ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಹಿಂಸಾಚಾರ, ಅರಾಜಕತೆ ಮೂಲಕ ಸರ್ಕಾರ ಬದಲಾವಣೆಗೆ ಕಾಂಗ್ರೆಸ್ ಯತ್ನ: ಕಲಬುರಗಿಯಲ್ಲಿ ರಾಜನಾಥ್ ಸಿಂಗ್ ಆರೋಪ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆಯಾದ ಕಲಬುರಗಿಯಲ್ಲಿ ಇಂದು ನಡೆದ ಬಿಜೆಪಿಯ 'ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ತೊಲಗಿಸಿ' ಸಮಾವೇಶದಲ್ಲಿ ಮಾತನಾಡಿದ ರಾಜನಾಥ್ ಸಿಂಗ್.

ರಾಜನಾಥ್ ಸಿಂಗ್ — online desk
Lingaraj Badiger
Updated On : 25 Nov 2026, 8:07 pm

ಕಲಬುರಗಿ: ಸತತ ಚುನಾವಣಾ ಸೋಲುಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗದ ಕಾಂಗ್ರೆಸ್ ಮತ್ತು ಅದರ ಹಿರಿಯ ನಾಯಕ ರಾಹುಲ್ ಗಾಂಧಿ, "ಬೀದಿ ಹಿಂಸಾಚಾರ ಮತ್ತು ಅರಾಜಕತೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಗಂಭೀರ ಆರೋಪ ಮಾಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆಯಾದ ಕಲಬುರಗಿಯಲ್ಲಿ ಇಂದು ನಡೆದ ಬಿಜೆಪಿಯ 'ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ತೊಲಗಿಸಿ' ಸಮಾವೇಶದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಬೀದಿಗಳಲ್ಲಿ ಸೃಷ್ಟಿಸುವ ಅರಾಜಕತೆಯ ಮೂಲಕ ಅಧಿಕಾರ ಬದಲಾವಣೆಯನ್ನು ತರಲು ನಮ್ಮ ಪ್ರಜಾಪ್ರಭುತ್ವ ಅಷ್ಟೇನೂ ದುರ್ಬಲವಾಗಿಲ್ಲ ಎಂದು ಹೇಳಿದರು.

ಸಂವಿಧಾನವನ್ನು ರಕ್ಷಿಸುವ ಪ್ರತಿಜ್ಞೆ ಮಾಡಲು ತಾವು ಕಲಬುರಗಿಗೆ ಬಂದಿರುವುದಾಗಿ ತಿಳಿಸಿದ ಸಿಂಗ್, "ದೇಶದಲ್ಲಿ ಅರಾಜಕತೆಯನ್ನು ಹರಡುವ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುವ ಕಾಂಗ್ರೆಸ್‌ನ ರಾಜಕೀಯದ ವಿರುದ್ಧ ಧ್ವನಿ ಎತ್ತಲು ನಾವಿಲ್ಲಿ ಸೇರಿದ್ದೇವೆ" ಎಂದರು.

Advertisement

Advertisement

Also Read

ಲಂಡನ್​ಗೆ ತೆರಳುತ್ತಿದ್ದ CJPಯ ಸೌರವ್ ದಾಸ್​ಗೆ ದೆಹಲಿ ವಿಮಾನ ನಿಲ್ದಾಣದಲ್ಲೇ ತಡೆ: ಇಲ್ಲಿದೆ ಕಾರಣ...

ರಾಜಕೀಯವು ಅಧಿಕಾರ ಹಿಡಿಯುವ ಸಾಧನವಾಗಬಾರದು, ಬದಲಾಗಿ ರಾಷ್ಟ್ರ ನಿರ್ಮಾಣದ ಸಾಧನವಾಗಬೇಕು ಎಂದು ಪ್ರತಿಪಾದಿಸಿದ ಅವರು, "ಕಾಂಗ್ರೆಸ್ ಮತಗಳ ಮೂಲಕವಲ್ಲ, ಹಿಂಸಾಚಾರ ಮತ್ತು ಅರಾಜಕತೆಯ ಮೂಲಕ ಅಧಿಕಾರ ಬದಲಾವಣೆಗೆ ಯತ್ನಿಸುತ್ತಿದೆ ಎಂದು ಆರೋಪಿಸಿದರು.

ರಾಹುಲ್ ಗಾಂಧಿ ಅವರಿಗೆ ನಾನು ಸ್ಪಷ್ಟವಾಗಿ ಹೇಳಬಯಸುತ್ತೇನೆ. ಬೀದಿಗಳಲ್ಲಿ ಸೃಷ್ಟಿಸುವ ಅರಾಜಕತೆಯ ಮೂಲಕ ಅಧಿಕಾರ ಬದಲಾವಣೆ ಆಗುವಷ್ಟು ಭಾರತದ ಪ್ರಜಾಪ್ರಭುತ್ವ ದುರ್ಬಲವಾಗಿಲ್ಲ ಎಂದರು.

ಭಾರತೀಯ ಪ್ರಜಾಪ್ರಭುತ್ವವನ್ನು ಗುರಿಯಾಗಿಸಿಕೊಳ್ಳಲು ಕಾಂಗ್ರೆಸ್ ವಿದೇಶಿಯರನ್ನು ಆಹ್ವಾನಿಸುತ್ತಿದೆ ಎಂದೂ ರಾಜನಾಥ್ ಸಿಂಗ್ ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement