ಬಾಸ್ಮತಿ ಅಕ್ಕಿ online desk
ರಾಜ್ಯ

ಗಗನಕ್ಕೇರಿದ್ದ ಅಕ್ಕಿ ಬೆಲೆ ದಿಢೀರ್ ಇಳಿಕೆ; 90 ರೂ. ಇದ್ದ ಸೋನಾ ಮಸೂರಿ ಈಗ 65 ರೂ.ಗೆ ಇಳಿಕೆ, ಗ್ರಾಹಕರಿಗೆ ಬಿಗ್ ರಿಲೀಫ್..!

ಕೆಲವೇ ದಿನಗಳ ಹಿಂದೆ ಕೆಜಿಗೆ ರೂ.80ರಿಂದ ರೂ.90ರವರೆಗೆ ಮಾರಾಟವಾಗುತ್ತಿದ್ದ ಅಕ್ಕಿ, ಈಗ ರೂ.65ರಿಂದ ರೂ.70ರ ದರದಲ್ಲಿ ಲಭ್ಯವಾಗುತ್ತಿದೆ. ಇದರಿಂದ ಪ್ರತಿ ಕೆಜಿಗೆ ಸುಮಾರು ರೂ.10ರಿಂದ ರೂ.20ರವರೆಗೆ ಬೆಲೆ ಇಳಿಕೆಯಾಗಿದೆ.

ಬೆಂಗಳೂರು: ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದ ಅಕ್ಕಿ ಬೆಲೆಯಿಂದ ಕಂಗೆಟ್ಟಿದ್ದ ಗ್ರಾಹಕರಿಗೆ ಇದೀಗ ಕೊಂಚ ನಿರಾಳತೆ ಸಿಕ್ಕಿದೆ. ಮಾರುಕಟ್ಟೆಯಲ್ಲಿ ಸೋನಾ ಮಸೂರಿ ಅಕ್ಕಿಯ ದರ ದಿಢೀರ್ ಕುಸಿತ ಕಂಡಿದೆ.

ಕೆಲವೇ ದಿನಗಳ ಹಿಂದೆ ಕೆಜಿಗೆ ರೂ.80ರಿಂದ ರೂ.90ರವರೆಗೆ ಮಾರಾಟವಾಗುತ್ತಿದ್ದ ಅಕ್ಕಿ, ಈಗ ರೂ.65ರಿಂದ ರೂ.70ರ ದರದಲ್ಲಿ ಲಭ್ಯವಾಗುತ್ತಿದೆ. ಇದರಿಂದ ಪ್ರತಿ ಕೆಜಿಗೆ ಸುಮಾರು ರೂ.10ರಿಂದ ರೂ.20ರವರೆಗೆ ಬೆಲೆ ಇಳಿಕೆಯಾಗಿದೆ.

ಇತ್ತೀಚಿನ ದಿನಗಳಲ್ಲಿ ಭತ್ತದ ಪೂರೈಕೆಯಲ್ಲಿ ಉಂಟಾಗಿದ್ದ ಕೊರತೆಯಿಂದಾಗಿ ಅಕ್ಕಿ ಬೆಲೆ ಏರಿಕೆಯಾಗಿತ್ತು. ಆದರೆ, ಈಗ ಮಹಾರಾಷ್ಟ್ರ ಮತ್ತು ತೆಲಂಗಾಣದಿಂದ ಭತ್ತದ ಪೂರೈಕೆ ಹೆಚ್ಚಾಗಿದೆ.

ಕಟಾವು ಕಾರ್ಯ ಪೂರ್ಣಗೊಂಡು ಹೆಚ್ಚಿನ ಪ್ರಮಾಣದಲ್ಲಿ ಭತ್ತ ಮಾರುಕಟ್ಟೆ ಹಾಗೂ ಅಕ್ಕಿ ಗಿರಣಿಗಳಿಗೆ ತಲುಪುತ್ತಿರುವುದರಿಂದ ದರ ಇಳಿಕೆಯಾಗಿದೆ.

ಒಂದು ಕ್ವಿಂಟಲ್ ಅಕ್ಕಿಯ ಬೆಲೆ ಈ ಹಿಂದೆ ಸುಮಾರು ರೂ.8,500ರಷ್ಟಿತ್ತು. ಇದೀಗ ರೂ.6,500ಕ್ಕೆ ಇಳಿದಿದೆ. ಅಂದರೆ, ಕ್ವಿಂಟಲ್‌ಗೆ ಬರೋಬ್ಬರಿ ರೂ.2,000 ಕಡಿಮೆಯಾಗಿದೆ.

ಈ ಕುರಿತು ಖಾಸಗಿ ಸುದ್ದಿವಾಹನಿಯೊಂದಿಗೆ ಮಾತನಾಡಿರುವ ಅಕ್ಕಿ ಗಿರಣಿ ಮಾಲೀಕರ ಸಂಘದ ರಾಜ್ಯ ಕಾರ್ಯಾಧ್ಯಕ್ಷೆ ಸಾವಿತ್ರಿ ಪುರುಷೋತ್ತಮ ಅವರು, ಅಕ್ಕಿ ಬೆಲೆ ಇಳಿಕೆಯಿಂದ ಗ್ರಾಹಕರಿಗೆ ಅನುಕೂಲವಾಗಲಿದೆ. ಮತ್ತೊಂದೆಡೆ, ಭತ್ತ ಬೆಳೆದ ರೈತರಿಗೂ ಉತ್ತಮ ಬೆಲೆ ದೊರೆಯುತ್ತಿದೆ ಎಂದು ತಿಳಿಸಿದ್ದಾರೆ.

ತುಂಗಭದ್ರಾ ನದಿ ಪಾತ್ರದಲ್ಲಿ ಭತ್ತದ ಬೆಳೆಯ ಪ್ರಮಾಣ ಕಡಿಮೆಯಿದ್ದರೂ, ಕೃಷ್ಣಾ ನದಿ ಪಾತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬೆಳೆಯಲಾಗಿದೆ. ಇದೀಗ ಕಟಾವು ಪೂರ್ಣಗೊಂಡಿರುವುದರಿಂದ ಮಾರುಕಟ್ಟೆಗೆ ಭತ್ತದ ಪೂರೈಕೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಅಕ್ಕಿ ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ವಿವರಿಸಿದ್ದಾರೆ.

ಆದರೆ, ಸರ್ಕಾರ ಅಕ್ಕಿ ದಾಸ್ತಾನು ಮಿತಿಯನ್ನು ಮತ್ತಷ್ಟು ಕಡಿಮೆ ಮಾಡಿದರೆ ಅಕ್ಕಿ ಗಿರಣಿಗಳಿಗೆ ತೊಂದರೆಯಾಗಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಮತ್ತೆ ಅಕ್ಕಿ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಸಾವಿತ್ರಿ ಪುರುಷೋತ್ತಮ ಎಚ್ಚರಿಸಿದ್ದಾರೆ. ಹೀಗಾಗಿ ಸರ್ಕಾರ ದಾಸ್ತಾನು ಮಿತಿಯನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದಾರೆ.

ಬೇಸಿಗೆಯಲ್ಲಿ ಹೊಸ ಭತ್ತದ ಬೆಳೆ ಬರುವ ಸಾಧ್ಯತೆ ಕಡಿಮೆ ಇರುವುದರಿಂದ, ಸದ್ಯ ಮಾರುಕಟ್ಟೆಗೆ ಪೂರೈಕೆಯಾಗುತ್ತಿರುವ ಭತ್ತವನ್ನೇ ಅವಲಂಬಿಸಬೇಕಾಗಿದೆ. ಈಗ ಸಂಗ್ರಹವಾಗುವ ಭತ್ತದ ದಾಸ್ತಾನನ್ನೇ ಬಳಸಿಕೊಂಡು ಮುಂದಿನ ಒಂದು ವರ್ಷದವರೆಗೆ ಅಕ್ಕಿ ಗಿರಣಿಗಳು ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ ವಿಮಾನ ನಿಲ್ದಾಣದಲ್ಲಿ ಆಗಂತುಕನ ಆತಂಕ: ಟಿಕೆಟ್ ಇಲ್ಲ, ದಾಖಲೆಗಳೂ ಇಲ್ಲ, ಬಲವಂತವಾಗಿ ನುಗ್ಗಲು ಯತ್ನಿಸಿದವ CISF ವಶಕ್ಕೆ! Video

Arnab ಚಂಡಮಾರುತ ಸಂಕಷ್ಟದಲ್ಲಿ ನೆರವು; ಕರ್ನಾಟಕಕ್ಕೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಧನ್ಯವಾದ; ಡಿಕೆಶಿ ಹೇಳಿದ್ದೇನು?

ದೇವಾಲಯದ ಹುಂಡಿ ತುಂಬಿದರೂ ಅರ್ಚಕರ ಹೊಟ್ಟೆ ತುಂಬುತ್ತಿಲ್ಲ; ಹಾಲು, ತುಪ್ಪ, ಅಕ್ಕಿ ಬೆಲೆ ಏರಿಕೆ, ವೇತನ ಹೆಚ್ಚಳ, ವಿಮೆಗೆ ಆಗ್ರಹ!

ಮನರೇಗಾ ಯೋಜನೆಯ ₹13.57 ಲಕ್ಷ ಗುಳುಂ; ಕೆಲಸ ಮಾಡದೆ ಸರ್ಕಾರಿ ಹಣ ಲೂಟಿ, ಇಬ್ಬರು ಆರೋಪಿಗಳಿಗೆ ಜೈಲು ಶಿಕ್ಷೆ!

ಊಟಿಯಲ್ಲಿ ಮೈಕೊರೆಯುವ ಚಳಿ; 5.9 ಡಿಗ್ರಿಗೆ ಕುಸಿದ ಕನಿಷ್ಠ ತಾಪಮಾನ, ಹಿಮದ ಹೊದಿಕೆಯಲ್ಲಿ ಗಿರಿಧಾಮ