ಭೂಕಂಪನ (ಸಂಗ್ರಹ ಚಿತ್ರ) Online Desk
ರಾಜ್ಯ

ಬೆಳ್ಳಂಬೆಳಗ್ಗೆ ಕಂಪಿಸಿದ ಬೆಂಗಳೂರು! ದೊಡ್ಡಬಳ್ಳಾಪುರದಲ್ಲಿ ದಿಢೀರ್ ಭೂಕಂಪನ: ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆ ದಾಖಲು, ಆತಂಕ ಬೇಡ ಎಂದ ತಜ್ಞರು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಇಂದು ಬೆಳಗ್ಗೆ 9 ಗಂಟೆಗೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆ ದಾಖಲಾಗಿದೆ. ಆ ಕುರಿತ ಮಾಹಿತಿ ಇಲ್ಲಿದೆ:

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಇಂದು ಬೆಳಗ್ಗೆ 9 ಗಂಟೆ 1 ನಿಮಿಷ 59 ಸೆಕೆಂಡಿಗೆ ಲಘು ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆ ದಾಖಲಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮತ್ತು ರಾಷ್ಟ್ರೀಯ ಭೂಕಂಪನ ಕೇಂದ್ರವು (NCS) ಈ ಬಗ್ಗೆ ಅಧಿಕೃತವಾಗಿ ವರದಿಯ ಪ್ರಕಟಿಸಿದೆ. ಆ ಕುರಿತ ಮಾಹಿತಿ ಇಲ್ಲಿದೆ:

KSNDMC ಮತ್ತು NCS ಕೇಂದ್ರದ ಪ್ರಕಾರ, ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮೋಜನಹಳ್ಳಿ ಗ್ರಾಮದಿಂದ ಸುಮಾರು 500 ಮೀಟರ್ ಉತ್ತರಕ್ಕೆ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ. ಇದರ ಆಸುಪಾಸಿನಲ್ಲಿ ನರಗಾನಹಳ್ಳಿ ಮತ್ತು ಕರ್ನಾಲ ಗ್ರಾಮಗಳಿವೆ. ಅದರಂತೆ, ಭೂಮಿಯ ಮೇಲ್ಮೈನಿಂದ ಸುಮಾರು 10 ಕಿಲೋಮೀಟರ್ ಆಳದಲ್ಲಿ ಈ ಭೂಕಂಪನ ಸಂಭವಿಸಿದ್ದು, ಕೇಂದ್ರ ಬಿಂದುವಿನಿಂದ ಸುಮಾರು 20 ರಿಂದ 30 ಕಿಲೋಮೀಟರ್ ವ್ಯಾಪ್ತಿಯಲ್ಲಿ ಲಘು ಕಂಪನದ ಅನುಭವವಾಗಿದೆ. ಹಾಗಾಗಿ, ಕೆಲವೇ ಸೆಕೆಂಡುಗಳ ಕಾಲ ಸ್ಥಳೀಯವಾಗಿ ಸಣ್ಣ ಪ್ರಮಾಣದ ನಡುಕ ಉಂಟಾಗಿದ್ದರಿಂದ ನಿವಾಸಿಗಳಲ್ಲಿ ಕೆಲಕಾಲ ಆತಂಕ ಮೂಡಿತ್ತು. ಅದೃಷ್ಟವಶಾತ್, ಈ ಭೂಕಂಪನದ ತೀವ್ರತೆ ತೀರಾ ಕಡಿಮೆಯಾಗಿದ್ದರಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟ ಸಂಭವಿಸಿಲ್ಲ.

ಆತಂಕ ಬೇಡ ಎಂದ ಅಧಿಕಾರಿಗಳು

ಮುಂದುವರೆದು, ಈ ಪ್ರದೇಶವು ಅತ್ಯಂತ ಕಡಿಮೆ ಭೂಕಂಪನ ಅಪಾಯವಿರುವ ಭೂಕಂಪ ವಲಯ-2 ವ್ಯಾಪ್ತಿಗೆ ಬರುವುದರಿಂದ ಹಾಗೂ ಯಾವುದೇ ಆಂತರಿಕ ಭೂವೈಜ್ಞಾನಿಕ ತೊಂದರೆಗಳು ಕಂಡುಬರದೇ ಇರುವುದರಿಂದ ಸಾರ್ವಜನಿಕರು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡದೆ ಧೈರ್ಯವಾಗಿರಬೇಕು ಎಂದು KSNDMC ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪುತ್ತೂರು ಟಿಕೆಟ್ ಪಡೆಯಲು ಬ್ಲ್ಯಾಕ್‌ಮೇಲ್‌ ಯತ್ನ: ಸಿದ್ದರಾಮಯ್ಯ ಸ್ಟಿಂಗ್ ನಲ್ಲಿ ಕಾಂಗ್ರೆಸ್ ನವರ ಕೈವಾಡ; ಯತೀಂದ್ರ ಹೊಸ ಬಾಂಬ್

ಸ್ಟಿಂಗ್ ಮಾಡಿರೋನು ಡಿಕೆಶಿ ಬಲಗೈ ಬಂಟ: ಖಾಸಗಿ ಮಾಧ್ಯಮದ ಮುಖ್ಯಸ್ಥನ ಜೊತೆ ಕೆಲಸ ಮಾಡುತ್ತಿದ್ದ ವಿಕ್ಕಿ ಎಂಬ ವ್ಯಕ್ತಿ ಅನುಮಾನಾಸ್ಪದ ಸಾವು; HDK

ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ನಿವಾಸ, ದಿಲ್ಜಿತ್ ದೋಸಾಂಜ್ ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಸ್ಫೋಟದ ಬೆದರಿಕೆ! ಇಮೇಲ್ ಸಂದೇಶ

ಜಂಬೂ ಸವಾರಿಗೆ ಪುಷ್ಪಾರ್ಚನೆ ಪ್ರೋಟೋಕಾಲ್‌ನಲ್ಲಿ ಸಿಎಂ ಪತ್ನಿ ಹೆಸರು ಇರಲಿಲ್ಲ: ಶಿಷ್ಟಾಚಾರ ಉಲ್ಲಂಘನೆಯಾದ್ರೂ ತಪ್ಪೇನಿಲ್ಲ; ಯತೀಂದ್ರ

ಚುನಾವಣಾ ಆಯೋಗದೊಳಗೆ ತೀವ್ರ ಮುಸುಕಿನ ಗುದ್ದಾಟ: ಉಪ ಚುನಾವಣಾ ಆಯುಕ್ತರ ವಿರುದ್ಧ ಕ್ಯಾಬಿನೆಟ್ ಕಾರ್ಯದರ್ಶಿಗೆ ದೂರು ನೀಡಿದ ಆಯುಕ್ತರು, ಕೇಂದ್ರ ಹೇಳಿದ್ದೇನು?