ನೀರಿನ ಕ್ಲೀನ್ ಮಾಡುವ ವೇಳೆ ವ್ಯಕ್ತಿಗೆ ವಿದ್ಯುತ್ ಶಾಕ್ 
ರಾಜ್ಯ

ಮೈಸೂರಿನಲ್ಲಿ ದುರಂತ: ನೀರಿನ ಪಂಪ್‌ ಸ್ವಚ್ಛಗೊಳಿಸುವಾಗ ವಿದ್ಯುತ್‌ ಶಾಕ್‌, ರಾಜಸ್ಥಾನ ಮೂಲದ ಯುವಕ ಸಾವು,Video

ಮೃತ ಯುವಕನನ್ನು ರಾಜಸ್ಥಾನ ಮೂಲದ ಪ್ರಕಾಶ್‌ ಎಂದು ಗುರುತಿಸಲಾಗಿದ್ದು, ಆತ ಬೈಲಕುಪ್ಪೆಯಲ್ಲಿ ಹಾರ್ಡ್‌ವೇರ್‌ ಅಂಗಡಿ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.

ಮೈಸೂರು: ನೀರಿನ ಪಂಪ್‌ ಸ್ವಚ್ಛಗೊಳಿಸುತ್ತಿದ್ದಾಗ ವಿದ್ಯುತ್‌ ಶಾಕ್‌ಗೆ ಒಳಗಾಗಿ 27 ವರ್ಷದ ಯುವಕ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಪಟ್ಟಣದಲ್ಲಿ ನಡೆದಿದೆ.

ಮೃತ ಯುವಕನನ್ನು ರಾಜಸ್ಥಾನ ಮೂಲದ ಪ್ರಕಾಶ್‌ ಎಂದು ಗುರುತಿಸಲಾಗಿದ್ದು, ಆತ ಬೈಲಕುಪ್ಪೆಯಲ್ಲಿ ಹಾರ್ಡ್‌ವೇರ್‌ ಅಂಗಡಿ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ನೀರಿನ ಪಂಪ್‌ ಸ್ವಚ್ಛಗೊಳಿಸುತ್ತಿದ್ದಾಗ ಅರ್ಥಿಂಗ್‌ ದೋಷದಿಂದ ಪ್ರಕಾಶ್‌ಗೆ ವಿದ್ಯುತ್‌ ಪ್ರವಹಿಸಿದೆ. ಇದರಿಂದ ಅವರು ನೀರಿನಲ್ಲಿ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಬೈಲಕುಪ್ಪೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ವಿಡಿಯೋ ವೈರಲ್

ಇನ್ನು ನೀರಿನ ಕ್ಲೀನ್ ಮಾಡುವ ವೇಳೆ ವ್ಯಕ್ತಿಗೆ ವಿದ್ಯುತ್ ಶಾಕ್ ಆದ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗಡಿಯಲ್ಲಿ ಚೀನಾ ಕ್ಯಾತೆ: ITBP ಮಹಾನಿರ್ದೇಶಕರ ಹೇಳಿಕೆ ತೀವ್ರ ಆತಂಕಕಾರಿ: ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಮತ್ತೆ ಚೀನಾ ಕ್ಯಾತೆ, ಗಲ್ವಾನ್ ರೀತಿಯ ಸಂಘರ್ಷ; ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯೊಂದಿಗೆ ಮತ್ತೆ ಮುಖಾಮುಖಿ?

ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್‌ ಅಲರ್ಟ್‌: ಅ.31ರೊಳಗೆ ಪರಿಶೀಲನೆ ಪೂರ್ಣಗೊಳಿಸಿ, ಗಡುವು ವಿಸ್ತರಣೆ ಇಲ್ಲ!

ಹುಬ್ಬಳ್ಳಿ ಮಹಿಳೆ ಕತ್ತು ಸೀಳಿದ ಮಾಂಜಾದಾರ: 'ಮನರಂಜನೆಗಾಗಿ ಮತ್ತೊಬ್ಬರ ಜೀವದ ಜೊತೆ ಆಟವಾಡಬೇಡಿ': DCM ಪರಮೇಶ್ವರ್ ಖಡಕ್ ಎಚ್ಚರಿಕೆ

ಬೆಂಗಳೂರಿಗರಿಗೆ ಗುಡ್‌ನ್ಯೂಸ್‌: ಕಬ್ಬನ್ ಪಾರ್ಕ್‌, ಲಾಲ್‌ಬಾಗ್‌ ಮಾದರಿಯಲ್ಲಿ ಬೆಂಗಳೂರಿನಲ್ಲಿ 15 ಹೊಸ ಟ್ರೀ ಪಾರ್ಕ್‌!