು ನಾಯಿಯಂತೆ, CCTVಯಲ್ಲಿ ಬಯಲಾಯ್ತು ಅಸಲಿ ಸತ್ಯ..!

ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯಿಂದ ಇದು ಬೀದಿ ನಾಯಿಯ ಕೃತ್ಯವೆಂದು ಸಾಬೀತಾಗಿದ್ದು, ಇದರಿಂದ ಸಂಭವಿಸುತ್ತಿದ್ದ ದೊಡ್ಡದೊಂದು ಅನಾಹುತವೊಂದು ತಪ್ಪಿದಂತಾಗಿದೆ.

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ದೇವಸ್ಥಾನವೊಂದರ ಮುಂಭಾಗದಲ್ಲಿ ಮಾಂಸದ ತುಂಡು ಪತ್ತೆಯಾದ ಹಿನ್ನೆಲೆಯಲ್ಲಿ ಭುಗಿಲೇಳಲಿದ್ದ ಕೋಮು ಉದ್ವಿಗ್ನತೆಯನ್ನು ಚಾಮರಾಜನಗರ ಪೊಲೀಸರು ಅತ್ಯಂತ ಚಾಕಚಕ್ಯತೆಯಿಂದ ಶಮನಗೊಳಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯಿಂದ ಇದು ಬೀದಿ ನಾಯಿಯ ಕೃತ್ಯವೆಂದು ಸಾಬೀತಾಗಿದ್ದು, ಇದರಿಂದ ಸಂಭವಿಸುತ್ತಿದ್ದ ದೊಡ್ಡದೊಂದು ಅನಾಹುತವೊಂದು ತಪ್ಪಿದಂತಾಗಿದೆ.

ಜಿಲ್ಲಾ ಪೊಲೀಸರ ತನಿಖೆ ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯಿಂದ ಪ್ರಕರಣ ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು, ದೇವಸ್ಥಾನದ ಮುಂದೆ ಮಾಂಸದ ತುಂಡು ಹಾಕಿದ್ದು ದುಷ್ಕರ್ಮಿಗಳಲ್ಲ, ಬದಲಿಗೆ ನಾಯಿಯೊಂದು ಎಂದು ತಿಳಿದುಬಂದಿದೆ.

ಗುಂಡ್ಲುಪೇಟೆ ಪಟ್ಟಣದ ಗುಂಡ್ಲುಪೇಟೆ-ಚಾಮರಾಜನಗರ ಮುಖ್ಯ ರಸ್ತೆಯಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಮುಂದೆ ಸೋಮವಾರ ಬೆಳಗ್ಗೆ ಈ ಘಟನೆ ನಡೆದಿತ್ತು.

ಬೆಳಗಿನ ಪೂಜಾ ವಿಧಿವಿಧಾನಗಳಿಗಾಗಿ ದೇವಸ್ಥಾನಕ್ಕೆ ಆಗಮಿಸಿದ ಅರ್ಚಕರು ಪ್ರವೇಶದ್ವಾರದ ಮುಂದೆ ಮಾಂಸದ ತುಂಡು ಬಿದ್ದಿರುವುದನ್ನು ಗಮನಿಸಿದ್ದರು.

ಇದರಿಂದ ಆಕ್ರೋಶಗೊಂಡ ದೇವಸ್ಥಾನದ ಭಕ್ತರು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ಕಿಡಿಗೇಡಿಗಳು ದೇವಸ್ಥಾನದ ಬಳಿ ಗೋಮಾಂಸ ಎಸೆದಿದ್ದಾರೆ ಎಂದು ಆರೋಪಿಸಿದ್ದರು.

ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿ ಹಿಂದೂಪರ ಸಂಘಟನೆಗಳು ಗುಂಡ್ಲುಪೇಟೆ ಪೊಲೀಸರಿಗೆ ದೂರು ನೀಡಿದ್ದವು. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕವಾಗಿ ಹರಡಿದ್ದು, ಉದ್ದೇಶಪೂರ್ವಕವಾಗಿ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆ ತರಲು ಯತ್ನಿಸಲಾಗಿದೆ ಎಂಬಂತಹ ಕಾಮೆಂಟ್‌ಗಳು ಹರಿದಾಡಿದ್ದವು.

ಪ್ರಕರಣ ಕೋಮು ಸಂಘರ್ಷದ ಸ್ವರೂಪ ಪಡೆದುಕೊಳ್ಳುವ ಆತಂಕ ಎದುರಾದ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

ಸುತ್ತಮುತ್ತಲಿನ ಪ್ರದೇಶಗಳಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಸಲಿ ಸಂಗತಿ ಬೆಳಕಿಗೆ ಬಂದಿದೆ. ನಾಯಿಯೊಂದು ಮಾಂಸದ ತುಂಡನ್ನು ಬಾಯಿಯಲ್ಲಿ ಕಚ್ಚಿಕೊಂಡು ಬಂದು ದೇವಸ್ಥಾನದ ಎದುರಿನ ರಸ್ತೆ ಬದಿಯಲ್ಲಿ ಹಾಕಿರುವುದು ದೃಶ್ಯಾವಳಿಗಳಲ್ಲಿ ಪತ್ತೆಯಾಗಿದೆ.

ಈ ಕುರಿತು ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ಎಂ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ತನಿಖೆಯಲ್ಲಿ ಘಟನೆಗೆ ನಾಯಿಯೇ ಕಾರಣ ಎಂಬುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಅಥವಾ ಪರಿಶೀಲಿಸದ ಮಾಹಿತಿಗಳನ್ನು ಹರಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಇದೇ ವೇಳೆ ಸುಳ್ಳು ಹಾಗೂ ಪ್ರಚೋದನಕಾರಿ ಸುದ್ದಿಗಳನ್ನು ಹಂಚುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜಮ್ಮು-ಕಾಶ್ಮೀರದ ಕುಲ್ಗಾಮ್‌ನಲ್ಲಿ ಮತ್ತೆ ಗುಂಡಿನ ಚಕಮಕಿ; ಉಗ್ರ ಲತೀಫ್ ಸುತ್ತುವರೆದಿರುವ ಭದ್ರತಾ ಪಡೆಗಳು, ಶರಣಾಗುವಂತೆ ಮನವಿ, Video ವೈರಲ್..!

ಹಾರ್ಮುಜ್‌ನಲ್ಲಿ LPG ಟ್ಯಾಂಕರ್ ಮೇಲಿನ ದಾಳಿ ಖಂಡಿಸಿದ ಭಾರತ; ಓರ್ವ ಭಾರತೀಯ ನಾಪತ್ತೆ, ಇಬ್ಬರಿಗೆ ಗಾಯ

ಮತದಾರರ ಧರ್ಮದ ಬಗ್ಗೆ ಯಾವುದೇ ಡೇಟಾ ಇಲ್ಲ: ಹಿಂದೂಗಳು ನಾಪತ್ತೆ ಎಂದ CM ಯೋಗಿಗೆ CEO ಕೌಂಟರ್‌!

'ನಾವು ಬೇಸತ್ತು ಹೋಗಿದ್ದೇವೆ', ಕಾಂಗ್ರೆಸ್ ಕಾರ್ಯಕರ್ತರಿಗೆ ಅನುಕೂಲ ಕಲ್ಪಿಸಲು ತೆರಿಗೆದಾರರ ಹಣ ದುರುಪಯೋಗ: ಹೆಚ್ ಡಿ ಕುಮಾರಸ್ವಾಮಿ

ಸೈಬೀರಿಯಾದಲ್ಲಿ ಘೋರ ದುರಂತ: ರಷ್ಯಾದ ಸೇನಾ ವಿಮಾನ ಪತನ; ಎಲ್ಲಾ 17 ಸಿಬ್ಬಂದಿಯೂ ಸಾವು!