ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿರುವ ತುಮಕೂರಿನ ಬಾಲಕಿಗೆ ಜಪಾನ್‌ನಿಂದಲೇ ಕರೆ ಮಾಡಿ ಧೈರ್ಯ ತುಂಬಿದ ಸಿಎಂ ಶಿವಕುಮಾರ್‌!

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ 5ನೇ ತರಗತಿಯ ವಿದ್ಯಾರ್ಥಿನಿ ಯೋಗಿತಾ ಕ್ಯಾನ್ಸರ್‌ನಿಂದ ಬಳಲುತ್ತಿರುವ ವಿಷಯ ತಿಳಿದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು, ಜಪಾನ್‌ ಪ್ರವಾಸದಲ್ಲಿದ್ದಾಗಲೇ ವಿಡಿಯೋ ಕರೆ ಮೂಲಕ ಬಾಲಕಿ ಹಾಗೂ ಆಕೆಯ ಪೋಷಕರೊಂದಿಗೆ ಮಾತನಾಡಿ ಧೈರ್ಯ ತುಂಬಿದರು.

ಸಿಎಂ ಡಿಕೆ ಶಿವಕುಮಾರ್
Vishwanath S
Updated On : 24 Nov 2026, 8:37 pm

ಬೆಂಗಳೂರು: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ 5ನೇ ತರಗತಿಯ ವಿದ್ಯಾರ್ಥಿನಿ ಯೋಗಿತಾ ಕ್ಯಾನ್ಸರ್‌ನಿಂದ ಬಳಲುತ್ತಿರುವ ವಿಷಯ ತಿಳಿದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು, ಜಪಾನ್‌ ಪ್ರವಾಸದಲ್ಲಿದ್ದಾಗಲೇ ವಿಡಿಯೋ ಕರೆ ಮೂಲಕ ಬಾಲಕಿ ಹಾಗೂ ಆಕೆಯ ಪೋಷಕರೊಂದಿಗೆ ಮಾತನಾಡಿ ಧೈರ್ಯ ತುಂಬಿದರು.

ಈ ವೇಳೆ ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಜಗತ್ತಿನಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ. ಈ ಕಷ್ಟದ ಸಮಯದಲ್ಲಿ ನಿಮ್ಮೊಂದಿಗೆ ನಾವಿದ್ದೇವೆ. ಎಲ್ಲವೂ ಒಳ್ಳೆಯದಾಗಲಿದೆ, ಭಗವಂತ ಇದ್ದಾನೆ ಎಂದು ಸಾಂತ್ವನ ಹೇಳಿದರು.

Also Read

ಜಪಾನ್‌ನಿಂದ ಪ್ರತಿಭಟನೆ ಕೈಬಿಡಿ ಎಂದ CM ಡಿಕೆಶಿ, ಖುದ್ದು ಭೇಟಿಗೆ ಆಶಾ ಕಾರ್ಯಕರ್ತೆಯರ ಪಟ್ಟು,ಅಹೋರಾತ್ರಿ ಧರಣಿ ಮುಂದುವರಿಕೆಗೆ ನಿರ್ಧಾರ! Video

ಜೊತೆಗೆ ತಮ್ಮನ್ನು ಭೇಟಿಯಾಗಬೇಕೆಂಬ ಯೋಗಿತಾಳ ಆಸೆಗೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಜಪಾನ್‌ ಪ್ರವಾಸದಿಂದ ಮರಳಿ ಬಂದ ಬಳಿಕ ತಪ್ಪದೇ ಭೇಟಿ ಮಾಡುವುದಾಗಿ ಭರವಸೆಯನ್ನು ನೀಡಿದರು.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement