ಆರೋಪಿ ಸೂರ್ಯ 
ರಾಜ್ಯ

ಬೆಂಗಳೂರಿನಲ್ಲಿ 5 ತಿಂಗಳು ಲಿವಿಂಗ್ ರಿಲೇಷನ್‌ಶಿಪ್‌, ಬಳಿಕ ಎಸ್ಕೇಪ್; ಬಾಯ್ ಫ್ರೆಂಡ್ ಮನೆ ಮುಂದೆ ಯುವತಿ ಧರಣಿ!

ಸೂರ್ಯ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ, ಈಗ ಮೋಸ ಮಾಡಿ ಪರಾರಿಯಾಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.

ಹಾಸನ: ಪರಸ್ಪರ ಪ್ರೀತಿಸುತ್ತಿದ್ದ ಮತ್ತು ಕಳೆದ ಐದು ತಿಂಗಳುಗಳಿಂದ ಬೆಂಗಳೂರಿನಲ್ಲಿ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದು, ಬಳಿಕ ಪರಾರಿಯಾಗಿರುವ ಬಾಯ್ ಫ್ರೆಂಡ್ ಮನೆ ಮುಂದೆ ಯುವತಿಯೊಬ್ಬರು ಧರಣಿ ನಡೆಸುತ್ತಿದ್ದಾರೆ.

ಕಾಸರಗೋಡು ಮೂಲದ ಯುವತಿ ಮತ್ತು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಲ್ಲೇಸೋಮನಹಳ್ಳಿ ಗ್ರಾಮದ ಸೂರ್ಯ ಎಂಬುವವರು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು.

ಸೂರ್ಯ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ, ಈಗ ಮೋಸ ಮಾಡಿ ಪರಾರಿಯಾಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.

ಯುವತಿ ಅನ್ಯ ಜಾತಿಯವಳು ಮತ್ತು ಬೇರೆ ರಾಜ್ಯದವಳು ಎಂಬ ಕಾರಣಕ್ಕೆ ಸೂರ್ಯನ ಪೋಷಕರು, ಇವರ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇದೀಗ ಮೋಸ ಹೋದ ಯುವತಿ ಕಲ್ಲೇಸೋಮನಹಳ್ಳಿ ಗ್ರಾಮದಲ್ಲಿರುವ ಸೂರ್ಯನ ಮನೆಯ ಮುಂಭಾಗದಲ್ಲಿಯೇ ಧರಣಿ ಮಾಡುತ್ತಿದ್ದಾರೆ.

ಈ ಹಿಂದೆ ನ್ಯಾಯ ಸಿಗದಿದ್ದಾಗ ಯುವತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ, ಈಗ ಹಗಲು-ರಾತ್ರಿ ಎನ್ನದೇ ಪ್ರಿಯಕರನ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ವಿಷಯವಾಗಿ ಅಕ್ಟೋಬರ್ 22 ರಂದು ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸರು ಎರಡೂ ಕಡೆಯವರನ್ನು ಠಾಣೆಗೆ ಕರೆಸಿ ಮಾತುಕತೆ ನಡೆಸಿದ್ದರು. ಭಾನುವಾರ ಠಾಣೆಗೆ ಬರುವುದಾಗಿ ಹೇಳಿದ್ದ ಸೂರ್ಯನ ಪೋಷಕರು, ಈಗ ಮನೆಗೆ ಬೀಗ ಹಾಕಿ ಎಸ್ಕೇಪ್ ಆಗಿದ್ದಾರೆ.

ಯುವತಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ. ಪ್ರಿಯಕರ ಸೂರ್ಯ ಸಹ ಗಾಯಿತ್ರಿ ಸಂಪರ್ಕಕ್ಕೆ ಸಿಗದೇ ಎಸ್ಕೇಪ್ ಆಗಿದ್ದಾರೆ.

ಲಿವ್ ಇನ್ ರಿಲೇಶನ್‌ಶಿಪ್‌ ನಲ್ಲಿರೋ ವಿಷಯ ಸೂರ್ಯನ ತಂಗಿಗೂ ಗೊತ್ತಿತ್ತು. ಆಕೆಯೂ ನಮ್ಮೊಂದಿಗೆ ಮೂರು ತಿಂಗಳು ಇದ್ದಳು. ತಂಗಿ ಮದುವೆ ನಂತರ ಮದುವೆಯಾಗುವಂತೆ ಸೂರ್ಯನಿಗೆ ಆತನ ಪೋಷಕರು ಹೇಳಿದ್ದರು ಎಂದು ಮೋಸ ಹೋದ ಯುವತಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಸಭೆಗೂ ಮುನ್ನ ಬೆಳಗಾವಿಯ ಸುವರ್ಣ ಸೌಧದಲ್ಲಿ ಪರಸ್ಪರ ಹೊಡೆದಾಡಿಕೊಂಡ ರೈತ ಮುಖಂಡರು; ಇಬ್ಬರಿಗೆ ಗಾಯ: Video

ಸಿಎಂ ಶಿವಕುಮಾರ್, ಝೈದ್ ಖಾನ್‌ಗೆ ಅವಮಾನ: ಧನ್ವೀರ್ ವಿರುದ್ಧ NSUI ದೂರು, ಅಭಿಮಾನಿಗಳಿಂದ ಪ್ರತಿಭಟನೆ!

ಕೋಲ್ಕತ್ತಾ: ಗೆಳತಿಗೆ ಕಿಸ್ ಮಾಡಿದ್ದಕ್ಕೆ ಬಾಲಕ, ಆತನ ತಂದೆಗೆ ಬೆತ್ತಲೆ ಮೆರವಣಿಗೆ: ಗನ್‌ಪಾಯಿಂಟ್‌ನಲ್ಲಿ ಅಮಾನವೀಯ ಕೃತ್ಯ!

ದೇಶದಲ್ಲಿ E100 ಎಥೆನಾಲ್ ಫ್ಲೆಕ್ಸ್‌–ಫ್ಯುಯೆಲ್‌ ಕಾರುಗಳಿಗೆ ಗ್ರೀನ್ ಸಿಗ್ನಲ್: ನಿಯಮಗಳಲ್ಲಿ ಕೇಂದ್ರದಿಂದ ಮಹತ್ವದ ಬದಲಾವಣೆ!

ಮಹಡಿ ಮೇಲಿಂದ ಗುಟ್ಕಾ ಉಗುಳುವಾಗ ವಿದ್ಯುತ್ ಅವಘಡ; 11 ಕೆವಿ ತಂತಿ ತಗುಲಿ 65 ವರ್ಷದ ವ್ಯಕ್ತಿ ಸಾವು