ಬಡ ರೋಗಿಗಳಿಗೆ ಸೇರಬೇಕಿದ್ದ ಬಿಪಿ, ಶುಗರ್ ಮಾತ್ರೆಗಳು ನದಿ ದಡದಲ್ಲಿ ಪತ್ತೆ Online Desk
ರಾಜ್ಯ

ಕಲಬುರಗಿಯ ಕಾಗಿಣಾ ನದಿ ಪಾತ್ರದಲ್ಲಿ ರಾಶಿ ರಾಶಿ ಸರ್ಕಾರಿ ಔಷಧಿಗಳು ಪತ್ತೆ: ಆರೋಗ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ!

ಕಲಬುರಗಿ ಜಿಲ್ಲೆಯ ಶಹಾಬಾದ್ ಪಟ್ಟಣದ ಹೊರವಲಯದಲ್ಲಿರುವ ಕಾಗಿಣಾ ನದಿ ಪಾತ್ರದಲ್ಲಿ ಸರ್ಕಾರಿ ಆಸ್ಪತ್ರೆಗಳಿಂದ ಬಡವರಿಗೆ ಉಚಿತವಾಗಿ ವಿತರಿಸಬೇಕಾದ ರಾಶಿ ರಾಶಿ ಮಾತ್ರೆಗಳು ಮತ್ತು ಸಿರಪ್ ಬಾಟಲಿಗಳು ಪತ್ತೆಯಾಗಿದೆ. ಆ ಕುರಿತ ವರದಿ ಇಲ್ಲಿದೆ:

ಕಲಬುರಗಿ: ಕಲಬುರಗಿ ಜಿಲ್ಲೆಯ ಶಹಾಬಾದ್ ಪಟ್ಟಣದ ಹೊರವಲಯದಲ್ಲಿರುವ ಕಾಗಿಣಾ ನದಿ ಪಾತ್ರದಲ್ಲಿ ಬಡ ರೋಗಿಗಳಿಗೆ ಉಚಿತವಾಗಿ ವಿತರಿಸಬೇಕಿದ್ದ ಸರ್ಕಾರಿ ಔಷಧಿ, ಮಾತ್ರೆ ಮತ್ತು ಸಿರಪ್ ಬಾಟಲಿಗಳು ರಾಶಿರಾಶಿಯಾಗಿ ಪತ್ತೆಯಾಗಿದ್ದು, ಜಿಲ್ಲಾ ಆರೋಗ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಯಾವೆಲ್ಲಾ ಔಷಧಿಗಳು ಇವೆ?

ಶಹಾಬಾದ್–ಚಿತ್ತಾಪುರ ರಾಷ್ಟ್ರೀಯ ಹೆದ್ದಾರಿ-150ರ (NH-150) ಬಳಿಯ ಕಾಗಿಣಾ ನದಿ ಸೇತುವೆಯ ಕೆಳಗೆ ಮತ್ತು ನದಿ ದಡದಲ್ಲಿ, Government Supply - Not For Sale ಮುದ್ರಿತವಾಗಿರುವವು ರಕ್ತದೊತ್ತಡ (BP) ನಿಯಂತ್ರಣಕ್ಕೆ ಬಳಸುವ ಟೆಲ್ಮಿಸಾರ್ಟನ್ 40 ಎಂಜಿ, ಮಧುಮೇಹಕ್ಕೆ (ಶುಗರ್) ನೀಡುವ ಮೆಟ್‌ಫಾರ್ಮಿನ್ ಹೈಡ್ರೋಕ್ಲೋರೈಡ್ 500 ಎಂಜಿ ಮತ್ತು 1000 ಎಂಜಿ ಮಾತ್ರೆಗಳು ಹಾಗೂ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ನೀಡುವ ಕಬ್ಬಿಣಾಂಶದ ಸಿರಪ್ ಬಾಟಲಿಗಳು ಪತ್ತೆಯಾಗಿವೆ.

ಸಾರ್ವಜನಿಕರ ಆಕ್ರೋಶ

ಒಂದು ಕಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆಯಿದೆ ಎಂದು ಬಡ ರೋಗಿಗಳನ್ನು ಹೊರಗಿನ ಮೆಡಿಕಲ್ ಶಾಪ್‌ಗಳಿಗೆ ಚೀಟಿ ಬರೆದುಕೊಟ್ಟು ಕಳುಹಿಸಲಾಗುತ್ತದೆ; ಇನ್ನೊಂದೆಡೆ ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಿಗಳನ್ನು ಬಳಸದೆ ಅವಧಿ ಮೀರುವವರೆಗೆ ಇಟ್ಟು ನದಿಗೆ ಎಸೆಯಲಾಗಿದೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ಅಲ್ಲದೆ, ಈ ರಾಸಾಯನಿಕ ಔಷಧಿಗಳು ನದಿ ನೀರಿಗೆ ಸೇರುವುದರಿಂದ ಜಲಮಾಲಿನ್ಯ ಉಂಟಾಗಿ ಜನ-ಜಾನುವಾರುಗಳ ಆರೋಗ್ಯಕ್ಕೆ ಅಪಾಯವಾಗಲಿದೆ ಎಂಬ ಆತಂಕವೂ ಎದುರಾಗಿದೆ.

ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ ಏನು?

ಈ ಕುರಿತು ಪ್ರತಿಕ್ರಿಯಿಸಿರುವ ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (DHO) ಡಾ. ಸಿದ್ದರಾಮಪ್ಪ ಪಾಟೀಲ್, "ಕಾಗಿಣಾ ನದಿ ಬಳಿ ಎರಡು-ಮೂರು ರಟ್ಟಿನ ಪೆಟ್ಟಿಗೆಗಳಲ್ಲಿ ಅವಧಿ ಮೀರಿದ ಬಿಪಿ, ಶುಗರ್ ಮಾತ್ರೆಗಳು ಮತ್ತು ಐರನ್ ಸಿರಪ್ ಎಸೆಯಲಾಗಿದೆ. ಈ ಔಷಧಿಗಳ ಬ್ಯಾಚ್ ಸಂಖ್ಯೆಯನ್ನು ಪರಿಶೀಲಿಸಿ, ಇವು ಯಾವ ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರಕ್ಕೆ ಪೂರೈಕೆಯಾಗಿದ್ದವು ಎಂಬುದನ್ನು ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

BJP ಕೈಗೊಂಬೆಯಾಗದೆ ಧೈರ್ಯ ತೋರಿಸಿ; META ವಿರುದ್ಧ ಯುವ ಕಾಂಗ್ರೆಸ್ ಆಕ್ರೋಶ; ಅಕೌಂಟ್ ಮರುಸ್ಥಾಪನೆಗೆ ಆಗ್ರಹ..!

ಪನ್ನುನ್ ಪ್ರಕರಣ: ಎನ್‌ಎಸ್‌ಎ ದೋವಲ್ ಅವರಿಗೆ ಅಮೆರಿಕ ನ್ಯಾಯಾಲಯದಿಂದ ಸಮನ್ಸ್ ಜಾರಿ

'ಹಿಂದೆ ಬಡತನ ನಿರ್ಮೂಲನೆ ಬಗ್ಗೆ ಮಾತನಾಡಿದವರು ಕಡತ ಸಿದ್ದಪಡಿಸೋದು ಬಿಟ್ಟರೆ ಬೇರೇನೂ ಮಾಡುತ್ತಿರಲಿಲ್ಲ': ಪ್ರಧಾನಿ ಮೋದಿ; Video

ಕಾಶ್ಮೀರದ ಯಾವುದೇ ಯುವಕರು ಭಯೋತ್ಪಾದನೆಯಲ್ಲಿ ತೊಡಗಿಸಿಕೊಂಡಿಲ್ಲ: ಸಿಯಾಂಗ್ ಅಣೆಕಟ್ಟು ಯೋಜನೆಯ ಆತಂಕ ಪರಿಹರಿಸಲು ಮಾತುಕತೆ- ಶಾ ಭರವಸೆ!

ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್; 118 ರನ್‌ಗಳ ಮುನ್ನಡೆ ಕಾಯ್ದುಕೊಂಡ ಭಾರತ; ಎರಡು ರನ್‌ಗಳಿಂದ ಶುಭಮನ್ ಗಿಲ್ ಶತಕ ಮಿಸ್!