ಕಾವೇರಿ ಜಲ  
ರಾಜ್ಯ

ಕಾವೇರಿ ಕದನದಲ್ಲಿ ಮಹಾ ತಿರುವು! ಸುಪ್ರೀಂನಲ್ಲಿ ವಿಜಯ್ ಸರ್ಕಾರದ ಅರ್ಜಿ ವಜಾ ಬೆನ್ನಲ್ಲೇ ಕರ್ನಾಟಕಕ್ಕೆ ಶಾಕ್: ತಮಿಳುನಾಡಿಗೆ ನಿತ್ಯ 2,000 ಕ್ಯೂಸೆಕ್ ನೀರು ಬಿಡಲು CWRC ಶಿಫಾರಸು

ಸುಪ್ರೀಂ ಕೋರ್ಟ್‌ನಲ್ಲಿ 11 ಟಿಎಂಸಿ ಹೆಚ್ಚುವರಿ ನೀರು ಬಿಡುಗಡೆ ಅರ್ಜಿ ವಜಾಗೊಂಡು ನಿರಾಳತೆ ಸಿಕ್ಕ ಬೆನ್ನಲ್ಲೇ, ಕಾವೇರಿ ನೀರು ನಿಯಂತ್ರಣ ಸಮಿತಿಯು ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ನಿತ್ಯ 2,000 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಶಿಫಾರಸು ಮಾಡಿದೆ. ಆ ಕುರಿತ ವರದಿ ಇಲ್ಲಿದೆ:

ನವದೆಹಲಿ: 11 ಟಿಎಂಸಿ ಹೆಚ್ಚುವರಿ ನೀರು ಬಿಡುಗಡೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ತಮಿಳುನಾಡಿಗೆ ಹಿನ್ನಡೆಯಾದ ಬೆನ್ನಲ್ಲೇ ಕಾವೇರಿ ನೀರಿ ನಿಯಂತ್ರಣ ಸಮಿತಿ ಕರ್ನಾಟಕಕ್ಕೆ ಮತ್ತೊಂದು ಸಂಕಷ್ಟ ತಂದೊಡ್ಡಿದೆ. ಹೌದು, ಮುಂದಿನ 15 ದಿನಗಳ ಕಾಲ ನಿತ್ಯ 2,000 ಕ್ಯೂಸೆಕ್ ನೀರು ಹರಿಸಲು ಸೂಚನೆ ನೀಡಿರುವುದು ಈಗಾಗಲೇ ಬರದ ಬವಣೆಯಲ್ಲಿರುವ ರಾಜ್ಯದ ಜನತೆ ಹಾಗೂ ರೈತರಲ್ಲಿ ತೀವ್ರ ಆತಂಕ ಮೂಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ಪ್ರತಿದಿನ 2,000 ಕ್ಯೂಸೆಕ್ ನೀರು!

ನವದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) ಅಧ್ಯಕ್ಷ ವಿನೀತ್ ಗುಪ್ತಾ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿಯ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಸಭೆಯಲ್ಲಿ, ಮುಂದಿನ 15 ದಿನಗಳ ಕಾಲ ಪ್ರತಿದಿನ 2,000 ಕ್ಯೂಸೆಕ್‌ನಂತೆ ಸುಮಾರು 2.6 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಕರ್ನಾಟಕಕ್ಕೆ ಶಿಫಾರಸು ಮಾಡಲಾಗಿದೆ. ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಕುಡಿಯುವ ನೀರಿಗೂ ಅಭಾವವಿರುವುದರಿಂದ ಹೆಚ್ಚುವರಿ ನೀರು ಹರಿಸುವುದು ಕಷ್ಟಸಾಧ್ಯ ಎಂದು ಕರ್ನಾಟಕದ ಅಧಿಕಾರಿಗಳು ಸಭೆಯಲ್ಲಿ ತಮ್ಮ ನಿಲುವನ್ನು ಮಂಡಿಸಿದರು ಕೂಡ CWRC ಶಿಫಾರಸು ಮಾಡಿದೆ.

ಏತನ್ಮಧ್ಯೆ, CWRC ಕೇವಲ ತಾಂತ್ರಿಕ ಶಿಫಾರಸು ಸಮಿತಿಯಾಗಿದ್ದು, ಇದರ ನಿರ್ಣಯಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಅಂತಿಮ ಅನುಮೋದನೆ ನೀಡಬೇಕಾಗುತ್ತದೆ. ಅದರಂತೆ, ಮುಂಬರುವ ನವೆಂಬರ್ 25, 2026 ರಂದು CWMA ಸಭೆ ನಿಗದಿಯಾಗಿದ್ದು, ಮೇಕೆದಾಟು ಯೋಜನೆಯ ಕುರಿತಾದ ಚರ್ಚೆಗಳ ನಡುವೆಯೇ ಈ ಸಭೆಯು ಅತ್ಯಂತ ಮಹತ್ವ ಪಡೆದುಕೊಂಡಿದೆ. ಒಂದು ವೇಳೆ ಕರ್ನಾಟಕಕ್ಕೆ ಈ ಶಿಫಾರಸಿಗೆ ಆಕ್ಷೇಪವಿದ್ದರೆ, ನವೆಂಬರ್ 25ರ CWMA ಸಭೆಯಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ.

ಇದಕ್ಕೂ ಮುನ್ನ ಇಂದು ಬೆಳಗ್ಗೆ ಅಕ್ಟೋಬರ್ 7ರವರೆಗೆ ತಮಗೆ ಬರಬೇಕಿದ್ದ 11.719 ಟಿಎಂಸಿ ಬಾಕಿ ನೀರನ್ನು (ದಿನಕ್ಕೆ 1.3 ಟಿಎಂಸಿಯಂತೆ 10 ದಿನಗಳಲ್ಲಿ) ತಕ್ಷಣವೇ ಬಿಡುಗಡೆ ಮಾಡಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ಸಲ್ಲಿಸಿದ್ದ ಎರಡು ಅರ್ಜಿಗಳನ್ನು ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ಅಪರೇಶ್ ಕುಮಾರ್ ಸಿಂಗ್ ಅವರ ಸುಪ್ರೀಂ ಕೋರ್ಟ್‌ನ ಪೀಠವು ವಜಾಗೊಳಿಸಿದೆ. ಅಲ್ಲದೆ, ಹೆಚ್ಚುವರಿ ದಾಖಲೆ ಸಲ್ಲಿಸಲು ತಮಿಳುನಾಡು ಸಲ್ಲಿಸಿದ್ದ ಮೂರನೇ ಅರ್ಜಿಯನ್ನೂ ಪೀಠ ತಿರಸ್ಕರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ಕದನದಲ್ಲಿ ಕರ್ನಾಟಕಕ್ಕೆ ಬಿಗ್ ರಿಲೀಫ್! 11 ಟಿಎಂಸಿ ನೀರಿಗಾಗಿ ತಮಿಳುನಾಡು ಸಲ್ಲಿಸಿದ್ದ ಎರಡೂ ಅರ್ಜಿ ಸುಪ್ರೀಂನಲ್ಲಿ ವಜಾ

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಒಂದೆಡೆ ತನಿಖೆ ಬೇಕೆನ್ನುತ್ತೀರಿ, ಈಗ FIR ರದ್ದು ಕೋರುತ್ತಿದ್ದೀರಿ: SIT ತನಿಖೆ ರದ್ದು ಕೋರಿದ್ದ ಗಿರೀಶ್ ಮಟ್ಟಣ್ಣನವರ್‌ ಅರ್ಜಿ ಹೈಕೋರ್ಟ್‌ನಲ್ಲಿ ವಜಾ

'ಅಕ್ವಾನ್ ಚಂಡಮಾರುತ': ಒಡಿಶಾದ ಗೋಪಾಲಪುರ ಸಮೀಪ ಪ್ರವೇಶ ಪ್ರಕ್ರಿಯೆ ಆರಂಭ; 3 ಲಕ್ಷಕ್ಕೂ ಅಧಿಕ ಜನರ ಸ್ಥಳಾಂತರ

35 ವರ್ಷದ ಬಳಿಕ ' ಭಯೋತ್ಪಾದಕರಿಂದ ಕಾಶ್ಮೀರ ಮುಕ್ತ': ಲತೀಫ್ ಭಟ್ ಹತ್ಯೆ ನಂತರ ಅಮಿತ್ ಶಾ ಘೋಷಣೆ

21,900 ಕೋಟಿ ರೂ.ಅಭಿವೃದ್ಧಿ ಯೋಜನೆಗಳಿಗೆ ಸಂಪುಟ ಸಮ್ಮತಿ; ಬೆಂಗಳೂರಿನ 88 ರಸ್ತೆಗಳಿಗೆ ವೈಟ್ ಟಾಪಿಂಗ್ ಭಾಗ್ಯ, ಸಾಲಗಾರರಿಗೆ ಬಿಗ್ ರಿಲೀಫ್..!