ಅಪ್ಪಾಶಿ - ರಾಜೇಶ್ವರಿ 
ರಾಜ್ಯ

ಬಾಗಲಕೋಟೆ: ಪತಿ-ಪತ್ನಿ ನೇಣಿಗೆ ಶರಣು; ಅಪ್ಪ-ಅಮ್ಮನ ಜಗಳದ ನಡುವೆ ಇಬ್ಬರು ಮಕ್ಕಳು ಅನಾಥ!

ಆತ್ಮಹತ್ಯೆ ಮಾಡಿಕೊಂಡ ದಂಪತಿಯನ್ನು 35 ವರ್ಷದ ಅಪ್ಪಾಶಿ ನಡುವಿನಮನಿ ಮತ್ತು 30 ವರ್ಷದ ರಾಜೇಶ್ವರಿ ನಡುವಿನಮನಿ ಎಂದು ಗುರುತಿಸಲಾಗಿದೆ.

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದಲ್ಲಿ ಕೌಟುಂಬಿಕ ಕಲಹಕ್ಕೆ ಬೇಸತ್ತು ಪತಿ-ಪತ್ನಿ ಇಬ್ಬರೂ ನೇಣಿಗೆ ಶರಣಾಗಿರುವ ಆಘಾತಕಾರಿ ಘಟನೆ ಶುಕ್ರವಾರ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ದಂಪತಿಯನ್ನು 35 ವರ್ಷದ ಅಪ್ಪಾಶಿ ನಡುವಿನಮನಿ ಮತ್ತು 30 ವರ್ಷದ ರಾಜೇಶ್ವರಿ ನಡುವಿನಮನಿ ಎಂದು ಗುರುತಿಸಲಾಗಿದೆ.

ಈ ದಂಪತಿ ಹಾಗೂ ಕುಟುಂಬಸ್ಥರ ನಡುವೆ ಕಳೆದ ಹಲವು ವರ್ಷಗಳಿಂದ ಕೌಟುಂಬಿಕ ಕಲಹವಿತ್ತು. ಇದೇ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಪ್ರತಿನಿತ್ಯ ಜಗಳ ನಡೆಯುತ್ತಿತ್ತು.

ನಿರಂತರ ಜಗಳದಿಂದ ಮನನೊಂದ ಪತಿ ಅಪ್ಪಾಶಿ, ಇಂದು ಮನೆಯ ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ನೇಣಿಗೆ ಶರಣಾಗಿರುವುದನ್ನು ಕಂಡ ಪತ್ನಿ ರಾಜೇಶ್ವರಿ ತೀವ್ರ ಆಘಾತಕ್ಕೊಳಗಾಗಿದ್ದಾರೆ. ನಂತರ ಪತ್ನಿಯೂ ಕೋಣೆಯೊಳಗೆ ನೇಣು ಹಾಕಿಕೊಂಡು ಪ್ರಾಣ ಬಿಟ್ಟಿದ್ದಾರೆ.

ಈ ದಂಪತಿಗೆ ಇಬ್ಬರು ಪುಟ್ಟ ಹೆಣ್ಣು ಮಕ್ಕಳಿದ್ದಾರೆ. ಅಪ್ಪ-ಅಮ್ಮನ ಜಗಳದ ನಡುವೆ ಈಗ ಇಬ್ಬರೂ ಪೋಷಕರನ್ನು ಕಳೆದುಕೊಂಡು ಆ ಪುಟ್ಟ ಕಂದಮ್ಮಗಳು ಅನಾಥರಾಗಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ನಮ್ಮಲ್ಲಿ ನೀರಿದ್ದರೆ ಖಂಡಿತ ತಮಿಳುನಾಡಿಗೆ ಕೊಡ್ತೇವೆ, ಈ ವರ್ಷ ಕುಡಿಯುವ ನೀರಿಗೇ ತತ್ವಾರವಾಗಿದೆ ’: ಸಿಎಂ ಡಿ ಕೆ ಶಿವಕುಮಾರ್; Video

ಪತಿ ಜೊತೆ ಅಕ್ರಮ ಸಂಬಂಧ ಶಂಕೆ; ಇಂಡಿಗೋ ಸಿಬ್ಬಂದಿ ವರ್ಷಾ ಹತ್ಯೆ; ಪತ್ನಿಯಿಂದಲೇ ಸುಪಾರಿ!

ನಾಳೆ ಪ್ರಧಾನಿ ಮೋದಿಯಿಂದ 'ನಿತೀಶ್ ಸೇತು' ಉದ್ಘಾಟನೆ

HDK vs DKS ಸಂಘರ್ಷಕ್ಕೆ ಸ್ವಾಮೀಜಿ ಎಂಟ್ರಿ: ಎಚ್‌ಡಿ ಕುಮಾರಸ್ವಾಮಿ ವಿರುದ್ಧ ನಿಶ್ಚಲಾನಂದನಾಥ ಸ್ವಾಮೀಜಿ ಕಿಡಿ!

'ಮುಸ್ಲಿಂ' ಅನ್ನೋ ಕಾರಣಕ್ಕೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಿಂದ ಸಿರಾಜ್ ಗೆ ಕೊಕ್! ವಿವಾದಕ್ಕೆ ಕಾರಣವಾಯ್ತು ಕಾಂಗ್ರೆಸ್ MP ಹೇಳಿಕೆ, ಬಿಜೆಪಿ ತಿರುಗೇಟು