ಆಶಾ ಕಾರ್ಯಕರ್ತರು ಇಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತೆ: ಪ್ರತಿಭಟನೆ ವಿರುದ್ಧ ಸಚಿವ ಯುಟಿ ಖಾದರ್ ಗರಂ!
ಆಶಾ ಕಾರ್ಯಕರ್ತರು ಇಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತದೆ. ಆಶಾಗಳು ಇಲ್ಲ ಅಂದ್ರೆ ಡಾಕ್ಟರ್, ನರ್ಸ್‌ಗಳು ಇಲ್ವಾ? ಎಂದು ಯುಟಿ ಖಾದರ್ ಅವರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ವೇತನ ಹೆಚ್ಚಳಕ್ಕೆ ಆಗ್ರಹಿಸಿ ನಗರದ ಫ್ರೀಡಂ ಪಾರ್ಕ್ ನಲ್ಲಿ ಕಳೆದ 10 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ವಿರುದ್ಧ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಗುರುವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಶಾ ಕಾರ್ಯಕರ್ತರು ಇಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತದೆ. ಆಶಾಗಳು ಇಲ್ಲ ಅಂದ್ರೆ ಡಾಕ್ಟರ್, ನರ್ಸ್‌ಗಳು ಇಲ್ವಾ? ಎಂದು ಯುಟಿ ಖಾದರ್ ಅವರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಶಾಗಳ ಸೇವೆ ಇಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತೆ. 10 ದಿನ ಪ್ರತಿಭಟನೆ ಆಗಿದೆ, ಆರೋಗ್ಯ ಇಲಾಖೆ ಏನು ಸಮಸ್ಯೆಗೆ ಸಿಲುಕಿದೆಯಾ? ಇಲ್ಲ ತಾನೇ? ಹಳ್ಳಿಗಳಲ್ಲಿ ಏನಾದ್ರು ಸಮಸ್ಯೆ ಆಗಿದೆಯಾ? ಇಲ್ಲ ಎಂದು ಯುಟಿ ಖಾದರ್ ಹೇಳಿದ್ದಾರೆ.
ಹೋರಾಟ 9ನೇ ದಿನಕ್ಕೆ; ಮಳೆ-ಚಳಿ, ಅನಾರೋಗ್ಯಕ್ಕೂ ಜಗ್ಗದ ಆಶಾ ಕಾರ್ಯಕರ್ತೆಯರು, ಪಟ್ಟು ಸಡಿಲಿಸದಿರಲು ನಿರ್ಧಾರ! Video
ಆಶಾಗಳ ಸೇವೆ ಇಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತದೆ ಎಂಬುದನ್ನು ಆಶಾಗಳೇ ತೋರಿಸಿ ಕೊಟ್ಟಿದ್ದಾರೆ. ಪ್ರತಿಭಟನೆಯಿಂದ ರಾಜ್ಯದಲ್ಲಿ ಏನು ಸಮಸ್ಯೆ ಆಗಿಲ್ಲ. ಹೆರಿಗೆ ಆಗ್ತಿದೆ, ಎಲ್ಲಾ ಆಗ್ತಿದೆ ಎಂದಿದ್ದಾರೆ.
ತಮಿಳುನಾಡಿನಲ್ಲಿ ಆಶಾ ಕಾರ್ಯಕರ್ತರೇ ಇಲ್ಲ. ಆದರೂ ಅಲ್ಲಿ ತಾಯಿ ಮರಣ ಪ್ರಮಾಣ, ಶಿಶು ಮರಣ ಪ್ರಮಾಣ ಕಡಿಮೆ ಇದೆ. ನಮ್ಮಲ್ಲಿ ಕಾರ್ಯಕರ್ತರು ಇದ್ದಾರೆ. ಅಲ್ಲಿ ಆಶಾ ಕಾರ್ಯಕರ್ತೆ ಇಲ್ಲ. ಅಂದರೂ ಎಲ್ಲಾ ಚೆನ್ನಾಗಿದೆ ಅಲ್ವ ಎಂದು ಪ್ರಶ್ನಿಸಿದ್ದಾರೆ.
ಇನ್ನು ನರ್ಸ್‌ಗಳಿಗೆ 10 ಸಾವಿರ ಸಂಬಳ, ಶಿಕ್ಷಕರಿಗೆ 12 ಸಾವಿರ ಸಂಬಳ, ಆರೋಗ್ಯ ಸಹಾಯಕರಿಗೆ 4,500 ರೂ. ಸಂಬಳ ನೀಡಲಾಗುತ್ತದೆ. ಇವರಿಗೆ 15 ಸಾವಿರ ಏಕೆ ಕೊಡಬೇಕು ಎಂದು ಆರೋಗ ಸಚಿವರು ಪ್ರಶ್ನಿಸಿದ್ದಾರೆ.