ಎಚ್.ಸಿ ಬಾಲಕೃಷ್ಣ 
ರಾಜ್ಯ

ಸಚಿವ ಎಚ್.ಸಿ.ಬಾಲಕೃಷ್ಣರಿಂದ 36 ಎಕರೆ ಜಮೀನು ಕಬಳಿಕೆ: ನೀನು ಹಲ್ಕಾ ಕೆಲಸ ಮಾಡಿದ್ದಕ್ಕೆ ನಿನ್ನನ್ನ ದೂರ ಇಟ್ಟರು HDK; ಮಂಜುನಾಥ್ ಆರೋಪ

26 ಎಕರೆ ಅವರ ಜೊತೆ ಇರೋ ವ್ಯಕ್ತಿ ನಟರಾಜ ನಾಯ್ಡು ಅನ್ನೋರ ಹೆಸರಿಗೆ ಮಾಡಿಸಿದ್ದಾರೆ. ಇದು ಸರ್ಕಾರಿ ಜಮೀನು. ದಾಖಲಾತಿ ಸೃಷ್ಟಿ ಮಾಡಿದ್ದಾರೆ.

ಬೆಂಗಳೂರು: ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಮಾತನಾಡುವ ಮೊದಲು ತಾವರೆಕೆರೆ ಬಳಿಯ ಕುರುಬರಹಳ್ಳಿಯಲ್ಲಿ 36 ಎಕರೆ ಜಮೀನನ್ನು ಕಬಳಿಸಿದ್ದಾರೆ. ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿ ವಿಚಾರಣೆಗೆ ಅನುಮತಿ ನೀಡುವಂತೆ ಮನವಿ ಮಾಡುತ್ತೇವೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಹೇಳಿದರು.

ಗುರುವಾರ ಜೆಡಿಎಸ್ ಕೇಂದ್ರ ಕಚೇರಿ ಜೆ.ಪಿ.ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿವ ಬಾಲಕೃಷ್ಣ ತಾವರೆಕೆರೆ ಕುರುಬಹಳ್ಳಿ ಬಳಿ 36 ಎಕರೆ ಜಮೀನು ಕಬಳಿಸಿದ್ದಾರೆ. ಅವರ ಹೆಂಡತಿ ರಾಧಾ ಹೆಸರಿಗೆ 10 ಎಕರೆ ಮಾಡಿಸಿದ್ದಾರೆ.

26 ಎಕರೆ ಅವರ ಜೊತೆ ಇರೋ ವ್ಯಕ್ತಿ ನಟರಾಜ ನಾಯ್ಡು ಅನ್ನೋರ ಹೆಸರಿಗೆ ಮಾಡಿಸಿದ್ದಾರೆ. ಇದು ಸರ್ಕಾರಿ ಜಮೀನು. ದಾಖಲಾತಿ ಸೃಷ್ಟಿ ಮಾಡಿದ್ದಾರೆ.

ಉಳುಮೆ ಚೀಟಿಯಿಂದ ಎಲ್ಲಾ ದಾಖಲಾತಿ ಸೃಷ್ಟಿ ಮಾಡಿದ್ದಾರೆ. 50-60 ವರ್ಷಗಳಿಂದ ಉಳುಮೆ ಮಾಡುತ್ತಿರುವವರನ್ನು ಬೆದರಿಸಿ ಅವರನ್ನ ಹೊರಗೆ ಹಾಕಿದ್ದಾರೆ. ಸಿಎಂ ಪಾರದರ್ಶಕವಾಗಿ ಇದ್ದರೆ ಕೂಡಲೇ ಈ ಜಮೀನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಆಗ್ರಹ ಮಾಡಿದರು.

ಐಎಎಸ್ ಅಧಿಕಾರಿ ಜೊತೆ ಸೇರಿಕೊಂಡು, ಅಧಿಕಾರಿಗಳನ್ನು ಸೇರಿಸಿಕೊಂಡು ಈ ಅಕ್ರಮ ಮಾಡಿದ್ದಾರೆ. ರಾಜ್ಯಪಾಲರಿಗೆ ಸಮಯ ಕೇಳಿದ್ದೇವೆ. ಅವರು ಸಮಯ ಕೊಟ್ಟ ಮೇಲೆ ಬಾಲಕೃಷ್ಣ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳುತ್ತೇವೆ ಎಂದು ತಿಳಿಸಿದರು.

ಕುಮಾರಸ್ವಾಮಿಗೆ ಗೆಣಸು ಕೆತ್ತುತ್ತಿದ್ಯಾ ಎಂದು ಕೇಳಿದ್ದೀಯಲ್ಲಾ ನೀನು ಬೋಗಸ್ ದಾಖಲೆ ಕೆತ್ತುತ್ತಿದ್ದಾ? ನೀನು ಇಂತ ಹಲ್ಕಾ ಕೆಲಸ ಮಾಡ್ತೀಯಾ ಅಂತಾ ಕುಮಾರಸ್ವಾಮಿ ನಿನ್ನನ್ನ ದೂರ ಇಟ್ಟರು ಎಂದು ವಾಗ್ದಾಳಿ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಫಾರಂ-7 ದುರ್ಬಳಕೆ ಆರೋಪ: ಕ್ರಮಕ್ಕೆ ಚು.ಆಯೋಗ ಸೂಚನೆ, ಐತಿಹಾಸಿಕ ದಿನ ಎಂದ ಸಿಎಂ ಡಿಕೆಶಿ

‘ನಿಮ್ಮ ಪ್ರಾರ್ಥನೆಗೆ ಧನ್ಯವಾದ’: ಭಾರತದ ಹೀರೋ ಪೈಲಟ್ ಸ್ಮಿತ್ ಮಚ್ಚರ್ ಅಪಾಯದಿಂದ ಪಾರು!

ರಕ್ತದ ಮಡುವಿನಲ್ಲಿ ಪೈಲಟ್`ಗಳು, ಫ್ಲೈಟ್ ಲ್ಯಾಂಡ್ ಮಾಡಿದ ಪ್ಲಂಬರ್; FlyDubai ವಿಮಾನ ಪತನವಾಗದಿದ್ದದ್ದೇ ಅಚ್ಚರಿ!

ICC Cricket World Cup 2027 ವೇಳಾಪಟ್ಟಿ; ಅ.7ರಿಂದ ಭಾರತದ ಅಭಿಯಾನ ಆರಂಭ, 3 ಬಾರಿ ಬದ್ಧ ಶತ್ರುಗಳ ಕದನ?

‘ನೈಸ್ ಅಕ್ರಮ ಮರೆಮಾಚಲು ಈ ಡ್ರಾಮಾ’: ಚುನಾವಣಾ ಆಯೋಗದ ಮುಂದೆ ಸಿಎಂ, ಸಚಿವರ ಧರಣಿಗೆ ಕುಮಾರಸ್ವಾಮಿ ಕಿಡಿ