ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

2028ಕ್ಕೆ NDA ಅಧಿಕಾರಕ್ಕೆ ಬಂದರೆ ಹಳ್ಳಿಯ ಹೆಣ್ಣು ಮಗಳಿಗೆ 2 ಹಸು ಉಚಿತ: ಕಾಂಗ್ರೆಸ್ ಪುಡಾರಿಗಳಿಗೆ 1000 ಕೋಟಿ, ಆಶಾ ಕಾರ್ಯಕರ್ತೆಯರಿಗೆ ಭಿಕ್ಷೆ!

ಇದಕ್ಕಿಂತ ಬೇಕಾ ಪ್ರಿಯಾಂಕ್ ಖರ್ಗೆ ಅವರೇ? ಸಿಬಿಐ, ಇಡಿ ಅವರು ಕೇಸ್‌ನಲ್ಲಿ ನಾಗೇಂದ್ರ ಅವರನ್ನು ಫಿಕ್ಸ್ ಮಾಡುತ್ತಾರೆ. ಇಲ್ಲಿ ನೀವು ಕ್ಲೀನ್ ಚಿಟ್ ಕೊಡುತ್ತೀರಾ? ಯಾರೋ ಅಧಿಕಾರಿಗಳನ್ನು ಆರೋಪಿ ಮಾಡಿದ್ದೀರಾ ಅಂತ ಕಿಡಿಕಾರಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ — Online Desk
Shilpa D
Updated On : 26 Nov 2026, 7:52 pm

ಬೆಂಗಳೂರು: ವಾಲ್ಮೀಕಿ ನಿಗಮ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರಗೆ ಹೇಗೆ ಕ್ಲೀನ್ ಚಿಟ್ ಕೊಟ್ರಿ ಅಂತ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದಕ್ಕಿಂತ ಬೇಕಾ ಪ್ರಿಯಾಂಕ್ ಖರ್ಗೆ ಅವರೇ? ಸಿಬಿಐ, ಇಡಿ ಅವರು ಕೇಸ್‌ನಲ್ಲಿ ನಾಗೇಂದ್ರ ಅವರನ್ನು ಫಿಕ್ಸ್ ಮಾಡುತ್ತಾರೆ. ಇಲ್ಲಿ ನೀವು ಕ್ಲೀನ್ ಚಿಟ್ ಕೊಡುತ್ತೀರಾ? ಯಾರೋ ಅಧಿಕಾರಿಗಳನ್ನು ಆರೋಪಿ ಮಾಡಿದ್ದೀರಾ ಅಂತ ಕಿಡಿಕಾರಿದರು.

ಸಿಐಡಿಯಿಂದ ಏನು ಕ್ಲೀನ್ ಚಿಟ್ ಕೊಡುತ್ತಿದ್ದೀರಾ? ಯಾವ ರೀತಿ ಕೊಟ್ಟಿರಿ? ಯಾವ ಆಧಾರದಲ್ಲಿ ಕ್ಲೀನ್ ಚಿಟ್ ಕೊಟ್ಟಿರಿ? ಸಿಐಡಿ ಇವರ ಇಲಾಖೆ ಎಷ್ಟರ ಮಟ್ಟಿಗೆ ಪಾರದರ್ಶಕವಾಗಿ ತನಿಖೆ ಮಾಡುತ್ತದೆ? ಇಲಾಖೆ ಮಂತ್ರಿ, ಸಿಎಂ ಅವರೇ ಅಕ್ರಮ ಆಗಿದೆ ಅಂತ ಸದನದಲ್ಲಿ ಒಪ್ಪಿಕೊಳ್ಳುತ್ತಾರೆ. ಎಷ್ಟು ವರ್ಷ ಆಯಿತು ವಿಷಯ ಬಂದು? ಇಷ್ಟು ದಿನ ಬೇಕಿತ್ತಾ ತನಿಖೆ ಮಾಡೋಕೆ? ಈಗ ಹೇಗೆ ಕ್ಲೀನ್ ಚಿಟ್ ಕೊಟ್ಟಿರಿ? ಅಂತ ಪ್ರಶ್ನೆ ಮಾಡಿದರು.

Advertisement

Advertisement

ಕೆಪಿಎಸ್‌ಸಿ ಗ್ರಾಮೀಣಾಭಿವೃದ್ಧಿ ಇಲಾಖೆ ಕೇಸ್ ಇಡಿ ದೂರು ಕೊಟ್ಟ ವಿಚಾರಕ್ಕೆ ದಾಖಲೆ ಕೊಡಿ, ದಾಖಲೆ ಕೊಡಿ ಅಂತ ಕೇಳುತ್ತಿದ್ದಿರಿ. ಅದೇ ದಾಖಲೆ ನಾನು ಕೊಟ್ಟಿದ್ದು. ಎಇಇಗಳನ್ನು (AEE) ಅಕ್ರಮವಾಗಿ ನೇಮಕ ಮಾಡಿದ್ದರು. ತರಾತುರಿಯಲ್ಲಿ ಮಂತ್ರಿ ಆಗಿ 24 ಜನರಿಗೆ ಹೇಗೆ ನೇಮಕಾತಿ ಪತ್ರ ಕೊಟ್ಟಿರಿ? 2 ವರ್ಷ ಆಯಿತು ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದೆ. ನೀವು ಯಾಕೆ ಮಾಹಿತಿ ಕೊಡದೇ ಕೋರ್ಟ್‌ನಲ್ಲಿ ಎರಡು ವರ್ಷಗಳಿಂದ ಮುಂದೆ ಹಾಕುತ್ತಿದ್ದೀರಾ? 24 ಜನರಿಗೆ ಯಾಕೆ ರಕ್ಷಣೆ ಕೊಟ್ಟಿರಿ? ಯಾರು ರಕ್ಷಣೆ ಕೊಟ್ಟಿದ್ದು? ಇಡಿ ದೂರು ಕೊಟ್ಟಿದೆ. ಪ್ರಿಯಾಂಕ್ ಖರ್ಗೆ ಅವರೇ ಸ್ವಲ್ಪ ಇದೆಲ್ಲವನ್ನೂ ಅರಗಿಸಿಕೊಳ್ಳೋಕೆ ಏನು ಬೇಕೋ ಅದನ್ನು ಮಾಡಿ ಅಂತ ಲೇವಡಿ ಮಾಡಿದರು.

Also Read

'ಚುನಾವಣೆ ನಡೆಯುತ್ತೋ ಇಲ್ಲವೋ ಗೊತ್ತಿಲ್ಲ; ಹಿರಿಯೂರು ಟಿಕೆಟ್ ವಿಚಾರದಲ್ಲಿ ಆತುರವಿಲ್ಲ': HD ಕುಮಾರಸ್ವಾಮಿ

ಆಶಾ ಕಾರ್ಯಕರ್ತೆಯರು 10 ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ. ಅವರದ್ದು ನ್ಯಾಯಯುತ ಬೇಡಿಕೆ. ನಾನು ಕೇಂದ್ರ, ರಾಜ್ಯ ಸರ್ಕಾರ ಅಂತ ಟೀಕೆ ಮಾಡಲ್ಲ. ರಾಜ್ಯ ಸರ್ಕಾರ ಅವರ ಬೇಡಿಕೆ ಈಡೇರಿಸಬೇಕು, ಕಾಂಗ್ರೆಸ್ ಪಕ್ಷದ ಪುಡಾರಿಗಳಿಗೆ 1000 ಕೋಟಿ ಕೊಡೋಕೆ ಆಗುತ್ತೆ ಆಶಾ ಕಾರ್ಯಕರ್ತೆಯರಿಗೆ ಭಿಕ್ಷೆ ಕೊಡ್ತಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಸರ್ಕಾರಕ್ಕೆ 250-350 ಕೋಟಿ ಆಗಬಹುದು. ಬಿಸಿಯೂಟದವರಿಗೂ ಜಾಸ್ತಿ ಮಾಡಿದರೆ 100 ಕೋಟಿ ಬರಬಹುದು ಹೊರೆ. ನೀವು ಪರ್ಸೆಂಟೇಜ್ ಫಿಕ್ಸ್ ಮಾಡಿಕೊಂಡು ತಿನ್ನುತ್ತಾ ಇದ್ದೀರ ಅಲ್ಲವಾ? ವರ್ಕ್ ಆರ್ಡರ್, ಬಿಲ್ ಮಾಡೋಕೆ ಇಷ್ಟು, ಬಿಲ್ ಆದ ಮೇಲೆ ಕೊಡೋಕೆ ಇಷ್ಟು ಅಂತ ಇವೆಲ್ಲಾ ಟೈಟ್ ಮಾಡಿದರೆ ಇವೆಲ್ಲದಕ್ಕೂ ದುಡ್ಡು ಕೊಡೋಕೆ ಆಗುವುದಿಲ್ಲವಾ? ಎಂದು ಕಿಡಿಕಾರಿದರು.

ಆಶಾ ಕಾರ್ಯಕರ್ತೆಯರು ಇಲ್ಲ ಅಂದರೂ ಕೆಲಸ ಮಾಡುತ್ತೇವೆ ಎಂಬ ಯು.ಟಿ. ಖಾದರ್ ಹೇಳಿಕೆ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ, ಯು.ಟಿ. ಖಾದರ್‌ಗೆ ಹೇಳುತ್ತೇನೆ, ಇಷ್ಟು ವರ್ಷ ಯಾಕೆ ಅವರ ಕೈಯಲ್ಲಿ ಕೆಲಸ ಮಾಡಿಸಿದಿರಿ? 3 ವರ್ಷದಿಂದ ಯಾಕೆ ಕೆಲಸ ಮಾಡಿಸಿದರು? ತೆಗೆದು ಹಾಕಿ ಅವರನ್ನು. ಪ್ರಣಾಳಿಕೆಯಲ್ಲಿ 15 ಸಾವಿರ ಹೇಳಿದ್ದರು. ಇಂತಹ ಮಂತ್ರಿ, ಇಂತಹ ಸಿಎಂ ಹೇಗಿದೆ ಅಂದರೆ ತೆನಾಲಿ ರಾಮಕೃಷ್ಣ ಕಥೆ ಹೇಳಬೇಕು. ಈ ಸರ್ಕಾರ ಅನ್‌ಫಿಟ್ ಅಂತ ಕಿಡಿಕಾರಿದರು.

ಇನ್ನೂ 2028 ಕ್ಕೆ ರಾಜ್ಯದಲ್ಲಿ ಎನ್ ಡಿ ಎ ಸರ್ಕಾರ ಅಧಿಕಾರಕ್ಕೆ ಬಂದರೆ ಹಳ್ಳಿಯಲ್ಲಿನ ಪ್ರತಿ ಹೆಣ್ಣುಮಕ್ಕಳಿಗೆ 2 ಹಸು ಉಚಿತವಾಗಿ ನೀಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ,

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement