ಸಂಗ್ರಹ ಚಿತ್ರ 
ರಾಜ್ಯ

ಮೈಸೂರು: 20 ಸಾವಿರ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಇಬ್ಬರು ಎಂಜಿನಿಯರ್!

ಗುತ್ತಿಗೆದಾನರಿಂದ 20 ಸಾವಿರ ಲಂಚ ಪಡೆಯುತ್ತಿದ್ದ ಇಬ್ಬರು ಎಂಜಿನಿಯರ್ ಗಳನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ನಂಜನಗೂಡಿನಲ್ಲಿ ಸೋಲಾರ್ ಪಂಪ್ ಸೆಟ್ ಅಳವಡಿಕೆ ಕಾಮಗಾರಿಗೆ ಸಂಬಂಧಿಸಿದಂತೆ ಲಂಚ ಸ್ವೀಕರಿಸುತ್ತಿದ್ದಾಗ ದಾಳಿ ನಡೆಸಲಾಗಿತ್ತು.

ಮೈಸೂರು: ಗುತ್ತಿಗೆದಾನರಿಂದ 20 ಸಾವಿರ ಲಂಚ ಪಡೆಯುತ್ತಿದ್ದ ಇಬ್ಬರು ಎಂಜಿನಿಯರ್ ಗಳನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ನಂಜನಗೂಡಿನಲ್ಲಿ ಸೋಲಾರ್ ಪಂಪ್ ಸೆಟ್ ಅಳವಡಿಕೆ ಕಾಮಗಾರಿಗೆ ಸಂಬಂಧಿಸಿದಂತೆ ಲಂಚ ಸ್ವೀಕರಿಸುತ್ತಿದ್ದಾಗ ದಾಳಿ ನಡೆಸಲಾಗಿತ್ತು.

ತಮ್ಮ ಕಚೇರಿಯಲ್ಲೇ ಕುಸುಮ್ ಸೌರ ವಿದ್ಯುತ್ ಯೋಜನೆಯಡಿ ರೈತರ ಜಮೀನಿಗೆ ಸೋಲಾರ್ ಪಂಪ್ ಸೆಟ್ ಅಳವಡಿಕೆ ಕಾಮಗಾರಿಗೆ ಸಂಬಂಧಿಸಿದ ಕೆಲಸ ಮಾಡಿಕೊಡಲು ಗುತ್ತಿಗೆದಾರ ನಟರಾಜು ಅವರಿಂದ ನಂಜನಗೂಡು ನಗರ ವಿಭಾಗದ ಎಇಇ ದೇವರಾಜಯ್ಯ 15 ಸಾವಿರ ರೂ. ಹಾಗೂ ಕಿರಣ್ ಕುಮಾರ್ 5 ಸಾವಿರ ರೂ ಹಣ ಪಡೆದುಕೊಂಡಿದ್ದು ಈ ವೇಳೆ ಲೋಕಾಯುಕ್ತ ಎಸ್ಪಿ ಉದೇಶ್ ನೇತೃತ್ವದಲ್ಲಿ ದಾಳಿ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.

ಸದ್ಯ ಲೋಕಾಯುಕ್ತ ಅಧಿಕಾರಿಗಳು ಇಬ್ಬರು ಎಂಜಿನಿಯರ್ ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆಯನ್ನೂ ನಡೆಸಲಾಗಿದ್ದು, ಲಂಚದ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಇತರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR: ‘ಜ್ಞಾನೇಶ್ ಕುಮಾರ್ ಬಿಜೆಪಿಯ ಅಸ್ತ್ರ, SIR ರದ್ದುಪಡಿಸಿ': ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆಗೆ ಠಾಕ್ರೆ ಸೋದರ ಸಂಬಂಧಿಗಳ ಆಗ್ರಹ!

ಉಕ್ರೇನ್ ನಲ್ಲಿ ರಷ್ಯಾ ಡ್ರೋನ್ ದಾಳಿ: ಭಾರತೀಯರ ಒಡೆತನದ ಔಷಧ ಘಟಕ ಧ್ವಂಸ, ಓರ್ವ ಸಾವು, ಹಲವರಿಗೆ ಗಾಯ! Video

‘ನಿವೃತ್ತಿಗೂ ಮುನ್ನ ಈ ದಾಖಲೆ ಬೇಕು’: 92 ರನ್ ಗೆ ಔಟಾದ ರೋಹಿತ್ ಶರ್ಮಾಗೆ ಗವಾಸ್ಕರ್ ಟಾರ್ಗೆಟ್!

2006ರ KSTP ಯೋಜನೆ ಪ್ರಕರಣ: CEC ಜ್ಞಾನೇಶ್ ಕುಮಾರ್ ವಿರುದ್ಧ ವಿಜಿಲೆನ್ಸ್ ತನಿಖೆಗೆ ಕೇರಳಂ ಗೃಹ ಸಚಿವ ಆದೇಶ

ಭಾರತ- ವೆಸ್ಟ್ ಇಂಡೀಸ್ ನಡುವಿನ ಪಂದ್ಯದ ವೇಳೆ 'One8' ಬ್ರ್ಯಾಂಡ್‌ ಶೂ ತೋರಿಸಿದ ಅಭಿಮಾನಿ! ಕೊಹ್ಲಿ ರಿಯಾಕ್ಷನ್ ಹೇಗಿತ್ತು ಗೊತ್ತಾ? Video