ಸಂತೋಷ್ ಲಾಡ್ 
ರಾಜ್ಯ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೇ ಸಿಗಲಿಲ್ಲ, ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಸಿಗುತ್ತಾ?: ಬರ ಪರಿಹಾರ ಕುರಿತು ಸಂತೋಷ್ ಲಾಡ್

ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸರ್ಕಾರವು ತಮ್ಮ ಹಕ್ಕು ಮಂಡಿಸಿ ಸುಪ್ರೀಂ ಕೋರ್ಟ್‌ಗೆ ಹೋಗಿ ಬರ ಪರಿಹಾರ ಹಣವನ್ನು ಪಡೆದಿತ್ತು. ಆಗಲೇ ಕೇಂದ್ರಕ್ಕೆ ನಾಚಿಕೆಯಾಗಬೇಕಿತ್ತು ಎಂದು ತಿಳಿಸಿದರು.

ಬೆಂಗಳೂರು: ಕರ್ನಾಟಕಕ್ಕೆ ಬರ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರದ ವಿಳಂಬದ ಬಗ್ಗೆ ಸಚಿವ ಸಂತೋಷ್ ಲಾಡ್ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜ್ಯಗಳು ಬರಗಾಲಕ್ಕೆ ತುತ್ತಾದಾಗ ನೆರವು ನೀಡುವ ಜವಾಬ್ದಾರಿ ಕೇಂದ್ರ ಸರ್ಕಾರದ್ದು ಎಂದಿದ್ದಾರೆ.

ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಕೇಂದ್ರದಿಂದ ಹಣಕಾಸಿನ ನೆರವು ಸಿಕ್ಕಿರಲಿಲ್ಲ. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಕೇಂದ್ರದಿಂದ ಹಣ ಬಂದಿಲ್ಲ. ಬಿಜೆಪಿ ಸರ್ಕಾರವಿದ್ದಾಗಲೇ ಬರ ಬರಿಹಾರ ಬಂದಿಲ್ಲ ಎಂದರೆ ಈಗಲೂ ಬರುವುದಿಲ್ಲ ಎಂದೇ ನಾವು ಭಾವಿಸುತ್ತಿದ್ದೇವೆ ಎಂದರು.

ನಾವು ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸರ್ಕಾರವು ತಮ್ಮ ಹಕ್ಕು ಮಂಡಿಸಿ ಸುಪ್ರೀಂ ಕೋರ್ಟ್‌ಗೆ ಹೋಗಿ ಬರ ಪರಿಹಾರ ಹಣವನ್ನು ಪಡೆದಿತ್ತು. ಆಗಲೇ ಕೇಂದ್ರಕ್ಕೆ ನಾಚಿಕೆಯಾಗಬೇಕಿತ್ತು. ಅದೇನು ಅವರ ದುಡ್ಡಲ್ಲ, ಅದು ನಮ್ಮದೇ ದುಡ್ಡು ಎಂದು ತಿಳಿಸಿದರು.

ಸದ್ಯ ಮುಖ್ಯಮಂತ್ರಿಯಾಗಿರುವ ಡಿಕೆ ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಈ ವಿಷಯದ ಕುರಿತು ಮಾತುಕತೆ ನಡೆಸುತ್ತಿದ್ದು, ಸಕಾರಾತ್ಮಕ ಫಲಿತಾಂಶಕ್ಕಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

ರಾಹುಲ್ ಗಾಂಧಿಯವರು ತಮ್ಮ ತಾಯಿ ಸೋನಿಯಾ ಬಗ್ಗೆ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಇಂತಹ ಹುಚ್ಚು ಚರ್ಚೆಗಳು ಅರ್ಥಹೀನ. ತಮ್ಮ ತಂದೆ ಮತ್ತು ತಾಯಿ ಯಾವ ರೀತಿಯಲ್ಲಿ ಅನ್ಯೋನ್ಯವಾಗಿದ್ದರು ಎಂಬುದನ್ನು ರಾಹುಲ್ ತಿಳಿಸಿದ್ದಾರೆ. ಆದರೆ, ಇವರು ಬೇರೆಯದೇ ರೀತಿಯಲ್ಲಿ ಹೇಳುತ್ತಿದ್ದಾರೆ. ಮೋದಿಯವರು ಮದುವೆಯಾಗಿದ್ದರೂ ಹೆಂಡತಿಯನ್ನು ಬಿಟ್ಟಿದ್ದಾರಲ್ಲ ಅದರ ಬಗ್ಗೆ ಏನು ಹೇಳೋಣ ಎಂದು ಪ್ರಶ್ನಿಸಿದರು.

ರಾಹುಲ್ ಗಾಂಧಿ ಹೇಳಿದ್ದನ್ನು ಚರ್ಚೆ ಮಾಡಬೇಕು ಎಂದಾದರೆ ಮೋದಿಯವರ ವಿಚಾರವನ್ನು ಬಿಜೆಪಿಗರು ಚರ್ಚಿಸಬೇಕು. ಈ ರೀತಿಯ ಚರ್ಚೆಗಳೆಲ್ಲ ನಡೆಯುವುದು ವ್ಯರ್ಥ. ಈ ಬಗ್ಗೆ ನಾನು ಹೆಚ್ಚೇನು ಹೇಳಲು ಬಯಸುವುದಿಲ್ಲ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ICICI ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚರ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ರದ್ದುಗೊಳಿಸಿದ ಬಾಂಬೆ ಹೈಕೋರ್ಟ್!

'ಬೆಳಗಾವಿ ಅಧಿವೇಶನದಲ್ಲಿ ಸರ್ಕಾರಿ ಸೌಲಭ್ಯ ಬೇಡ': ಸ್ವಂತ ಖರ್ಚಿನಲ್ಲೇ ಭಾಗವಹಿಸುವುದಾಗಿ ಶಾಸಕ ಶರಣಗೌಡ ಕಂದಕೂರು ಪತ್ರ

ಬಿಗ್ ಟ್ವಿಸ್ಟ್ ಕೊಟ್ಟ Akvan ಚಂಡಮಾರುತ: ದಿಕ್ಕು ಬದಲಾವಣೆ, ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆ ಸಾಧ್ಯತೆ

ಜಾರ್ಖಂಡ್‌: NTPCಯಲ್ಲಿ 'ಟೇಕ್-ಅಪ್ ಟ್ರಾಲಿ' ಕುಸಿದು ಮೂವರು ಕಾರ್ಮಿಕರು ಸಾವು; ನಾಲ್ವರಿಗೆ ಗಾಯ

'ಜಟಾಯು' ಎಫೆಕ್ಟ್: ಕೇರಳಂನಲ್ಲಿ ಕಳೆದ ನಾಲ್ಕೇ ದಿನದಲ್ಲಿ 20 ಕೋಟಿ ಸೇರಿ ಒಟ್ಟಾರೆ ದಾಖಲೆಯ 50 ಕೋಟಿಗೂ ಹೆಚ್ಚು ಕಲೆಕ್ಷನ್!