ಜಾತ್ಯತೀತತೆ ಹೆಸರಲ್ಲಿ ಹಿಂದುಗಳ ಕಡೆಗಣನೆ: ಸನಾತನ ಧರ್ಮ ಉಳಿಸಲು, ಅನ್ಯಾಯ ಚಂಡಾಡಲು ಬರುತ್ತಾನೆ 'ಕಲ್ಕಿ'; ಜಗ್ಗೇಶ್ ಎಚ್ಚರಿಕೆ
ನೆನಪಿಡಿ ಯಾರು ಶಾಶ್ವತವಲ್ಲಾ ಮುಂದೆ ನಿಮ್ಮ ತಪ್ಪಿಗೆ ನಿಮ್ಮಗಳ ಮನೆತನದ ತಲೆಮಾರು ಹಿಂದು ಆಚರಣೆಯಿಂದ ವಂಚಿತರಾಗಿ ಗೋಡೆ ಮೇಲಿನ ನಿಮ್ಮ ಚಿತ್ರಕ್ಕೆ ಉಗಿದು ಶಪಿಸುತ್ತಾರೆ, ಸ್ವಲಾಭಕ್ಕೆ ನಮ್ಮ ಆಚರಣೆ ಹಾಳುಮಾಡಿ ಹೋದಿರಿ ಎಂದು ಕಿಡಿಕಾರಿದ್ದಾರೆ.
ಬೆಂಗಳೂರು: ಸನಾತನ ಧರ್ಮದ ಪ್ರತಿಯೊಂದು ಆಚರಣೆಯ ಹಿಂದೆಯೂ ಪೂರ್ವಜರ ವೈಜ್ಞಾನಿಕ ಚಿಂತನೆ ಇದೆ ಎಂದು ಜಗ್ಗೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತವನ್ನು ಆಳಿದವರು ಸನಾತನ ಧರ್ಮದ ಹಲವು ಪರಂಪರೆಗಳನ್ನು ನಾಶಪಡಿಸಲು ಪ್ರಯತ್ನಿಸಿದ್ದರು. ಆದರೆ ಉಳಿದಿದ್ದ ಆ ಪರಂಪರೆಯ ಕುರುಹುಗಳು ಇಂದು ಮತ್ತೆ ಚಿಗುರಿ ಹೆಮ್ಮರವಾಗುತ್ತಿವೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಹಿಂದುಗಳು ಬಹುಸಂಖ್ಯಾತರು ಇರುವ ಮೊದಲಿಗ ರಾಷ್ಟ್ರ ಭಾರತ ಎಂದು ನೆನಪಿರಲಿ ಎಲ್ಲಾ ತಲೆಮಾರಿಗೆ. ಒಂದುವೇಳೆ ಈ ನೆನಪು ಮರೆತು ರಾಜಕೀಯ ಬೇಳೆ ಬೇಯಿಸಲು ಬಲವಂತದಿಂದ ಸೆಕ್ಯೂಲರ್ ಪದ ಬಳಸಿಕೊಂಡು ಅಧಿಕಾರ ಸಿಗಬಹುದು.
ನೆನಪಿಡಿ ಯಾರು ಶಾಶ್ವತವಲ್ಲಾ ಮುಂದೆ ನಿಮ್ಮ ತಪ್ಪಿಗೆ ನಿಮ್ಮಗಳ ಮನೆತನದ ತಲೆಮಾರು ಹಿಂದು ಆಚರಣೆಯಿಂದ ವಂಚಿತರಾಗಿ ಗೋಡೆ ಮೇಲಿನ ನಿಮ್ಮ ಚಿತ್ರಕ್ಕೆ ಉಗಿದು ಶಪಿಸುತ್ತಾರೆ ನಮ್ಮ ಆಚರಣೆ ಸ್ವಲಾಭಕ್ಕೆ ಹಾಳುಮಾಡಿ ಹೋದಿರಿ ಎಂದು ಕಿಡಿಕಾರಿದ್ದಾರೆ.
ಸನಾತನ ಧರ್ಮದ ಪ್ರತಿಯೊಂದು ಆಚರಣೆಯ ಹಿಂದೆ ನಮ್ಮ ಸನಾತನರ ವೈಜ್ಞಾನಿಕ ಚಿಂತೆ ಇದೆ, ಎಂಥೆಂಥ ಧೂತರು ಭಾರತ ಆಳಿ ನಮ್ಮ ಸನಾತನರ ಕಲ್ಪನೆಗಳ ನೆಲಸಮ ಮಾಡಿ ಅಲ್ಪ ಕುರುಹು ಬಿಟ್ಟಿದ್ದಾರೆ ಆ ಕುರುಹು ಮತ್ತೆ ಚಿಗುರಿ ಹೆಮ್ಮರವಾಗುತ್ತಿದೆ ಅದನ್ನು ತಡೆಯಲು ಯಾರಿಂದಲು ಸಾಧ್ಯವಾಗದು ಅದೆ ಸನಾತನಧರ್ಮದ ತಾಕತ್ತು.
ಹಿಂದಿನ ಸನಾತನ ಬೇರಿಂದ ಚಿಗುರಿದವರೆ ಇಂದಿನವರು ಎಂಬುದು ಮರೆಯದಿರಿ, ಸನಾತನಧರ್ಮ ತುಳಿಯಲು ಯತ್ನಿಸದಿರಿ ಮುಂದೆ ಬರುತ್ತಾನೆ ಕಲ್ಕಿ ಅನ್ಯಾಯ ಚಂಡಾಡಿ ಸನಾತನಧರ್ಮ ಉಳಿಸಲು ಎಂದು ಬರೆದುಕೊಂಡಿದ್ದಾರೆ.