ಸಾಂದರ್ಭಿಕ ಚಿತ್ರ 
ರಾಜ್ಯ

ಬೈಕ್ ಟ್ಯಾಕ್ಸಿಗೆ ಸುಪ್ರೀಂ ಗ್ರೀನ್ ಸಿಗ್ನಲ್: ಕಠಿಣ ನಿಯಮ ಜಾರಿಗೆ ಸರ್ಕಾರ ಸಿದ್ಧತೆ; ಯೆಲ್ಲೋ ಬೋರ್ಡ್, ವಿಮೆ, GPS ಕಡ್ಡಾಯ?

ಬೈಕ್ ಟ್ಯಾಕ್ಸಿ ಸೇವೆಗೆ ಕಠಿಣ ನಿಮಯ ರೂಪಿಸುವಂತೆ ಸರ್ಕಾರ, ಸಾರಿಗೆ ಇಲಾಖೆಗೆ ಸೂಚಿಸಿದ್ದು, ಈ ಸಂಬಂಧ ಎಜಿ ಸಲಹೆಯನ್ನು ಪಡೆದುಕೊಳ್ಳಲು ಮುಂದಾಗಿದೆ.

ಬೆಂಗಳೂರು: ಖಾಸಗಿ ದ್ವಿಚಕ್ರ ವಾಹನ ಮಾಲೀಕರಿಗೆ ಬೈಕ್‌ ಟ್ಯಾಕ್ಸಿ ಸೇವೆ ನಿರ್ವಹಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಒಲ್ಲದ ಮನಸ್ಸಿನಿಂದಲೇ ಕಠಿಣ ನಿಮಯ ಜಾರಿಗೆ ಸಿದ್ಧತೆ ನಡೆಸುತ್ತಿದೆ.

ಬೈಕ್ ಟ್ಯಾಕ್ಸಿ ಸೇವೆಗೆ ಕಠಿಣ ನಿಮಯ ರೂಪಿಸುವಂತೆ ಸರ್ಕಾರ, ಸಾರಿಗೆ ಇಲಾಖೆಗೆ ಸೂಚಿಸಿದ್ದು, ಈ ಸಂಬಂಧ ಎಜಿ ಸಲಹೆಯನ್ನು ಪಡೆದುಕೊಳ್ಳಲು ಮುಂದಾಗಿದೆ. ಅಲ್ಲದೆ ಹಳದಿ ಫಲಕ, ಪ್ರಯಾಣಿಕರ ವಿಮೆ ಹಾಗೂ ಜಿಪಿಎಸ್ ಕಡ್ಡಾಯಗೊಳಿಸುವ ಬಗ್ಗೆಯೂ ಪರಿಶೀಲನೆ ನಡೆಸುತ್ತಿದೆ.

ಬೈಕ್ ಟ್ಯಾಕ್ಸಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳಿಗೆ ಅನುಮತಿ ನೀಡುವ ಕುರಿತು ಅಡ್ವೊಕೇಟ್ ಜನರಲ್ ಅವರೊಂದಿಗೆ ಮತ್ತೊಂದು ಸುತ್ತಿನ ಚರ್ಚೆ ನಡೆಸಿದ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ಕಠಿಣ ನಿಯಮಗಳು?

  1. ಬೈಕ್ ಟ್ಯಾಕ್ಸಿಯನ್ನು ಬೇಕಾಬಿಟ್ಟಿಯಾಗಿ ನಿಯಮ ಪಾಲನೆ ಮಾಡದೇ ಯಾರು ಬೇಕಾದ್ರೂ ಓಡಿಸುವಂತಿಲ್ಲ.

  2. ಬೈಕ್ ಟ್ಯಾಕ್ಸಿ ಸವಾರರು ಕಡ್ಡಾಯವಾಗಿ ಸರ್ಕಾರದ ಸಾರಿಗೆ ಇಲಾಖೆಯ ಕಣ್ಗಾವಲಿನಲ್ಲಿಯೇ ಸೇವೆ ನೀಡಬೇಕು.

  3. ಮೋಟಾರ್‌ಸೈಕಲ್‌ಗಳನ್ನು ಹಳದಿ ಫಲಕ ಹೊಂದಿರುವ ವಾಣಿಜ್ಯ ಸಾರಿಗೆ ವಾಹನಗಳಾಗಿ ನಿಯಮಾನುಸಾರ ಪರಿವರ್ತಿಸಿ, ಅಗತ್ಯ ಪರವಾನಗಿಯೊಂದಿಗೆ ಸೇವೆ ನೀಡಲು ಅವಕಾಶ ಕಲ್ಪಿಸುವ ಬಗ್ಗೆ ಚಿಂತನೆ.

  4. ಬೈಕ್ ಮಾಲೀಕರು ತಮ್ಮ ವಾಹನಗಳನ್ನು ಸಾರಿಗೆ ವಾಹನಗಳಾಗಿ ನೋಂದಾಯಿಸಲು ಮತ್ತು ಒಪ್ಪಂದದ ಮೇರೆಗೆ ಪ್ರಯಾಣಿಕರನ್ನು ಸಾಗಿಸುವ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಬಹುದು. ಸಂಬಂಧಪಟ್ಟ ಪ್ರಾಧಿಕಾರಗಳು ಆ ಅರ್ಜಿಗಳನ್ನು ಕಾನೂನಿನ ಪ್ರಕಾರ ಪರಿಶೀಲಿಸುವ ಬಗ್ಗೆ ಚಿಂತನೆ.

  5. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಅದರಲ್ಲೂ ‌ಮಹಿಳಾ ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಜಿಪಿಎಸ್ ಕಡ್ಡಾಯ ಸಾಧ್ಯತೆ.

  6. ಬೈಕ್ ಟ್ಯಾಕ್ಸಿಗೆ ವಿಮೆ ಕಡ್ಡಾಯ. ಅಪಘಾತ ವಾದ ಸಂದರ್ಭದಲ್ಲಿ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ವಿಮೆ.

  7. ಬೈಕ್ ಟ್ಯಾಕ್ಸಿಗಳಿಗೆ ಅವಕಾಶ ನೀಡುವ ವ್ಯವಸ್ಥೆಯಲ್ಲಿ ಅನ್ವಯಿಸುವ ತೆರಿಗೆ, ವಾಹನದ ಅರ್ಹತೆ, ಚಾಲಕರ ದಾಖಲೆಗಳು ಅಗತ್ಯ.

  8. ಅಪಘಾತ ಸಂಭವಿಸಿದಾಗ ಚಾಲಕ, ವಾಹನ ಮಾಲೀಕ ಮತ್ತು ಸೇವೆ ಒದಗಿಸುವ ಸಂಸ್ಥೆಯ ಹೊಣೆಗಾರಿಕೆ ಇವೆಲ್ಲದರ ಸ್ಪಷ್ಟ ಚಿತ್ರಣ ಪಡೆದುಕೊಳ್ಳುವ ಬಗ್ಗೆ ಇಲಾಖೆ ಚಿಂತನೆ.

  9. ಚಾಲಕ ಮತ್ತು ಪ್ರಯಾಣಿಕರಿಗೆ ಗುಣಮಟ್ಟದ ಹೆಲ್ಮೆಟ್, ವಾಹನದ ನಿಯಮಿತ ನಿರ್ವಹಣೆ ಬಗ್ಗೆಯೂ ನಿಯಮಾವಳಿ.

  10. ಕಿಲೋಮೀಟರ್‌ಗೆ ದರ ನಿಗದಿಯ ಬಗ್ಗೆಯೂ ಕಾಯ್ದೆ.

ರಾಜ್ಯ ಸರ್ಕಾರ ಈ ಸಂಬಂಧ ಶೀಘ್ರದಲ್ಲೇ ಹೊಸ ನಿಯಮಗಳನ್ನು ಜಾರಿಗೊಳಿಸುವ ಸಾಧ್ಯತೆ ಇದೆ. ಅಲ್ಲದೇ, ಈಗಾಗಲೇ ಬೈಕ್ ಟ್ಯಾಕ್ಸಿ ಯೋಜನೆ ಜಾರಿಯಿರುವ ರಾಜ್ಯಗಳಲ್ಲಿ ರೂಲ್ಸ್ ಪರಿಶೀಲನೆ ನಡೆಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೇಶದ ಅತಿ ಉದ್ದದ ನದಿ ಸೇತುವೆ, ಆರು ಪಥದ 'ನಿತೀಶ್​​ ಸೇತು' ಉದ್ಘಾಟಿಸಿದ ಪ್ರಧಾನಿ ಮೋದಿ

BJP ಕೈಗೊಂಬೆಯಾಗದೆ ಧೈರ್ಯ ತೋರಿಸಿ; META ವಿರುದ್ಧ ಯುವ ಕಾಂಗ್ರೆಸ್ ಆಕ್ರೋಶ; ಅಕೌಂಟ್ ಮರುಸ್ಥಾಪನೆಗೆ ಆಗ್ರಹ..!

ಪಾರ್ಕ್‌ನಲ್ಲಿ ಕ್ಯಾಮೆರಾ ಮುಂದೆಯೇ ದಂಪತಿಗಳ ಮೇಲೆ ಹಲ್ಲೆ ನಡೆಸಿದ ಅಪ್ರಾಪ್ತ ಬಾಲಕರು, ಕೋಲಿನಿಂದ ಥಳಿತ!

ಪನ್ನುನ್ ಪ್ರಕರಣ: ಎನ್‌ಎಸ್‌ಎ ದೋವಲ್ ಅವರಿಗೆ ಅಮೆರಿಕ ನ್ಯಾಯಾಲಯದಿಂದ ಸಮನ್ಸ್ ಜಾರಿ

ರಾಜ್ಯದ ರೈತರಿಗೆ ಒಂದೇ ದಾಖಲೆಯಲ್ಲಿ ಭೂಮಿಯ ಸಮಗ್ರ ಮಾಹಿತಿ; ಹೊಸ ಮಾದರಿಯ ಪಹಣಿ ನಮೂನೆ 16-A!