ದಿಲೀಪ್ ಕಾಂಬಳೆ 
ರಾಜ್ಯ

ಬೆಳಗಾವಿಯಲ್ಲಿ ವೇಶ್ಯಾವಾಟಿಕೆ ಜಾಲ ಭೇದಿಸಿದ ಪೊಲೀಸರು: ಮಹಿಳೆ ರಕ್ಷಣೆ, ಓರ್ವನ ಬಂಧನ

ವೇಶ್ಯಾವಾಟಿಕೆಗೆ ಬಳಸಿಕೊಳ್ಳಲಾಗುತ್ತಿದ್ದ ಮಹಿಳೆಯೊಬ್ಬರನ್ನು ಪೊಲೀಸರು ರಕ್ಷಿಸಿದರು. ಮುಂದಿನ ಕಾನೂನು ಕ್ರಮಕ್ಕಾಗಿ ಅಥಣಿ ತಾಲೂಕಿನ ಅರಟಾಳ ಗ್ರಾಮದ ಮಲ್ಲಪ್ಪ ದಿಲೀಪ್ ಕಾಂಬಳೆ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿ: ಅಥಣಿ-ರಾಯ್ಡರಹಟ್ಟಿ ರಸ್ತೆಯಲ್ಲಿರುವ ಶಿವಶಕ್ತಿ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಅಥಣಿ ಗ್ರಾಮೀಣ ಪೊಲೀಸರು ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ.

ಅಕ್ಟೋಬರ್ 3 ರಂದು ಅಥಣಿ ವೃತ್ತ ನಿರೀಕ್ಷಕ ಸಂತೋಷ್ ಡಿ. ಹಲ್ಲೂರ್ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಲಾಡ್ಜ್ ಮೇಲೆ ದಾಳಿ ನಡೆಸಿದರು. ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್. ಬಿ. ಬಸರಗಿ ಮತ್ತು ಡಿವೈಎಸ್‌ಪಿ ಪ್ರಶಾಂತ್ ಜಿ. ಮುನ್ನೊಳ್ಳಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆಯನ್ನು ನಡೆಸಲಾಯಿತು.

ವೇಶ್ಯಾವಾಟಿಕೆಗೆ ಬಳಸಿಕೊಳ್ಳಲಾಗುತ್ತಿದ್ದ ಮಹಿಳೆಯೊಬ್ಬರನ್ನು ಪೊಲೀಸರು ರಕ್ಷಿಸಿದರು. ಮುಂದಿನ ಕಾನೂನು ಕ್ರಮಕ್ಕಾಗಿ ಅಥಣಿ ತಾಲೂಕಿನ ಅರಟಾಳ ಗ್ರಾಮದ ಮಲ್ಲಪ್ಪ ದಿಲೀಪ್ ಕಾಂಬಳೆ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

ಆ ಮಹಿಳೆಯನ್ನು ಲಾಡ್ಜ್‌ನಲ್ಲಿ ಇರಿಸಿಕೊಳ್ಳುವಲ್ಲಿ ಮತ್ತು ವೇಶ್ಯಾವಾಟಿಕೆ ಚಟುವಟಿಕೆಗೆ ಅನುವು ಮಾಡಿಕೊಡುವಲ್ಲಿ ಅಥಣಿಯ ಲಾಡ್ಜ್ ವ್ಯವಸ್ಥಾಪಕ ರಾಹುಲ್ ಮಡ್ಡಿ ಹಾಗೂ ಗುಂಡೇವಾಡಿಯ ಗಣೇಶ್ ಸಂಕಪಾಲ್ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿ ನಡೆಸಿದ ತಂಡದಲ್ಲಿ ವೃತ್ತ ನಿರೀಕ್ಷಕ ಸಂತೋಷ್ ಡಿ. ಹಲ್ಲೂರ್, ಮುಖ್ಯ ಪೇದೆ ಬಿ.ಆರ್. ಪಾಟೀಲ್, ಪೊಲೀಸ್ ಪೇದೆಗಳಾದ ವೈ.ಎಂ. ಮೇಟಿ ಮತ್ತು ಜಿ.ಪಿ. ರಾಠೋಡ್, ಮಹಿಳಾ ಪೊಲೀಸ್ ಪೇದೆ ಎಸ್.ಬಿ. ಖೋಟ್, ಪಂಚ ಸಾಕ್ಷಿದಾರರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Bisleri ನೀರು ಕೂಡ ಅಸುರಕ್ಷಿತ; ಅಪಾಯಕಾರಿ ರಾಸಾಯನಿಕಗಳಿದ್ದು ಕ್ಯಾನ್ಸರ್ ಕಾರಕ; ಕಾನೂನು ಕ್ರಮಕ್ಕೆ FSSAI ಅನುಮತಿ!

‘BJP-RSS ಸಂಸ್ಕಾರಹೀನ, ದುರಾಸೆ, ಜಾತಿವಾದಿ ಪುರುಷ ಪ್ರಧಾನ ಮನೋಭಾವ ಹೊಂದಿವೆ’: ರಾಹುಲ್ ಗಾಂಧಿ

'ಖಂಡಿತಾ ನಾವು ಸಂಕಷ್ಟದಲ್ಲಿದ್ದೇವೆ'; ಭಾರತದ ಬ್ಯಾಟಿಂಗ್ ಅಬ್ಬರಕ್ಕೆ ನ್ಯೂಜಿಲೆಂಡ್ ಕಂಗಾಲು, ಸೋಲಿನ ಭೀತಿ ಒಪ್ಪಿಕೊಂಡ ಕಿವೀಸ್ ಆಟಗಾರ!

ಭಾರತ-ಪಾಕಿಸ್ತಾನ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಮತ್ತು ವಿಪ್ರಜ್ ಡಿಕ್ಕಿ: ನೋವಿನಿಂದ ನರಳಾಡಿದ್ದ ಸ್ಫೋಟಕ ಬ್ಯಾಟರ್, Video!

ಬಹಿರಂಗವಾಗಿ ರಾಜಿನಾಮೆ ಪತ್ರ ಪ್ರದರ್ಶಿಸಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಆಕ್ರೋಶ!