ಮರದ ಮೇಲೆ ಚಿರತೆ 
ರಾಜ್ಯ

ತೆಂಗಿನ ಮರದ ಮೇಲೆ ಏರಿ ಚಿರತೆ ವಿಶ್ರಾಂತಿ: ನಾಯಿ, ಮನುಷ್ಯರ ಕಾಟ ತಾಳಲಾರದೇ ಮತ್ತೆ ಕಾಡಿನತ್ತ ಓಟ! Video

ತುಮಕೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ತೆಂಗಿನ ಮರದ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ ಚಿರತೆ ನಾಯಿಗಳು ಹಾಗೂ ಜನರ ಕೂಗಾಟದಿಂದ ಕಂಗೆಟ್ಟು ಬಳಿಕ, ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸುವ ಮುನ್ನವೇ..

ತುಮಕೂರು: ಆಹಾರ ಅರಸಿಕೊಂಡು ನಾಡಿಗೆ ಬಂದಿದ್ದ ಚಿರತೆಯೊಂದು ತೆಂಗಿನ ಮರ ವಿಶ್ರಾಂತಿ ಪಡೆಯುತ್ತಿದ್ದ ವಿಡಿಯೋವೊಂದು ವ್ಯಾಪಕ ವೈರಲ್ ಆಗಿದೆ.

ತುಮಕೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ತೆಂಗಿನ ಮರದ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ ಚಿರತೆ ನಾಯಿಗಳು ಹಾಗೂ ಜನರ ಕೂಗಾಟದಿಂದ ಕಂಗೆಟ್ಟು ಬಳಿಕ, ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸುವ ಮುನ್ನವೇ ಮರದಿಂದ ಜಿಗಿದು ಕಾಡಿನತ್ತ ಓಡಿ ಹೋಗಿದೆ.

ಚಿರತೆ ತೆಂಗಿನ ಮರ ಏರಿ ವಿಶ್ರಾಂತಿ ಪಡೆಯುತ್ತಿರುವ ವಿಡಿಯೋವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ತೆಂಗಿನ ಮರದ ಮೇಲೆ ಚಿರತೆ ಕಂಡ ಕೂಡಲೇ ಬೀದಿ ನಾಯಿಗಳು ಹಾಗೂ ಜನರು ಸುತ್ತುವರೆದಿದ್ದು, ಇದರಿಂದ ಗಾಬರಿಗೊಂಡ ಚಿರತೆ ಕೆಲ ಹೊತ್ತು ಮರದ ಮೇಲಿಂದಲೇ ತನ್ನ ಆಕ್ರೋಶ ಹೊರಹಾಕಿತು.

ಈ ನಡುವೆ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲು ಮುಂದಾದರಾದರೂ, ಅಷ್ಟರಲ್ಲೇ ಚಿರತೆ ಮರದಿಂದ ಜಿಗಿದು ಕಾಡಿನತ್ತ ಓಡಿ ಹೋಯಿತು.

ಚಿರತೆ ಕಂಡುಬಂದಾಗ ಜನರು ಅದರ ಸಮೀಪ ಹೋಗದೆ, ಅದಕ್ಕೆ ತೊಂದರೆ ನೀಡದೆ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರಿಗೆ ಸೂಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನನ್ನ ಪರ HDK ಏಕೆ ನಿಲ್ಲಬೇಕು?; 'ಸ್ಟಿಂಗ್ ಆಪರೇಷನ್' ಕಟ್ಟುಕಥೆ, ಬ್ಲ್ಯಾಕ್‌ಮೇಲ್ ಉದ್ದೇಶ; ನಿಷ್ಪಕ್ಷಪಾತ ತನಿಖೆಗೆ ಸಿದ್ದರಾಮಯ್ಯ ಆಗ್ರಹ; Video

ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಕರ್ನಾಟಕದ 600 ಯಾತ್ರಿಕರ ರಕ್ಷಣೆ: ಕೇಂದ್ರಕ್ಕೆ ಸಿಎಂ ಡಿ ಕೆ ಶಿವಕುಮಾರ್ ಮನವಿ

ಪೊಲೀಸ್ ನೋಟಿಸ್ ವಿರುದ್ಧ ನೇಹಾ ಬೋರಾ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ ನಲ್ಲಿ ವಜಾ

ಮನೆಗೆ ನುಗ್ಗಿ ಜೀವ ಬೆದರಿಕೆ: ಡಿಬಾಸ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ನಟ ಧನ್ವೀರ್‌ ತಂದೆಯಿಂದ ದೂರು!

ಸ್ಟಿಂಗ್ ಆಪರೇಷನ್: ರಾಕೇಶ್ ಶೆಟ್ಟಿಗೆ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ಮಂಜೂರು!