ಬೆಂಗಳೂರು: ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆ ಮಾಡಿದೆ. 32 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಲಯವಾರು ಹೊಸ ಆಯುಕ್ತರ ಹುದ್ದೆಗಳನ್ನು ಸೃಜಿಸಿ ಪ್ರಮುಖ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದ್ದು, ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರನ್ನು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರಿಗೆ 6 ಹೊಸ ಪೊಲೀಸ್ ಆಯುಕ್ತರ ನೇಮಕ ಮಾಡಲಾಗಿದ್ದು, ಆರ್ ಹಿತೇಂದ್ರ ಅವರನ್ನು ಮುಖ್ಯ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
6 ಹೊಸ ಪೊಲೀಸ್ ಆಯುಕ್ತರು ಯಾರು?
ಲಾಭೂ ರಾಮ್ -ಸೆಂಟ್ರಲ್
ಡಾ. ಪಿ.ಎಸ್. ಹರ್ಷ - ಪೂರ್ವ
ವಿಕಾಶ್ ಕುಮಾರ್ ವಿಕಾಶ್ - ಪಶ್ಚಿಮ
ಡಾ. ಎಂ.ಬಿ. ಬೋರಲಿಂಗಯ್ಯ - ಉತ್ತರ
ಹೇಮಂತ್ ಎಂ. ನಿಂಬಾಳ್ಕರ್ - ಸಂಚಾರ