ವಿಧಾನ ಸೌಧ 
ರಾಜ್ಯ

2027ರ ಸರ್ಕಾರಿ ರಜಾ ದಿನಗಳ ಪಟ್ಟಿ ಪ್ರಕಟ: ಒಟ್ಟು 18 ಸಾರ್ವತ್ರಿಕ ರಜೆ, 19 RH

ರಾಜ್ಯ ಸರ್ಕಾರ 2027ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಇಂದು ಸಾರ್ವಜನಿಕರ ಮಾಹಿತಿಗಾಗಿ ಬಿಡುಗಡೆ ಮಾಡಿದ್ದು, ನಾನಾ ಹಬ್ಬಗಳು ಸೇರಿದಂತೆ ಮುಂದಿನ ವರ್ಷ ಒಟ್ಟು 18 ದಿನ ರಜೆಗಳನ್ನು ನೀಡಲಾಗಿದೆ.

ಬೆಂಗಳೂರು: ರಾಜ್ಯ ಸರ್ಕಾರ ಶನಿವಾರ 2027ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ರಾಜ್ಯ ಸರ್ಕಾರ 2027ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಇಂದು ಸಾರ್ವಜನಿಕರ ಮಾಹಿತಿಗಾಗಿ ಬಿಡುಗಡೆ ಮಾಡಿದ್ದು, ನಾನಾ ಹಬ್ಬಗಳು ಸೇರಿದಂತೆ ಮುಂದಿನ ವರ್ಷ ಒಟ್ಟು 18 ದಿನ ರಜೆ ಹಾಗೂ 19 ಪರಿಮಿತ ರಜೆ(RH)ಗಳನ್ನು ಅಧಿಕೃತವಾಗಿ ಘೋಷಿಸಲಾಗಿದೆ.

ಸಾಮಾನ್ಯವಾಗಿ ಬರುವ ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರಗಳನ್ನು ಹೊರತುಪಡಿಸಿ, ರಾಜ್ಯದಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಮತ್ತು ಸಾರ್ವಜನಿಕ ಸಂಸ್ಥೆಗಳಿಗೆ ಅನ್ವಯವಾಗುವಂತೆ ಒಟ್ಟು 18 ದಿನಗಳ ಸಾರ್ವತ್ರಿಕ ರಜೆಗಳನ್ನು ನೀಡಲಾಗಿದೆ.

ರಜಾ ದಿನಗಳ ಪಟ್ಟಿ

ಭಾನುವಾರ/ 2ನೇ ಶನಿವಾರ ಬಂದಿರುವ ರಜೆಗಳು

ಮಹಾವೀರ ಜಯಂತಿ (ಏ.18), ಬಸವೇಶ್ವರ ಜಯಂತಿ (ಮೇ 9), ಸ್ವಾತಂತ್ರ್ಯ ದಿನಾಚರಣೆ ಮತ್ತು ಈದ್-ಮಿಲಾದ್ (ಸೆ.15), ವಿಜಯದಶಮಿ (ಅ.10) ಭಾನುವಾರ ಬಂದಿವೆ. ಮಹಾನವಮಿ/ಆಯುಧಪೂಜೆ (ಅ.9) ಎರಡನೇ ಶನಿವಾರ ಮತ್ತು ಕ್ರಿಸ್‌ಮಸ್ (ಡಿ.25) ನಾಲ್ಕನೇ ಶನಿವಾರ ಬಂದಿರುವುದರಿಂದ ಈ ಪಟ್ಟಿಯಲ್ಲಿ ಸೇರಿಸಲಾಗಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಅಧಿಕೃತ ನಿವಾಸ 'ಗಂಗಾ' ನವೀಕರಣಕ್ಕೆ ₹100 ಕೋಟಿ ಖರ್ಚು!: ವಿಜಯೇಂದ್ರ ಆರೋಪಕ್ಕೆ ಡಿಕೆಶಿ ಹೇಳಿದ್ದೇನು?

ಸುಪ್ರೀಂ ಕೋರ್ಟ್ ಜಡ್ಜ್ ಎಂದು ಭಾವಿಸಿ ಓವೈಸಿಗೆ 'ಗಾರ್ಡ್ ಆಫ್ ಆನರ್': UP ಪೊಲೀಸರ ವಿರುದ್ಧ ತನಿಖೆಗೆ ಆದೇಶ! Video

'ಬಸವ ಮಂಟಪ' ಕೃತಿ ವಿವಾದ: 'ಲಿಂಗಹತ' ಎಂದು ಬರೆದ ರವಿ ಹಂಜ್ ಹತ್ಯೆಗೆ 5 ಲಕ್ಷ ರೂ. ಬಹುಮಾನ ಘೋಷಣೆ!

ದೇಶದ ಅತಿ ಉದ್ದದ ನದಿ ಸೇತುವೆ, ಆರು ಪಥದ 'ನಿತೀಶ್​​ ಸೇತು' ಉದ್ಘಾಟಿಸಿದ ಪ್ರಧಾನಿ ಮೋದಿ

ಇಟಲಿ: ಸೋನಿಯಾ ಗಾಂಧಿ ಬಾಲ್ಯದ ಮನೆ ಖರೀದಿಸಿದ ಸಿಖ್ ಉದ್ಯಮಿ; ಗುರುದ್ವಾರವಾಗಿ ಪರಿವರ್ತನೆ ಆಗಲಿದೆಯೇ ಕಾಂಗ್ರೆಸ್ ನಾಯಕಿಯ ಮನೆ?